ಬೀದರ್: ‘ವಿಶ್ವಗುರು ಬಸವಣ್ಣನವರು ಜಗತ್ತಿಗೆ ಸಾಮಾಜಿಕ ಸಮಾನತೆ ಎತ್ತಿ ತೋರಿದ್ದು, ಪರಸ್ಪರ ಸಹೋದರತ್ವ ಭಾವ ಕರುಣಿಸಿದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್’ ಎಂದು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ ತಿಳಿಸಿದರು.

ಶನಿವಾರ ನಗರದ ಗುಂಪಾ ರಸ್ತೆಯ ರಾಂಪುರೆ ಬಡಾವಣೆಯಲ್ಲಿನ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಬಸವೇಶ್ವರ ಹಾಗೂ ಅಂಬೇಡ್ಕರ್ ಅವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ವರ್ಣಾಶ್ರಮ ಪದ್ದತಿಯನ್ನು ಧಿಕ್ಕರಿಸಿ, ಮಹಿಳಾ ಸಮಾನತೆಯನ್ನು ಹಾಗೂ ಶೋಷಿತರನ್ನು ಮೇಲೆತ್ತುವ ಕಾರ್ಯ ಬಸವಣ್ಣನವರು ಮಾಡಿದರು. ಸ್ವಾತಂತ್ರ್ಯ, ಸೌಹಾರ್ದ ಹಾಗೂ ಭ್ರಾತೃತ್ವವನ್ನು ಪರಿಚಯಿಸುವ ಕಾರ್ಯ ಅಂಬೇಡ್ಕರ್ ಅವರು ದಯಪಾಲಿಸಿದರು. ವಿಶ್ವಕ್ಕೆ ಸಂಸದಿಯ ಮಾದರಿಯನ್ನು ಬಸವಣ್ಣನವರು ಪರಿಚಯಿಸಿದರೆ, ಪ್ರಜಾಪ್ರಭುತ್ವವನ್ನು ಬಿತ್ತರಿಸಿದವರು ಅಂಬೇಡ್ಕರ್. ಹೀಗಾಗಿ ಇಬ್ಬರ ಜಯಂತಿಗಳು ಒಂದೆ ತಿಂಗಳಲ್ಲಿ ಬಂದಿರುವುದು ಬಹಳ ವಿಶೇಷ’ ಎಂದರು.

ಪತ್ರಕರ್ತ ಶಿವಕುಮಾರ ಸ್ವಾಮಿ ಮಾತನಾಡಿ, ‘ವಿಶ್ವಗುರು ಬಸವಣ್ಣನವರು ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಇಂದು ಬರೀ ಭಾರತಕ್ಕಷ್ಟೆ ಸೀಮಿತವಾಗದೆ ವಿಶ್ವಮಾನ್ಯರಾಗಿರುವರು. ಅವರಿಬ್ಬರ ವಿಚಾರಧಾರೆಗಳು ಇಂದು ಇಡೀ ಜಗತ್ತೆ ಅರಾಧಿಸುತ್ತಿರುವುದು, ಬ್ರ್ರಿಟನ್ನಲ್ಲಿ ಇಬ್ಬರ ಮೂರ್ತಿಗಳನ್ನು ಸ್ಥಾಪಿಸಿರುವುದು ಭಾರತೀಯರಾದ ನಮಗೆ ಹೆಮ್ಮೆ ಇದೆ’ ಎಂದರು.

ಭಾರತೀಯ ಕುಟುಂಬ ಯೋಜನಾ ಸಂಘದ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ, ಸೌಹಾರ್ದ ಸಹಕಾರಿ ವಿಭಾಗೀಯ ಕಾನೂನು ಸಲಹೆಗಾರ ಸೂರ್ಯಕಾಂತ ರಾಕ್ಲೆ, ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಜಿಲ್ಲಾ ಮೇಲ್ವಿಚಾರಕ ಸೂರ್ಯಕಾಂತ ಸಂಗೊಳ್ಳಿಕರ್, ಗ್ರಾಮ್ಸ ಸಂಸ್ಥೆ ಮೈಸೂರಿನ ಡಾ. ರಾಜೇಂದ್ರ ಪ್ರಸಾದ್, ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಸ್ವಾಮಿ, ವಿಜಯಕುಮಾರ ರಾಗಾ, ಶಿವಕುಮಾರ ವಜ್ರೆ, ಬಸವರಾಜ ಖಂಡ್ರೆ, ಶ್ರೀಮಂತ ಕೆ. ದೂಡ್ಡಿ, ಕಾರ್ತಿಕ ಮಠಪತಿ, ಸಂಗಪ್ಪ ಹೂಡಿ, ಸಂಜುಕುಮಾರ ಕೆಳಕೇರಿ, ಶಿವಕುಮಾರ್ ಮಾಳೆದೂಡ್ಡಿ, ಮಹಾಂತೇಶ ಪಾಟೀಲ, ಗಣಪತಿ ಭಕ್ತ, ಸುಜಾತಾ ಧಡ್ಡೆ, ಅನುರಾಧಾ ವರ್ಮಾ, ಭಾಗ್ಯಜೋತಿ ಇದ್ದರು.

ಅರವಿಂದ ಕುಲಕರ್ಣಿ ನಿರೂಪಿಸಿದರು. ರಿಯಾಜ್ಪಾಶಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-33-1061647099

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.