ಗೋಶಾಲೆ ವಿರುದ್ಧ ಅಪಪ್ರಚಾರ: ಟೀಕೆ

ಮಂಗಳವಾರ, ಜೂನ್ 25, 2019
22 °C

ಗೋಶಾಲೆ ವಿರುದ್ಧ ಅಪಪ್ರಚಾರ: ಟೀಕೆ

Published:
Updated:
Prajavani

ಔರಾದ್:‘ಅಮರೇಶ್ವರ ಗೋಶಾಲೆಯ ಹೆಸರು ಕೆಡಿಸಲು ಕೆಲ ಕಿಡಿಗೇಡಿಗಳು ಅಪಪ್ರಚಾರ ನಡೆಸಿದ್ದಾರೆ' ಎಂದು ಗೋಶಾಲೆ ಅಧ್ಯಕ್ಷ ಶಿವರಾಜ ಅಲ್ಮಾಜೆ ದೂರಿದ್ದಾರೆ.

ಅವರು ಗುರುವಾರ ತಹಶೀಲ್ದಾರ್ ಎಂ. ಚಂದ್ರಶೇಖರಗೆ ದೂರು ಸಲ್ಲಿಸಿದರು.

'ಭೀಕರ ಬರದಿಂದ ಗೋಶಾಲೆ ಜಾನುವಾರುಗಳಿಗೆ ನೀರು, ಮೇವು ಪೂರೈಸುವುದು ತುಂಬಾ ಕಷ್ಟವಾಗಿದೆ. ಆದರೂ ದಾನಿಗಳ ನೆರವು ಪಡೆದು ಜಾನುವಾರುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ ಕೆಲ ಕಿಡಿಗೇಡಿಗಳು ಯಾವಾಗಲೋ ಸತ್ತ ಜಾನುವಾರುಗಳ ಹಳೆಯ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಗೋಶಾಲೆ ಹೆಸರು ಕೆಡಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಗೋಶಾಲೆ ಆವರಣದಲ್ಲಿ ಕೆಲವರು ರಾತ್ರಿ ವೇಳೆ ಸಾರಾಯಿ ಸೇವನೆ ಸೇರಿದಂತೆ ಕೆಟ್ಟ ಚಟವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕು’ ಎಂದಿದ್ದಾರೆ.

ಹಿರಿಯ ವೈದ್ಯ ಕಲ್ಲಪ್ಪ ಉಪ್ಪೆ, ಕಲ್ಲಪ್ಪ ಮುದ್ದಾ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !