ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆಯನ್ನು ಸಂಸದ ಸಾಗರ್ ಖಂಡ್ರೆ ನೆರವೇರಿಸಿದರು.

ಇಂಚೂರ್ ಗ್ರಾಮದಲ್ಲಿ ₹9 ಕೋಟಿ ಮೌಲ್ಯದ ರಸ್ತೆ ಸುಧಾರಣೆ, ಕೊಂಗಳಿ ಗ್ರಾಮದಲ್ಲಿ ₹2 ಕೋಟಿ ವೆಚ್ಚದಲ್ಲಿ ಎರಡು ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ ಹಾಗೂ ಮೇಹಕರ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ₹2 ಕೋಟಿ ಮೌಲ್ಯದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಿದರು.

ನಂತರ ಮಾತನಾಡಿದ ಸಂಸದ ಸಾಗರ್ ಖಂಡ್ರೆ, ‘ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಸ್ತೆ, ಸೇತುವೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳು ಅತ್ಯಂತ ಮುಖ್ಯ. ಇದರಿಂದ ಕೃಷಿ ಉತ್ಪನ್ನಗಳ ಸಾಗಣೆಯೂ ಸುಲಭವಾಗುತ್ತದೆ’ ಎಂದರು.

ಸ್ಥಳೀಯ ಜನರ ಬಹುಕಾಲದ ಬೇಡಿಕೆಯನ್ನು ಮನಗಂಡು ಕೇವಲ ಮೂರು ತಿಂಗಳ ಅವಧಿಯಲ್ಲೇ ಎರಡು ಸೇತುವೆಗಳ ನಿರ್ಮಾಣಕ್ಕಾಗಿ ತಲಾ ₹1 ಕೋಟಿ ಗಳಂತೆ ಒಟ್ಟು ₹2 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ’ ಎಂದರು.

ಇಂಚೂರ್ ಗ್ರಾಮದಿಂದ ಲಾಧಾ, ಕುಂಟೆಗಾವ, ಮೊರಂಬಿ ಗ್ರಾಮಗಳವರೆಗೆ ಸುಮಾರು 9 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸುಮಾರು ₹9 ಕೋಟಿ ಅನುದಾನದಡಿ ಗ್ರಾಮ ರಸ್ತೆಯನ್ನು ಎಂಡಿಆರ್ ರಸ್ತೆಯಾಗಿ ಪರಿವರ್ತಿಸಿ ಏಕಮಾರ್ಗ ರಸ್ತೆಯನ್ನು ದ್ವಿಮಾರ್ಗ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಇದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ತಾಲ್ಲೂಕಿನ ಇನ್ನಷ್ಟು ಗ್ರಾಮಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವತ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕಾಂಗ್ರೆಸ್ ಯುವ ಮುಖಂಡರಾದ ಪ್ರವೀಣ ಹನುಮಶೆಟ್ಟಿ, ದಿಲೀಪ್ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಬಹುಸಾಹೇಬ ಮೊರೆ, ನವನಾಥ ಬೋಲಸುರೆ, ಯುವರಾಜ್ ಮೇತ್ರೆ, ರಂಜಿತ್ ಡೊಬಳೆ, ಶಿವಾಜಿ ದೇಶಮುಖ್, ಬಲವಂತರಾವ್ ಹಿರನಾಯಿಕ್, ಅಣ್ಣರಾವ ಮೊರೆ, ಶಾಲಿವಾನ ಸಾತಬಾಯಿ, ಯೋಗಜಿ ಕಾರಬಾರಿ, ದಯಾನಂದ ಹಿರನಾಯಕ, ಶ್ರೀಧರ್ ಸಾತಬಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.