ಭಾಲ್ಕಿ (ಬೀದರ್ ಜಿಲ್ಲೆ): ಪಟ್ಟಣದ ಗುರು ಕಾಲೊನಿಯಲ್ಲಿ ಶನಿವಾರ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಸುಮಾರು 6.5 ತೊಲೆ ಬಂಗಾರ, 1 ಲಕ್ಷ ನಗದು ಕಳುವಾಗಿದೆ.

ಇನ್ನೊಂದು ಮನೆಯ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ.

ಸುನಿತಾ ಹನುಮಂತ ಕಟಗೆ ಅವರು ಮನೆಯ ಮೇಲಿನ ತಗಡದ ಪತ್ರಗಳು ಹಾರುವ ಭಯದಿಂದ ಪಕ್ಕದ ಕೋಣೆಯಲ್ಲಿ ಮಲಗಿದ್ದಾಗ ಇನ್ನೊಂದು ಕೋಣೆಯ ಬೀಗ ಮುರಿದು 6 ತೊಲೆ ಬಂಗಾರ, 1 ಲಕ್ಷ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

ಯೋಗೇಶ ಶಿವಕಾಂತ ಹಿರೇಮಠ ಕುಟುಂಬಸ್ಥರು ಸಂಬಂಧಿಕರು ನಿಧನ ಹೊಂದಿದ್ದಕ್ಕಾಗಿ ಅನ್ಯ ಊರಿಗೆ ತೆರಳಿದ್ದರು. ಹಾಗಾಗಿ, ಮನೆಯಲ್ಲಿ ಯಾರು ಇರಲಿಲ್ಲ. ಈ ವೇಳೆ ಕಳ್ಳರು ಇವರ ಮನೆಯಿಂದ 5 ಗ್ರಾಂ. ಬಂಗಾರ ಕದ್ದೊಯ್ದಿದ್ದಾರೆ.

ಕಳ್ಳತನ ನಡೆದ ಮನೆಗಳಿಗೆ ಬೆರಳಚ್ಚು ತಜ್ಞರ ತಂಡ, ಪೊಲೀಸ್ ಶ್ವಾನತಂಡ, ಡಿವೈಎಸ್ಪಿ ಬಲಪ್ಪ ನಂದಗಾವಿ ಭೇಟಿ ನೀಡಿ, ಕಳ್ಳರ ಪತ್ತೆಗಾಗಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.