ಮನ್ನಳ್ಳಿ(ಜನವಾಡ): ‘ಬಸವಣ್ಣನವರು ತಮ್ಮ ವಚನಗಳಲ್ಲಿ ಸಮೃದ್ಧ ಬಾಳಿನ ಸಂದೇಶ ನೀಡಿದ್ದಾರೆ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಮಂಗಳವಾರ ಬಸವ ಕೇಂದ್ರದ ಬೆಳ್ಳಿ ಹಬ್ಬದ ನಿಮಿತ್ತ ಹಮ್ಮಿಕೊಳ್ಳಲಾದ ಬಸವ ಸಂದೇಶ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣನವರು 12ನೇ ಶತಮಾನದಲ್ಲಿ ಸಮ ಸಮಾಜ ಕಟ್ಟಿದ್ದರು. ತಾನೂ ಬದುಕಿ, ಇತರರಿಗೂ ಬದುಕಲು ಪ್ರೇರಣೆ ನೀಡುವುದೇ ಬಸವ ಧರ್ಮವಾಗಿದೆ’ ಎಂದು ತಿಳಿಸಿದರು.

‘ಸೂರ್ಯ ಬೆಳಕು ನೀಡುವಾಗ ಯಾವುದೇ ತಾರತಮ್ಯ ಇಲ್ಲ. ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯನವರಲ್ಲಿ ಇದ್ದ ಜ್ಞಾನವೇ ಉಳಿದೆಲ್ಲರಲ್ಲೂ ಇತ್ತು. ಆದರೆ, ಇಂದು ಎಲ್ಲೆಡೆ ಜಾತಿ ವಿಷ ಬೀಜದಿಂದ ಸಮಾಜ ನಲುಗುತ್ತಿದೆ’ ಎಂದು ಕಳವಳ ವ್ಯಕ್ತಡಿಸಿದರು.

‘ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದ ತಮ್ಮ ಸಂಸ್ಕಾರ ಹಾಗೂ ಸಂಸ್ಕೃತಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಾಲಕರು ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

ಬಸವ ಕೇಂದ್ರದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಬಸವಣ್ಣನವರ ತತ್ವ, ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಬಹಳ ಅವಶ್ಯಕವಾಗಿವೆ’ ಎಂದು ಹೇಳಿದರು.

‘ಕಲ್ಯಾಣ ಕ್ರಾಂತಿ ಮಾನವೀಯ ಮೌಲ್ಯಗಳಿಗಾಗಿ ನಡೆದ ಕ್ರಾಂತಿಯಾಗಿದೆ’ ಎಂದು ತಿಳಿಸಿದರು.

ಮನ್ನಳ್ಳಿ ಲಿಂಗಾಯತ ಸಮಾಜದ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಮಾತನಾಡಿದರು.

ಪ್ರಮುಖರಾದ ಬಸವರಾಜ ಅಮ್ಮಣ್ಣ, ಬಾಬುರಾವ್ ದಾನಿ, ಶಿವಶಂಕರ ಟೋಕರೆ, ಹಮೀದ್ಮಿಯ ನಿರ್ಣಾ, ಶಂಕರ ಬಾಬು, ಹಣಮಂತ ಪಂಚಭಾಯಿ, ಗೋಪಾಲರಾವ್, ಸುನೀಲಕುಮಾರ, ಡಾ.ಮಠಪತಿ, ರಾಜಶೇಖರ ಶೆಟಕಾರ್ ಮೊದಲಾದವರು ಇದ್ದರು.

ಬಾಬುರಾವ್ ಮಡಕಿ ಸ್ವಾಗತಿಸಿದರು. ಶ್ರೀಕಾಂತ ತೂಗಾ ನಿರೂಪಿಸಿದರು. ಮಲ್ಲಿಕಾರ್ಜುನ ಕಾಮಾ ವಂದಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವ ಮಂತ್ರ ಘೋಷಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-33-1564055532

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.