ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ದಿನದಿಂದ ದಿನಕ್ಕೆ ಸೂರ್ಯನ ಶಾಖದ ಪ್ರಖರತೆ ಹೆಚ್ಚಾಗುತ್ತಿದೆ. ಜನರು ಶಾಖದ ಹೊಡೆತದಿಂದ ದೇಹ ತಂಪಾಗಿರಿಸಲು ಮಣ್ಣಿನ ಮಡಕೆಗಳ ಖರೀದಿಗೆ ಮುಂದಾಗುತ್ತಿದ್ದಾರೆ.

ಕುಂಬಾರಿಕೆ ವೃತ್ತಿಯನ್ನೇ ಮೆಚ್ಚಿಕೊಂಡು ಜೀವನ ಸಾಗುತ್ತಿರುವ ಕುಂಬಾರರಿಗೆ ಮಣ್ಣಿನ ಮಡಕೆಗಳ ಮಾರಾಟದಿಂದ ದೊರೆಯುವ ಅಲ್ಪಸ್ವಲ್ಪ ಹಣವೇ ಬದುಕಿನ ಬಂಡಿ ನಡೆಸಲು ಆಸರೆಯಾಗುತ್ತಿದೆ.

ಮಾರ್ಚ್ 2ನೇ ವಾರದಿಂದ ಬಿಸಿಲಿನ ತೀವ್ರತೆ ಏರಿಕೆಯಾಗುತ್ತಿದೆ. ಇದರಿಂದ ಜನರು ಸಹಜವಾಗಿ ಮಡಕೆಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಬಡ, ಮಧ್ಯಮ ವರ್ಗದ ಜನರ ಫ್ರಿಡ್ಜ್ ಎಂದು ಕರೆಯಿಸಿಕೊಳ್ಳುವ, ನೈಸರ್ಗಿಕವಾಗಿ ನೀರು ತಂಪಾಗಿಸುವ ಮಣ್ಣಿನ ಮಡಕೆಗಳಿಗೆ ಬೇಡಿಕೆ ಹೆಚ್ಚಾಗಿತ್ತಿದೆ.

‘ನಮ್ಮಲ್ಲಿ ₹150 ರಿಂದ ₹400 ವರೆಗಿನ ನಳ ಹೊಂದಿರುವ ಮಡಕೆಗಳು, ಸಣ್ಣ ಹೂಜಿಗಳು ಮತ್ತು ಮಣ್ಣಿನ ಜಗ್ಗಳು ಸಿಗುತ್ತದೆ. ಈ ಹಿಂದೆ ಮಡಕೆಗಳು ಮನುಷ್ಯನ ಜೀವನದ ಅವಿಭಾಜ್ಯ ಅಂಗ ಎನ್ನುವಂತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಆಧುನೀಕತೆಯ ಭರಾಟೆಯಲ್ಲಿ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಫೈಬರ್ಗಳಿಂದ ಮಡಕೆಗಳ ಬೇಡಿಕೆ ಗೌಣವಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಸ್ಥಳೀಯ ವ್ಯಾಪಾರಿ.

ಮಡಕೆ ಮಾರಾಟ ದಿಂದ ಬರುವ ಅಲ್ಪ ಆದಾಯ ನಡುವೆ ವೃತ್ತಿ ಸಾಗಿಸಬೇಕಾಗಿದೆ. ಆರೋಗ್ಯದ ದೃಷ್ಟಿಯಿಂದ ಫ್ರಿಡ್ಜ್ ಬದಲಾಗಿ ಬಡವರ ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವುದು ತುಂಬಾ ಒಳ್ಳೆಯದು. ಮಡಕೆಯಲ್ಲಿ ನೀರು ಕುಡಿದರೆ ಶೀತ, ಕೆಮ್ಮು ಬರುವುದಿಲ್ಲ ಎನ್ನುತ್ತಾರೆ ಹಿರಿಯರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-33-270314367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.