ಭಾಲ್ಕಿ: ‘ಧರ್ಮದ ಪಾಲನೆಯಿಂದ ಸಮಾಜದಲ್ಲಿ ಶಾಂತಿ, ಸಹೋದರತೆ, ನೆಮ್ಮದಿ ನೆಲೆಸುತ್ತದೆ’ ಎಂದು ಬಿಜೆಪಿ ಮುಖಂಡರೂ ಆದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.

ತಾಲ್ಲೂಕಿನ ಡೋಣಗಾಪುರ ಗ್ರಾಮದ ಡೋಣೇಶ್ವರ ದೇವಸ್ಥಾನದಲ್ಲಿ ನಡೆದ ಡೋಣೇಶ್ವರರ ಮಹಾಪೂಜಾ ಮಹೋತ್ಸವ ಮತ್ತು ವಿಶ್ವಶಾಂತಿಗಾಗಿ 44ನೇ ಜಪಯಜ್ಞ ಹಾಗೂ ಪ್ರಯೋಗಾತ್ಮಕ ಧರ್ಮಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಧರ್ಮದ ನಡೆ ಯಾವಾಗಲೂ ಪ್ರಗತಿಯ ಕಡೆ ಸಾಗುತ್ತದೆ. ಈ ದಿಸೆಯಲ್ಲಿ ಡೋಣಗಾಪುರದ ರಾಜೇಶ್ವರ ಶಿವಾಚಾರ್ಯರು ಹಮ್ಮಿಕೊಳ್ಳುವ ಧರ್ಮಾಧರಿತ ಕಾರ್ಯಗಳು ಪೂರಕವಾಗಿವೆ’ ಎಂದು ತಿಳಿಸಿದರು.

‘ಯುವಶಕ್ತಿ ಹಣ ಮತ್ತು ಪ್ರೇಮದ ಮೋಹಕ್ಕಾಗಿ ದಾರಿ ತಪ್ಪುತ್ತಿದೆ. ಸಮಾಜವನ್ನು ಸರಿ ದಾರಿಗೆ ತರುವಲ್ಲಿ ಮಠಾಧೀಶರ ಪಾತ್ರ ಶ್ರೇಷ್ಠವಾಗಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಹೇಮಾವತಿ ಪಾಟೀಲ ಧರ್ಮದ ಆಚರಣೆ ಕುರಿತು ಮಾತನಾಡಿದರು.

ರಾಜೇಶ್ವರ ಶಿವಾಚಾರ್ಯರು, ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿದರು. ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ, ಪ್ರಮುಖರಾದ ಸುಭಾಷರಾವ್ ಬಿರಾದಾರ, ಬಾಬುರಾವ್ ಧೂಪೆ, ರಾಜಶೇಖರ ಚಿದ್ರಿ, ಶಾಂತವೀರ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-33-1221405801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.