ಜನವಾಡ: ಬೀದರ್ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಭರದ ಸಿದ್ಧತೆ ನಡೆದಿದೆ. ಈಗಾಗಲೇ ರೈತರು ನೇಗಿಲು, ಕುಂಟಿ ಹೊಡೆಯುವ, ರೋಟವೇಟರ್ ಬಳಸಿ ಭೂಮಿ ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸೋಯಾ, ಅವರೆ, ಉದ್ದು, ಹೆಸರು, ತೊಗರಿ, ಹತ್ತಿ, ಭತ್ತ, ಜೋಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಬೇಸಿಗೆಯಲ್ಲಿ ಪ್ರಖರ ಬಿಸಿಲು ಇದ್ದ ಕಾರಣ ಭೂಮಿ ಚೆನ್ನಾಗಿ ಒಣಗಿದೆ. ಹೀಗಾಗಿ ಬಿತ್ತನೆ ಪೂರ್ವ ಹಾಗೂ ನಂತರ ಉತ್ತಮ ಮಳೆಯಾದರೆ ಸಮೃದ್ಧ ಫಸಲು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಮಂದಕನಳ್ಳಿಯ ರೈತ ಚನ್ನಬಸಪ್ಪ ಗೌರಶೆಟ್ಟಿ.

ಸೋಯಾ, ಅವರೆ ಕ್ಷೇತ್ರ ಅಧಿಕ: ಮುಂಗಾರು ಹಂಗಾಮಿನಲ್ಲಿ ಬೀದರ್ ತಾಲ್ಲೂಕಿನ ಅತಿ ಹೆಚ್ಚು ಪ್ರದೇಶದಲ್ಲಿ ಸೋಯಾಬೀನ್ ಬಿತ್ತನೆ ಯಾಗಲಿದೆ. ಒಟ್ಟು 22,500 ಹೆಕ್ಟೇರ್ ಪ್ರದೇಶದಲ್ಲಿ ಸೋಯಾ, ಅವರೆ ಬಿತ್ತನೆ ಗುರಿ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ ತಿಳಿಸಿದರು.

17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 4,500 ಹೆಕ್ಟೇರ್ ಹೆಸರು ಹಾಗೂ 3,500 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬೆಳೆಯುವ ಗುರಿ ಹೊಂದಲಾಗಿದೆ. ಬಿತ್ತನೆಗೆ 17,800 ಕ್ವಿಂಟಲ್ ಬೀಜದ ಅವಶ್ಯಕತೆ ಇದೆ. ಈಗಾಗಲೇ 9,200 ಕ್ವಿಂಟಲ್ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

28 ಕೇಂದ್ರಗಳಲ್ಲಿ ಬೀಜ ವಿತರಣೆ: ಬೀದರ್ ತಾಲ್ಲೂಕಿನಲ್ಲಿ ಆರು ರೈತ ಸಂಪರ್ಕ ಕೇಂದ್ರ ಹಾಗೂ 22 ಹೆಚ್ಚುವರಿ ಕೇಂದ್ರ ಸೇರಿದಂತೆ 28 ಕೇಂದ್ರಗಳಲ್ಲಿ ಬೀಜ ವಿತರಣೆಯಾಗಲಿದೆ.

ಮೇ ಕೊನೆಯ ವಾರದಲ್ಲಿ ಬಿತ್ತನೆ ಬೀಜ ವಿತರಣೆ ಆರಂಭವಾಗಲಿದ್ದು, ರೈತರು ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಕೇಂದ್ರಕ್ಕೆ ಭೇಟಿ ನೀಡಿ ಬೀಜ ಪಡೆಯಬಹುದು. ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಆಗುವುದಿಲ್ಲ. ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಸಹಾಯಕ ಕೃಷಿ ನಿರ್ದೇಶಕ ತಿಳಿಸಿದರು.

ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಮಳೆ ಸುರಿದ ನಂತರವೂ ಭೂಮಿಯಲ್ಲಿ 2 ರಿಂದ 3 ಇಂಚ್ ನಷ್ಟು ತೇವಾಂಶ ಇರುವ ಖಚಿತಪಡಿಸಿಕೊಂಡೇ ಬಿತ್ತನೆ ಆರಂಭಿಸಬೇಕು
ಆರತಿ ಪಾಟೀಲ, ಸಹಾಯಕ ಕೃಷಿ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.