ಬೀದರ್: ‘ಬಸವವಾದಿಗಳು, ಬಸವತತ್ವ ನಿಷ್ಠರು ರಾಜಕೀಯದ ಕೊಳೆ ತೆಗೆಯಲು ಮುಂದಾಗಬೇಕು’ ಎಂದು ‘ಜಾಗೃತ ಕರ್ನಾಟಕ’ ಸಂಘಟನೆಯ ಡಾ. ಎಚ್.ವಿ. ವಾಸು ಸಲಹೆ ಮಾಡಿದರು.

ನಗರದ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣತಾಯಿಯವರ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಎರಡು ದಿನಗಳ ‘ಬಸವೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಅನುಭಾವ ಮಂಡಿಸಿದರು.

ಒಳ್ಳೆಯ ಜನ ರಾಜಕಾರಣದಿಂದ ದೂರ ಇರಬಾರದು. ರಾಜಕೀಯ ಹಾಗೂ ಸಂಸಾರದಲ್ಲಿ ಒಳ್ಳೆಯ ಆಯ್ಕೆಗೆ ಬಸವಣ್ಣನವರ ಕಳಬೇಡ ವಚನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಸಮಾಜ, ಸರ್ಕಾರ ಹಾಗೂ ಸಂಸಾರದಲ್ಲಿ ಬದಲಾವಣೆ ತರುವ ಶಕ್ತಿ ವಚನಗಳಿಗಿದೆ. ಎಂಟು ನೂರು ವರ್ಷ ಭೂಗತವಾಗಿದ್ದ ವಚನಗಳನ್ನು ಬೆಳಕಿಗೆ ತಂದವರು ಫ.ಗು. ಹಳಕಟ್ಟಿ. ಬಸವ ತತ್ವ ಪ್ರಸಾರ ಮಾಡಿದವರಲ್ಲಿ ಅಕ್ಕ ಅನ್ನಪೂರ್ಣತಾಯಿ ಅವರ ಹೆಸರು ಮೇಲ್ಪಂಕ್ತಿಯಲ್ಲಿದೆ. ಅಕ್ಕ ಅನ್ನಪೂರ್ಣ ತಾಯಿ ಅವರ ಕಾರ್ಯವನ್ನೇ ಮುಂದುವರಿಸಿರುವ ಪ್ರಭುದೇವ ಸ್ವಾಮೀಜಿ ಅವರ ಕಾರ್ಯ ರಾಜ್ಯಕ್ಕೆ ಮಾದರಿಯಾಗುತ್ತಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ, ಪ್ರಜಾಪ್ರಭುತ್ವದ ಬೀಜ ವಚನಗಳಲ್ಲೇ ಇದೆ. ಸಂವಿಧಾನದ ಆಶಯಗಳು, ಬದುಕನ್ನು ಉನ್ನತಿಗೇರಿಸುವ ಮೌಲ್ಯಗಳು ವಚನಗಳಲ್ಲಿ ಅಡಕವಾಗಿವೆ ಎಂದು ತಿಳಿಸಿದರು.

ಶರಣರ ನಾಡಿನಲ್ಲಿರುವ ನಾವು ವಚನಗಳ ಶೇಷ್ಠತೆಯ ಅರಿವಿಲ್ಲದೆ, ನಿಧಿ ಮೇಲೆ ಕುಳಿತು ತುತ್ತು ಅನ್ನಕ್ಕೆ ಕೈಚಾಚುವವರಂತಾಗಿದ್ದೇವೆ. ಅಂದು ಶರಣರು ಅಡುಗೆ ಮಾಡಿ ಇಟ್ಟಿದ್ದಾರೆ. ಈಗ ಅದನ್ನು ಬಡಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡಬೇಕಾಗಿದೆ ಎಂದರು.

ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ ಮಾತೆ ಪ್ರಭುಶ್ರೀ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಸೈಕಲ್ ತುಳಿದು ಬಸವ ತತ್ವ ಪ್ರಚಾರಗೈದಿದ್ದರು. ಮಠ ಕಟ್ಟಿದ್ದರು. ಬಸವ ತತ್ವದ ಪುನರುತ್ಥಾನಗೈದಿದ್ದಾರೆ ಎಂದು ಹೇಳಿದರು.

ಬಿಜೆಪಿ ಮುಖಂಡ ನಾಗರಾಜ ಕರ್ಪೂರ ಮಾತನಾಡಿ, ಯುವಕರಿಗೆ ಅಕ್ಕ ಅನ್ನಪೂರ್ಣತಾಯಿ ಅವರ ಮಾತುಗಳೇ ಪ್ರೇರಣೆ ಎಂದು ಹೇಳಿದರು.

ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಉದ್ಘಾಟಿಸಿದರು. ಕಲಬುರಗಿಯ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಅಧ್ಯಕ್ಷತೆ ವಹಿಸಿದ್ದರು. ನಂಜನಗೂಡಿನ ಎಚ್.ಎಂ. ಮಂಜುಳಾ ಮಧು, ಬೇಲೂರಿನ ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ, ಉದ್ಯಮಿ ವೀರಶೆಟ್ಟಿ ಪಟ್ನೆ, ನೀಲಮ್ಮನ ಬಳಗದ ಸಂಗೀತಾ ಆರ್. ಪಾಟೀಲ, ಸಾಹಿತಿ ರಮೇಶ ಮಠಪತಿ ಇದ್ದರು.

ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ವೀರಭದ್ರಪ್ಪ ನಂದ್ಯಾಳ್ ಷಟ್ಸ್ಥಲ ಧ್ವಜಾರೋಹಣಗೈದರು. ಶರಣ ಶರಣೆಯರು ವಚನ ಪಾರಾಯಣ ಮಾಡಿದರು. ಅಶ್ವಿನಿ ರಾಜಕುಮಾರ ಅವರ ಸಂಗೀತ ಮೆರುಗು ನೀಡಿತು. ಬಸವಕಲ್ಯಾಣದ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ ಸಾಮೂಹಿಕವಾಗಿ ವಚನ ಓದಿಸಿ, ವಚನ ಪಾರಾಯಣಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಅಕ್ಕ ಅನ್ನಪೂರ್ಣತಾಯಿ ಅವರ ಐಕ್ಯ ಮಂಟಪದಲ್ಲಿ ಗುರುಬಸವ ಪೂಜೆ, ಪ್ರಾರ್ಥನೆ ಸಲ್ಲಿಸಿ, ಅಕ್ಕನವರಿಗೆ ಗೌರವ ಸಮರ್ಪಿಸಲಾಯಿತು.

ಪ್ರಿಯಾ ಎಲಿ, ಪೂರ್ಣಚಂದ್ರ ಮೈನಾಳೆ ವಚನ ನೃತ್ಯ ಪ್ರದರ್ಶಿಸಿದರು. ಚಂದ್ರಕಾಂತ ಪಟ್ನೆ, ಕಂಟೆಪ್ಪ ಗಂದಿಗುಡೆ, ಚಂದ್ರಶೇಖರ ಹೆಬ್ಬಾಳೆ ಹಾಗೂ ರೇವಣಪ್ಪ ಮೂಲಗೆ ವಚನ ಸಂಗೀತ ನಡೆಸಿಕೊಟ್ಟರು. ನೀಲಮ್ಮನ ಬಳಗದ ಗುರುಶ್ರೀ ಮಠಪತಿ ನಿರೂಪಿಸಿದರು. ಲಿಂಗಾಯತ ಸೇವಾ ದಳದ ಅಭಿಷೇಕ ಮಠಪತಿ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-33-1011808945

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.