ಬೀದರ್: ಏ. 18 ರಿಂದ 20ರ ವರೆಗೆ ಬಸವ ಜಯಂತಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಡಾ. ರಜನೀಶ ವಾಲಿ ತಿಳಿಸಿದರು.

ಈ ಮೂರು ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಏ.18ರಂದು ಬೆಳಿಗ್ಗೆ 7 ರಿಂದ 8ರ ವರೆಗೆ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಇಷ್ಟಲಿಂಗ ಪೂಜೆ ನಡೆಯಲಿದೆ. ಶಿವಕುಮಾರ ಪಾಂಚಾಳ ಹಾಗೂ ಸಂಗಡಿಗರಿಂದ ವಚನ ಗಾಯನ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಸಿದ್ದಾರೂಢ ಮಠದಿಂದ ಪಾಪನಾಶ ಮಂದಿರದ ವರೆಗೆ ಕಾರುಗಳ ಭವ್ಯ ರ್ಯಾಲಿ ಜರುಗಲಿದೆ ಎಂದರು.

ಮಧ್ಯಾಹ್ನ 3ಕ್ಕೆ ವಚನ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಥಮ ಬಹುಮಾನ ₹10,000, ದ್ವಿತೀಯ ₹5,000 ಹಾಗೂ ತೃತೀಯ ₹3,000 ನಗದು ನಿಗದಿಪಡಿಸಲಾಗಿದೆ. ಸಂಜೆ 6.30ಕ್ಕೆ ಸಾಹಿತಿ ವಿ.ಎಸ್. ಹಿರೇಮಠ ವಿಶೇಷ ಉಪನ್ಯಾಸ ನೀಡುವರು. ಅಕ್ಕಿಸಿ ರಾಜಕುಮಾರ ಹಿರೇಮಠ ಅವರಿಂದ ವಚನ ಗಾಯನ ಇರಲಿದೆ’ ಎಂದರು.

ಏಪ್ರಿಲ್ 19ರಂದು ಬೆಳಿಗ್ಗೆ 7ರಿಂದ ವಚನ ಪಾರಾಯಣ ನಡೆಯಲಿದೆ. ಮಧ್ಯಾಹ್ನ 3ಕ್ಕೆ ವಚನ ಭಜನೆ ಸ್ಪರ್ಧೆ ಜರುಗುವುದು. ₹10,000 ಪ್ರಥಮ, ₹5,000 ದ್ವಿತೀಯ ಹಾಗೂ ₹3,000 ನಗದು ತೃತೀಯ ಬಹುಮಾನ ನೀಡಲಾಗುವುದು. ಸಂಜೆ 6ಕ್ಕೆ ಶರಣರ ವೇಷ ಭೂಷಣ ಕಾರ್ಯಕ್ರಮ ನಡೆಯಲಿದೆ. 6.30ಕ್ಕೆ ಶಂಕರ ಶಾನಭೋಗ ಹಾಗೂ ಸಂಗಡಿಗರಿಂದ ವಚನ ಸಂಗೀತೋತ್ಸವ ನಡೆಯಲಿದೆ ಎಂದು ವಿವರಿಸಿದರು.

20ರಂದು ಬೆಳಿಗ್ಗೆ 11ಕ್ಕೆ ಬಸವ ಜಯಂತಿ ಉತ್ಸವದ ಪ್ರಮುಖ ಕಾರ್ಯಕ್ರಮ ನಡೆಯಲಿದೆ. ಶರಣಬಸವ ದೇವರು ಬೆಳವಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಜೆ 5ಕ್ಕೆ ಬಸವೇಶ್ವರ ವೃತ್ತದಿಂದ ವಿಶ್ವಗುರು ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.

ಸಮಿತಿಯ ಪ್ರಮುಖರಾದ ಕುಶಾಲರಾವ್ ಪಾಟೀಲ ಖಾಜಾಪುರ, ಸೋಮಶೇಖರ ಪಾಟೀಲ ಗಾದಗಿ, ಮಹಿಳಾ ಸಮಿತಿ ಅಧ್ಯಕ್ಷೆ ಡಾ. ದೇವಕಿ ನಾಗೂರೆ, ಮೆರವಣಿಗೆ ಸಮಿತಿಯ ಅಧ್ಯಕ್ಷ ಧನರಾಜ ಹಂಗರಗಿ, ಬಸವ ಜಯಂತಿ ಉತ್ಸವ ಸಮಿತಿಯ ನಿಟಪೂರ್ವ ಅಧ್ಯಕ್ಷ ಜೈರಾಜ ಖಂಡ್ರೆ, ಸುರೇಶ ಚನಶೆಟ್ಟಿ, ರಾಜೇಂದ್ರಕುಮಾರ ಗಂದಗೆ, ದೀಪಕ ವಾಲಿ, ಉತ್ಸವ ಸಮಿತಿಯ ಖಜಾಂಚಿ ಸಿದ್ರಾಮಯ್ಯ ಸ್ವಾಮಿ, ವಿಕ್ರಮ ಮುದಾಳೆ, ಸುರೇಶ ಸ್ವಾಮಿ, ದಾನಿ ಬಾಬುರಾವ್, ನೀಲಮ್ಮ ರೂಗನ್, ವಿರುಪಾಕ್ಷ ಗಾದಗಿ, ಸಂತೋಷ ಪಾಟೀಲ ಸೇರಿದಂತೆ ಹಲವರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-33-863030515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.