ಭಾಲ್ಕಿ: ಡಾ.ಅಂಬೇಡ್ಕರ್, ಮಹಾತ್ಮ ಬಸವೇಶ್ವರರ ಜಯಂತಿ ಮಹೋತ್ಸವದಲ್ಲಿ ಸಾರಾಯಿ ನಿಷೇಧ ಮಾಡಿ, ಶಾಂತತೆ ಕಾಪಾಡಿಕೊಳ್ಳಬೇಕು ಎಂದು ಗ್ರಾಮೀಣ ಪೊಲೀಸ್ ವೃತ್ತದ ಸಿಪಿಐ ಹನುಮರೆಡ್ಡಿ ತಿಳಿಸಿದರು.

ಪಟ್ಟಣದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಡಾ.ಅಂಬೇಡ್ಕರ್ ಜಯಂತಿ, ವಿಶ್ವಗುರು ಬಸವಣ್ಣನವರ ಜಯಂತಿ ಮಹೋತ್ಸವ ನಿಮಿತ್ತ ಅಬಕಾರಿ ಇಲಾಖೆಯ ಸಹಯೋಗದೊಂದಿಗೆ ಸೋಮವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

‘ಮಹಾಪುರುಷರ ಜಯಂತಿ ಮಹೋತ್ಸವಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ವೈನ್ಶಾಪ್, ಬಾರ್ ಮತ್ತು ರೆಸ್ಟೋ ರೆಂಟ್, ಡಾಬಾ ಮಾಲೀಕರ ಶಾಂತಿಸಭೆ ಕರೆಯಲಾಗಿದೆ. ಮಹಾಪುರುಷರ ಜಯಂತಿ ಮುಗಿಯುವವರೆಗೆ ಪ್ರತಿನಿತ್ಯ ರಾತ್ರಿ 10 ಗಂಟೆಯವರೆಗೆ ಮಾತ್ರ ವೈನ್ಶಾಪ್, ಹೋಟೆಲ್ ಮುಂಗಟ್ಟುಗಳನ್ನು ತೆರೆದಿಡಬೇಕು. ರಾತ್ರಿ 10 ಗಂಟೆಯ ನಂತರ ಕಡ್ಡಾಯವಾಗಿ ತಮ್ಮ ಅಂಗಡಿ ಮತ್ತು ಹೊಟೇಲ್ಗಳಿಗೆ ಬೀಗ ಹಾಕಬೇಕು’ ಎಂದು ತಿಳಿಸಿದರು.

‘ಡಾಬಾಗಳಲ್ಲಿ ಸಾರಾಯಿ ಕುಡಿಯಲು ಆಸ್ಪದ ನೀಡಬಾರದು. ಎಲ್ಲ ಹೊಟೇಲ್ಗಳಲ್ಲಿಯೂ ಸಿಸಿಟಿವಿ ಅಳವಡಿಸಬೇಕು. ಮಹಾಪುರುಷರ ಜಯಂತಿ ಮುಗಿಯುವರೆಗೆ ಸರಾಯಿ ನಿಷೇಧಿಸಲಾಗಿದೆ. ಹೋಟೆಲ್ ಮಾಲೀಕರು ಸರಾಯಿ ಕುಡಿಯಲು ಆಸ್ಪದ ಕೊಟ್ಟರೆ ಅವರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ಹೂಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಒಟ್ಟಿನಲ್ಲಿ ಮಹಾಪುರಷರ ಜಯಂತಿ ಸಮಯದಲ್ಲಿ ಅಹಿತಕರ ಘಟನೆ ನಡೆಯದಂತೆ ಶಾಂತತೆ ಕಾಪಾಡಿಕೊಂಡು ಹೋಗಬೇಕು’ ಎಂದು ಮನವಿ ಮಾಡಿದರು.

ಗ್ರಾಮೀಣ ಠಾಣೆ ಪಿಎಸ್ಐ ಅಶೋಕ ಪಾಟೀಲ, ಮೆಹಕರ ಪೊಲೀಸ್ ಠಾಣೆಯ ಪಿಎಸ್ಐ ಸುದರ್ಶನ ರೆಡ್ಡಿ, ಖಟಕಚಿಂಚೋಳಿ ಠಾಣೆ ಪಿಎಸ್ಐ ಪ್ರಭಾಕರ ಪಾಟೀಲ, ಧನ್ನೂರ ಠಾಣೆಯ ಪಿಎಸ್ಐ ರಾಜಕುಮಾರ ಜಾಮಗೊಂಡ ಸೇರಿದಂತೆ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-33-971436551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.