ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಮತ್ತೆ 14 ಮಂದಿಗೆ ಕೋವಿಡ್‌-19 ಸೋಂಕು

ಬೀದರ್‌ ಜಿಲ್ಲೆಯಲ್ಲಿ ಮೂರನೇ ಸಾವು, ಸೋಂಕಿತರ ಸಂಖ್ಯೆ 108ಕ್ಕೆ ಏರಿಕೆ
Last Updated 27 ಮೇ 2020, 16:15 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಬುಧವಾರ ಮೂವರು ಮಹಿಳೆಯರು ಸೇರಿ ಒಟ್ಟು 14 ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 108ಕ್ಕೆ ಏರಿದೆ. 49 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ ಹೋಬಳಿಯಲ್ಲಿನ ಐದು ಗ್ರಾಮಗಳಲ್ಲಿ ಇಬ್ಬರು ಗರ್ಭಿಣಿಯರು ಸೇರಿ ಮೂವರು ಮಹಿಳೆಯರು ಹಾಗೂ 10 ಪುರುಷರು ಸೇರಿದಂತೆ ಒಟ್ಟು 13 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇವರಲ್ಲಿ 12 ಜನರು ಮಹಾರಾಷ್ಟ್ರದಿಂದ ಬಂದು ಆಯಾ ಊರಿನ ಶಾಲೆಗಳಲ್ಲಿ ಕ್ವಾರಂಟೈನ್‌ನಲ್ಲಿ ಇದ್ದರು.

ಗರ್ಭಿಣಿಯರಲ್ಲಿ ಕೋಹಿನೂರಿನ 25 ವರ್ಷದ ಒಬ್ಬರು ಹಾಗೂ ಬಟಗೇರಾದ 29 ವರ್ಷದ ಇನ್ನೊಬ್ಬರು ಇದ್ದಾರೆ. ಈ ಇಬ್ಬರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಿದ್ದರಿಂದ ಅವರ ಕುಟುಂಬದವರ ತಪಾಸಣೆಯನ್ನೂ ನಡೆಸಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ.

ಕೋಹಿನೂರಿನಲ್ಲಿ ಈ ಮೊದಲು 10 ಪಾಸಿಟಿವ್ ಪ್ರಕರಣಗಳು ಬಂದಿದ್ದವು. ಈಗ ಮತ್ತೆ ಐವರ ವೈದ್ಯಕೀಯ ವರದಿ ಪಾಸಿಟಿವ್ ಬಂದಿದ್ದರಿಂದ ಕೋವಿಡ್ 19 ಸೋಂಕಿತರ ಸಂಖ್ಯೆ ಒಂದೇ ಊರಿನಲ್ಲಿ 15 ಆಗಿದೆ. ಬುಧವಾರ ಈ ಗ್ರಾಮದ 45, 43, 32, 35 ವರ್ಷದ ಪುರುಷರು ಹಾಗೂ 25 ವರ್ಷದ ಗರ್ಭಿಣಿಯಲ್ಲಿ ಸೋಂಕು ದೃಢಪಟ್ಟಿದೆ. ಬಟಗೇರಾದಲ್ಲಿ 28 ವರ್ಷದ ಪುರುಷ ಹಾಗೂ 29 ವರ್ಷದ ಗರ್ಭಿಣಿಯಲ್ಲಿ ಸೋಂಕು ಪತ್ತೆಯಾಗಿದೆ.

ಮಹಾರಾಷ್ಟ್ರದಿಂದ ಬಂದಿರುವ ಹಾಗೂ ಕ್ವಾರಂಟೈನ್ ಕೇಂದ್ರದಲ್ಲಿದ್ದ ಶಿರಗೂರ ಗ್ರಾಮದ 25, 21 ಹಾಗೂ 20 ವರ್ಷದ ಯುವಕರಲ್ಲಿ ಸೋಂಕು ಪತ್ತೆಯಾಗಿದ್ದು, 20 ವರ್ಷದವನಿಗೆ 25 ವರ್ಷದವನ ಸಂಪರ್ಕದಿಂದ ಸೋಂಕು ಬಂದಿದೆ. ಗದಲೇಗಾಂವ(ಕೆ)ದ 31 ವರ್ಷದ ಮಹಿಳೆ ಹಾಗೂ ಅವಳ 12 ವರ್ಷದ ಮಗನಲ್ಲಿ ಸೋಂಕು ಪತ್ತೆಯಾಗಿದೆ. ಲಾಡವಂತಿಯ 28 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿ ಇದ್ದರು.

ಜಿಲ್ಲಾ ಆಸ್ಪತ್ರೆ ವಿಶೇಷ ನಿಗಾ ಘಟಕದಲ್ಲಿದ್ದ ಮೂವರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಮಂಗಳವಾರ 19,711 ಜನರ ತಪಾಸಣೆ ನಡೆಸಲಾಗಿದೆ. 1316 ಜನರು ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಾರೆ. ಇನ್ನೂ 6,952 ಜನರ ವೈದ್ಯಕೀಯ ವರದಿ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT