ಬುಧವಾರ, ನವೆಂಬರ್ 25, 2020
26 °C
ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರಿಂದ ಬೈಕ್ ರ್‍ಯಾಲಿಗೆ ನಿರ್ಧಾರ

ಬೀದರ್‌ ಜಿಲ್ಲಾ ಕನ್ನಡ ಭವನಕ್ಕೆ ಭೂಮಿಪೂಜೆ 22ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲಾ ಕನ್ನಡ ಭವನಕ್ಕೆ ನಗರದಲ್ಲಿ ನವೆಂಬರ್ 22 ರಂದು ಬೆಳಿಗ್ಗೆ 11 ಗಂಟೆಗೆ ಭೂಮಿ ಪೂಜೆ ನೆರವೇರಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಭೂಮಿ ಪೂಜೆ ಮಾಡಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತಿಗಳು ಭಾಗವಹಿಸಲಿದ್ದಾರೆ.

ರಾಜ್ಯದ ಮುಕುಟ ಬೀದರ್‌ನಲ್ಲಿ ಕನ್ನಡ ಭವನ ನಿರ್ಮಾಣಗೊಳ್ಳುತ್ತಿರುವುದು ಸಂತಸ ಉಂಟು ಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದ್ದಾರೆ.

ಸಾಹಿತ್ತಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುವಾಗುವಂತೆ ಸುಸಜ್ಜಿತ ಸಭಾಭವನ ನಿರ್ಮಾಣ ಆಗಲಿದೆ ಎಂದು ತಿಳಿಸಿದ್ದಾರೆ.

ಬೈಕ್ ರ್‍ಯಾಲಿ: ಕನ್ನಡ ಭವನ ಭೂಮಿಪೂಜೆ ಕಾರ್ಯಕ್ರಮ ಪ್ರಯುಕ್ತ ನವೆಂಬರ್ 22 ರಂದು ನಗರದಲ್ಲಿ ಕಸಾಪ ಸದಸ್ಯರಿಂದ ಬೈಕ್ ರ್‍ಯಾಲಿ ನಡೆಸಲು ನಿರ್ಧರಿಸಲಾಗಿದೆ.

ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಬೆಳಿಗ್ಗೆ 9.30ಕ್ಕೆ ಸಿದ್ಧಾರೂಢ ಮಠದಿಂದ ಆರಂಭವಾಗುವ ರ್‍ಯಾಲಿ ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಕನ್ನಡಾಂಬೆ ವೃತ್ತ, ಮಡಿವಾಳ ವೃತ್ತ, ಗುರುನಾನಕ ಗೇಟ್ ಮಾರ್ಗವಾಗಿ ಕನ್ನಡ ಭವನ ಸ್ಥಳದ ವರೆಗೆ ನಡೆಯಲಿದೆ.

ರ್‍ಯಾಲಿಯೊಂದಿಗೆ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯೂ ಜರುಗಲಿದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದರು.

6 ಸಾವಿರ ಕಸಾಪ ಸದಸ್ಯರಿಗೆ ಅಂಚೆ ಕಾರ್ಡ್‍ಗಳನ್ನು ಕಳುಹಿಸಿ ಆಹ್ವಾನಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ, ಸರ್ಕಾರಿ ಕೈಗಾರಿಕಾ ಸಂಸ್ಥೆ ಪ್ರಾಚಾರ್ಯ ಶಿವಶಂಕರ ಟೋಕರೆ, ಪ್ರಮುಖರಾದ ಬಂಡೆಪ್ಪ ಕಂಟೆ, ಎಂ.ಎಸ್. ಮನೋಹರ, ಗುರುನಾಥ ರಾಜಗೀರಾ, ವಿರೂಪಾಕ್ಷ ಗಾದಗಿ , ಶ್ರೀಮಂತ ಸಪಾಟೆ, ಆನಂದ ಘಂಟೆ, ವಿಜಯಕುಮಾರ ಸೋನಾರೆ, ಮಹೇಶ ಗೋರನಾಳಕರ್, ಪೀಟರ್ ಚಿಟಗುಪ್ಪ, ಆನಂದ ಪಾಟೀಲ, ಸಿದ್ಧಾರೂಢ ಭಾಲ್ಕೆ, ಶಿವಕುಮಾರ ಚನಶೆಟ್ಟಿ, ವಿಜಯಕುಮಾರ ಗೌರೆ, ಶಿವಾನಂದ ಪಾಟೀಲ, ರಾಜೇಂದ್ರ ಮಣಗೆರೆ, ಪರಮೇಶ್ವರ ಬಿರಾದಾರ, ರಾಘವೇಂದ್ರ ಮುತ್ತಂಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.