ಬೀದರ್: ನಗರದ ಅಲ್ಲಮಪ್ರಭು ಬಡಾವಣೆಯಲ್ಲಿ ಗುರುವಾರ 12ನೇ ಶತಮಾನದ ಅನುಭವ ಮಂಟಪದ ಮೊದಲ ಪೀಠಾಧ್ಯಕ್ಷ ಅಲ್ಲಮಪ್ರಭು ದೇವರ ಜಯತಿ ಆಚರಿಸಲಾಯಿತು.

ಬೀದರ್ ಮಹಾನಗರ ಪಾಲಿಕೆ ಸದಸ್ಯ ರಾಜಾರಾಮ ಚಿಟ್ಟಾ ಉದ್ಘಾಟಿಸಿ, ‘ಪ್ರತಿವರ್ಷ ಅಲ್ಲಮಪ್ರಭು ಜಯಂತಿಯನ್ನು ಆಚರಿಸಿ, ಅವರ ವಿಚಾರಗಳ ಮನನ ಮಾಡುತ್ತಿರುವುದು ಉತ್ತಮ ಕೆಲಸ. ಅಲ್ಲಮಪ್ರಭುಗಳ ವಿಚಾರ ಸದಾ ಪ್ರಸ್ತುತ’ ಎಂದು ಹೇಳಿದರು.

ಚನ್ನಬಸವೇಶ್ವರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಲೋಕೇಶ ಉಡಬಾಳೆ ಮಾತನಾಡಿ, ‘ಅಲ್ಲಮಪ್ರಭುಗಳು 12ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನರಾಗಿದ್ದರು. ಕಲ್ಯಾಣದ ಅನುಭವ ಮಂಟಪದ ಶೂನ್ಯ ಪೀಠದ ಪೀಠಾಧಿಪತಿಗಳಾಗಿದ್ದರು. ‘ಗುಹೇಶ್ವರ’ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿ ಆತ್ಮಜ್ಞಾನ, ವೈರಾಗ್ಯ ಹಾಗೂ ಶೂನ್ಯ ತತ್ವವನ್ನು ಸಾರಿದ ಅವರ ವಚನಗಳು ಇಂದಿಗೂ ವಿಶ್ವಶಾಂತಿಗೆ ದಾರಿದೀಪವಾಗಿವೆ’ ಎಂದು ಅಭಿಪ್ರಾಯಪಟ್ಟರು.

ಶಿವಾನಂದ ತಾದಲಾಪೂರೆ ಮಾತನಾಡಿ, ‘ಶರಣ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಾಯಕ ಮತ್ತು ದಾಸೋಹದಲ್ಲಿ ನಿರತರಾಗಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಲ್ಲಯ್ಯ ಸ್ವಾಮಿ ಮಾತನಾಡಿ, ‘ಸಮಾನತೆ, ಭಕ್ತಿ, ಧರ್ಮನಿಷ್ಠೆ ಹಾಗೂ ಆಂತರಿಕ ಶುದ್ಧತೆ ಜೀವನದಲ್ಲಿ ಅಳವಡಿಸಿಕೊಂಡರೆ ವಿಶ್ವಶಾಂತಿ ಸಾಧಿಸಲು ಸಾಧ್ಯ’ ಎಂದರು.

ರೇಣುಕಾ ರಾಜಕುಮಾರ ತೆಲಗಾಣೆ ಹಾಗೂ ಅರ್ಚನಾ ಸ್ವಾಮಿ ಸಾಮೂಹಿಕ ಪ್ರಾರ್ಥನಾ ಗೀತೆ ಹಾಡಿದರು. ಶಶಿಕಾಂತ ಹೊಸದೊಡ್ಡ ಸ್ವಾಗತಿಸಿದರು. ಸುಜೀತಕುಮಾರ್ ಪಿ. ನಿರೂಪಿಸಿದರು. ಶಿವರಾಜ ಪಟ್ಟಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-33-1306968134

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.