ಭಾಲ್ಕಿ: ‘ಪಟ್ಟಣದ ಚನ್ನಬಸವಾಶ್ರಮದಲ್ಲಿ ಏ.20ರಿಂದ ನಡೆಯುವ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ-2026, ಡಾ.ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ, ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಅಂಗವಾಗಿ ಎಲ್ಲ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುವುದು’ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಮೂರು ದಿನಗಳ ಕಾಲ ನಡೆಯುವ ವಿಭಿನ್ನ, ವಿಶೇಷ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಂಡು ಶೋಭೆ ತರಬೇಕು’ ಎಂದು ತಿಳಿಸಿದರು.

ಮೆರವಣಿಗೆ ಸಮಿತಿ ಅಧ್ಯಕ್ಷ ಯೋಗೇಶ ಅಷ್ಟೂರೆ ಮಾತನಾಡಿ, ‘ಏ.18ರಂದು ಪಟ್ಟಣದ ಚನ್ನಬಸವಾಶ್ರಮದಿಂದ ಮುಂಜಾನೆ 10 ಗಂಟೆಗೆ ಹೊರಡುವ ಬೈಕ್ ಮತ್ತು ಕಾರ್ ರ್ಯಾಲಿಗೆ ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಸಂಸದ ಸಾಗರ್ ಖಂಡ್ರೆ, ಯುವನಾಯಕ ಪ್ರಸನ್ನ ಖಂಡ್ರೆ ಚಾಲನೆ ನೀಡಲಿದ್ದಾರೆ. ರ್ಯಾಲಿಯು ಪಟ್ಟಣದ ಪ್ರಮುಖ ವೃತ್ತಗಳು ಸೇರಿದಂತೆ ಹಳೇ ಭಾಲ್ಕಿಯ ವಿವಿಧ ಓಣಿಗಳ ಮೂಲಕ ಸಂಚರಿಸಿ ಪುನ: ಚನ್ನಬಸವಾಶ್ರಮದಲ್ಲಿ ಸಮಾವೇಶಗೊಳ್ಳುವುದು. ಏ.20ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಭವ್ಯ ಮೆರವಣಿಗೆಯು ಹಿರೇಮಠ ಸಂಸ್ಥಾನದಿಂದ ಆರಂಭಗೊಂಡು ಪ್ರಮುಖ ಚೌಕ್ಗಳ ಮೂಲಕ ಸಾಗಿ ಚನ್ನಬಸವಾಶ್ರಮದಲ್ಲಿ ಸಮಾವೇಶಗೊಳ್ಳುವುದು. ಮೆರವಣಿಗೆಗೆ ಪೂನಾದ ಢೋಲ್ ಬಾರಿಸುವ ಕಲಾವಿದರನ್ನು ಕರೆಸಲಾಗುತ್ತಿದೆ’ ಎಂದು ತಿಳಿಸಿದರು.

ಡಾ.ಸಜ್ಜಲ ಬಳತೆ ಮಾತನಾಡಿ, ‘ಏ.19 ರಂದು ಮುಂಜಾನೆ 10 ಗಂಟೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಆರ್ಥೊ, ಡೆಂಟಲ್ ಸೇರಿದಂತೆ 6 ನುರಿತ ವೈದ್ಯರಿಂದ ಚಿಕಿತ್ಸೆ ನೀಡಿ ಉಚಿತ ಔಷಧ ವಿತರಿಸಲಾಗುತ್ತಿದೆ. ಅದೇ ದಿನ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಮುಖರಾದ ಶಿವು ಲೋಖಂಡೆ, ಡಾ.ಅಮಿತ್ ಅಷ್ಟೂರೆ, ಡಾ.ಅನಿಲ್ ಸುಕಾಳೆ, ಜೈರಾಜ ಪಾತ್ರೆ, ಪ್ರಕಾಶ ಮಾಶೆಟ್ಟೆ, ಆಕಾಶ ರಿಕ್ಕೆ, ಟಿಂಕು ರಾಜಭವನ, ಮಹಾಂತೇಶ ದಶಮುಖೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-33-1589207366

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.