ಬೀದರ್: ಗೋಮಾತೆಗೆ ರಾಷ್ಟ್ರಮಾತೆ ಸ್ಥಾನಮಾನ ನೀಡಬೇಕು. ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅಂತರರಾಷ್ಟ್ರೀಯ ಬಜರಂಗದಳ ಬೀದರ್ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಸಂಬಂಧ ಸಂಘಟನೆಯ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ರವೀಂದ್ರ ದಾಮಾ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಮಾತನಾಡಿ, ‘ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಅಧಿಕೃತವಾಗಿ ಘೋಷಿಸುವವರೆಗೆ ಹೋರಾಟ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ರೂಪಿಸಲಾಗುವುದು. ಅಗತ್ಯವಿದ್ದಲ್ಲಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

‘ಬರುವ ಆಗಸ್ಟ್ 16ರಂದು ನವದೆಹಲಿಯಲ್ಲಿ ಸುಮಾರು ಒಂದು ಕೋಟಿ ಗೋಭಕ್ತರನ್ನು ಸೇರಿಸಿ ಮಹಾ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಗೋಸಂರಕ್ಷಣೆಗೆ ಕಠಿಣ ಕಾನೂನು ಜಾರಿಗೆ ತರಬೇಕು. ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಬಜರಂಗದಳದ ಜಿಲ್ಲಾಧ್ಯಕ್ಷ ವೆಂಕಟೇಶ್ ಶಾಲಿ ಚಿದ್ರಿ, ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ವಸಂತ್, ಶ್ರೀಕಾಂತ್ ಮೋದಿ, ಸಿ.ಬಿ ರೆಡ್ಡಿ, ದೀಪಕ್ ತೆಲಗಣಿ, ನರಸಿಂಗರಾವ್, ಅಮರ್ ಸಿಂಗ್ ಠಾಕೂರ್, ರಾಜಕುಮಾರ್ ಆರ್ಯ, ಭರತ್ ಮಾಲೆಗಾಂವ್, ಆಕಾಶ್, ಬಾಬುಗಿರಿ, ಸಾಯಿನಾಥ್, ಸಿದ್ದು, ವಿಷ್ಣು, ನಾರಾಯಣ್, ಶಾಂತು ಹಡಪದ್ ಸೇರಿದಂತೆ ಇತರರಿದ್ದರು.

ಕಮಲನಗರ: ಪಟ್ಟಣದಲ್ಲಿ ಗೋರಕ್ಷಕ ಸೇವಾ ಸಮಿತಿ ವತಿಯಿಂದ ಸೋಮವಾರ ಗೋಮಾತೆಗೆ ಗೌರವ ಅಭಿಯಾನ ನಿಮಿತ್ತ ಪ್ರಶಾಂತ ಖಾನಾಪೂರೆ ಅವರ ನೇತೃತ್ವದಲ್ಲಿ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ತೆರಳಿ ರಾಷ್ಟ್ರಪತಿಗಳು, ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಹೆಸರಿನಲ್ಲಿ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ಅವರಿಗೆ ಸಲ್ಲಿಸಿದರು.

ಮನವಿಯಲ್ಲಿ, ‘ಭಾರತದಲ್ಲಿ ಗೋಹತ್ಯೆ ಸಂಪೂರ್ಣ ನಿಷೇಧಿಸಬೇಕು. ಹಸುವಿಗೆ ರಾಷ್ಟ್ರ ಮಾತೆ ಸ್ಥಾನ ನೀಡಬೇಕು. ಗೋ ತಳಿಗೆ ರಾಷ್ಟ್ರೀಯ ಗೌರವ ಒದಗಿಸಬೇಕು. ಗೋಚಾರ ಮಂಡಳಿ ರಚಿಸಬೇಕು. ಮೇವು ಭದ್ರತಾ ನೀತಿಯನ್ನು ಅಂತಿಮಗೊಳಿಸಬೇಕು. ಗೋ ಆಧರಿತ ಕೃಷಿಗೆ ಆದ್ಯತೆ ಕಲ್ಪಿಸಬೇಕು. ಸ್ಥಳೀಯ ಗೋ ಸೇವೆಗಾಗಿ ಕೇಂದ್ರಿಯ ಕಾನೂನು ಜಾರಿಗೊಳಿಸಬೇಕು. ಪಂಚಗವ್ಯ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಿ ಸೂಕ್ತ ಮಾರುಕಟ್ಟೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದೇವರಾಜಸಿಂಗ ಠಾಕೂರ, ರೋಹಿತ ಠಾಕೂರ, ಅಜಯ ಠಾಕೂರ, ವೈಭವ ಪಾಟೀಲ, ಬಾಳು ಗಾಯಕವಾಡ, ಆದೇಶ, ಶಿವೂ ಸೋಲ್ಲಾಪೂರೆ ಹಾಗೂ ಇನ್ನಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-33-305071790

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.