ಭಾಲ್ಕಿ: ಕಬ್ಬು ಬೆಳೆಗಾರರು ಗೌರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಿ ನಾಲ್ಕು ತಿಂಗಳು ಪೂರ್ಣಗೊಂಡಿವೆ. ಆದರೆ ಕಬ್ಬು ಪೂರೈಸಿದ ರೈತರ ಖಾತೆಗೆ ಇದುವರೆಗೂ ಬಾಕಿ ಹಣ ಪಾವತಿಸಿಲ್ಲ, ಶೀಘ್ರವೇ ಹಣ ನೀಡದಿದ್ದರೇ ರೈತರೊಂದಿಗೆ ಸೇರಿ ಕಾರ್ಖಾನೆಗೆ ಬೀಗ ಜಡಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನ ಬಾಜೋಳಗಾ ಕ್ರಾಸ್ ಸಮೀಪದ ಗೌರಿ ಸಕ್ಕರೆ ಕಾರ್ಖಾನೆಗೆ ರೈತರೊಂದಿಗೆ ಶನಿವಾರ ಭೇಟಿ ನೀಡಿ ಸಾಂಕೇತಿಕ ಧರಣಿ ನಡೆಸಿ ಅವರು ಮಾತನಾಡಿದರು.

ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅವರು ಇದುವರೆಗೂ ಬಾಕಿ ಹಣ ನೀಡಿಲ್ಲ, ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ನಿಗದಿ ಪಡಿಸಿದ ಬಾಕಿ ಹಣ ನೀಡಬೇಕು. ಸದ್ಯದಲ್ಲೇ ಕಬ್ಬು ಬೆಳೆಗಾರರ ಖಾತೆಗೆ ಬಾಕಿ ಉಳಿದಿರುವ ಹಣ ಜಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಕೈಬಿಡುತ್ತಿದ್ದೇವೆ. ವಿಳಂಬ ಮಾಡಿದರೇ ಮುಂದಿನ ವಾರ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ರೈತ ಸಂಘದ ಪ್ರಮುಖರಾದ ಮಲ್ಲಿಕಾರ್ಜುನ ಬಿರಾದಾರ, ನಾಗಶೆಟ್ಟೆಪ್ಪ ಲಂಜವಾಡೆ, ರುದ್ರಯ್ಯ ಸ್ವಾಮಿ, ಕಾಶಿನಾಥ ಬಿರಾದಾರ, ವಿಶ್ವನಾಥ ಧನ್ನೂರೆ, ಸುರೇಶ ಅಲ್ಲೂರೆ, ಶರಣಯ್ಯ ಸ್ವಾಮಿ, ಸುಭಾಷ, ಬಸವರಾಜ ಪಾಟೀಲ, ರಾಜಕುಮಾರ ಬಾಲಕುಂದೆ, ಹಣಮಂತಪ್ಪ ಘಾಲೆ, ದಿಲೀಪ ಬಿರಾದಾರ, ಸಿದ್ರಾಮ ಶೆಟಕಾರ, ವೀರಾರೆಡ್ಡಿ ಪಾಟೀಲ, ಶಿವಶಂಕರ ಬಿರಾದಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-33-1281848849

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.