ಬೀದರ್: ‘ಬಸವಕಲ್ಯಾಣದಲ್ಲಿ ಬಸವ ಧರ್ಮ ಪೀಠದ ಬಸವ ಮಹಾಮನೆಯ 108 ಅಡಿ ಎತ್ತರದ ಬಸವೇಶ್ವರ ಮೂರ್ತಿ ಎದುರು ಇತ್ತೀಚೆಗೆ ಬಸವತತ್ವ ವಿರೋಧಿ ಮನುವಾದಿಗಳು ಆರ್ಎಸ್ಎಸ್ ಗೀತೆ ಹಾಡಿ ಬಸವಾದಿ ಶರಣರಿಗೆ ಅಪಮಾನ ಮಾಡಿ, ಶಾಂತಿ ಭಂಗ ಮಾಡಿದ್ದು, ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಆಗ್ರಹಿಸಿದ್ದಾರೆ.

ಒಂದುವೇಳೆ ಈ ಪ್ರಕರಣದಲ್ಲಿ ಸಿದ್ದರಾಮೇಶ್ವರ ಸ್ವಾಮೀಜಿ ಶಾಮೀಲಾಗಿದ್ದರೆ, ಪಿತೂರಿ ಮಾಡಿರುವುದು ಗೊತ್ತಾದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಆರ್ಎಸ್ಎಸ್ ಮನುವಾದಿಗಳ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿರುವ ಸಿದ್ದರಾಮೇಶ್ವರ ಸ್ವಾಮೀಜಿಯನ್ನು ಕೂಡಲೇ ಬಸವ ಧರ್ಮ ಪೀಠದಿಂದ ಉಚ್ಚಾಟನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರಿಗೆ ಪತ್ರ ಬರೆದು ಆಗ್ರಹ ಮಾಡಿದ್ದಾರೆ.

ಒಂದುವೇಳೆ ಹೀಗೆ ಮಾಡದಿದ್ದಲ್ಲಿ ಬಸವ ಧರ್ಮ ಪೀಠದ ಹಿರಿಯರೆಲ್ಲ ಸೇರಿಕೊಂಡು ನಿಮ್ಮೆಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಪೀಠದ ಈ ಹಿಂದಿನ ಪೀಠಾಧಿಪತಿ ಲಿಂಗೈಕ್ಯ ಮಾತೆ ಮಹಾದೇವಿ ಅವರು ಬರೆದ ವಿಲ್ ಪ್ರಕಾರ, ಪೀಠದ ಎಲ್ಲ ಹಿರಿಯ ಮುಖಂಡರು ಸೇರಿ ನಿಮ್ಮೆಲ್ಲರನ್ನೂ ಬಸವ ಧರ್ಮ ಪೀಠದಿಂದ ಉಚ್ಚಾಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈಗ ಸಿದ್ದರಾಮೇಶ್ವರ ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ಅವರು ಕನೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೂ ಕರೆಸಿ, ಬಸವ ಧರ್ಮ ಪೀಠದ ವೇದಿಕೆ ಮೇಲೆ ಹಿಂದೂ ಸಮಾವೇಶ ಮಾಡಿಸಬಹುದು. ಈಗಾಗಲೇ ಸಿದ್ದರಾಮೇಶ್ವರ ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಇದರಲ್ಲಿ ಅವರ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ ಎಂದು ಹೇಳಿದ್ದಾರೆ.

ಮನುವಾದ ಬೆಂಬಲಿಸುವ, ಅಸಮಾನತೆ, ಚಾತುರ್ವಣ ವ್ಯವಸ್ಥೆಗೆ ಇಂಬುಕೊಡುವ ಹಿಂದೂ ಸಿದ್ಧಾಂತ ಹಾಗೂ ಬಸವ ಸಿದ್ಧಾಂತ ಸಂಪೂರ್ಣ ಭಿನ್ನವಾದುದು. ಹೀಗಿರುವಾಗ ಬಸವಾದಿ ಶರಣರ ಆಶಯಗಳಿಗೆ ವಿರುದ್ಧವಾಗಿರುವ ಹಿಂದೂವಾದಿಗಳು, ಮನುವಾದಿಗಳಾದ ಆರ್ಎಸ್ಎಸ್ನವರಿಗೆ ಕಾರ್ಯಕ್ರಮ ಮಾಡುವುದಕ್ಕೆ ಸಭಾ ಮಂಟಪ ಬಾಡಿಗೆ ಕೊಟ್ಟಿರುವುದು ಸರಿಯಲ್ಲ. ಇದರಿಂದ ಬಸವಾದಿ ಶರಣರ ಮತ್ತು ಲಿಂಗಾಯತ ಧರ್ಮದ ನಂಬಿಕೆಗೆ ಧಕ್ಕೆ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-33-922188281

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.