ಬೀದರ್: ‘ಬಸವಾದಿ ಶರಣರು ಸತ್ಯದ ಆರಾಧಕರಾಗಿದ್ದರು. ಸತ್ಯವೇ ದೇವರೆಂದು ಮನಗಂಡಿದ್ದರು’ ಎಂದು ನಿವೃತ್ತ ಪ್ರಾಚಾರ್ಯೆ ಲೀಲಾವತಿ ಚಕೋತೆ ತಿಳಿಸಿದರು.

ನಗರದ ಮೈಲೂರಿನ ಡಾ.ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ 185 ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಹಾಗೂ ಡಾ. ತೋಂಟದ ಸಿದ್ಧಲಿಂಗ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರು ಹೇಳುವಂತೆ ಸತ್ಯವೇ ದೇವಲೋಕ, ಮಿಥ್ಯವೇ ಮರ್ತ್ಯ ಲೋಕ. ಸತ್ಯದಲ್ಲಿ ಅದ್ಭುತ ಶಕ್ತಿ ಇದೆ. ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಂತ್ರವನ್ನು ಜೀವನದ ಉಸಿರಾಗಿಸಿಕೊಂಡು ಬದುಕಿದವರು. ಅವರೊಬ್ಬರು ಕನ್ನಡದ ಗುರುಗಳಾಗಿದ್ದು, ನಡೆದಾಡುವ ದೇವರೆಂದೆ ಮನೆ ಮಾತಾಗಿದ್ದಾರೆ ಎಂದರು.

ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಮಕ್ಕಳು ಪ್ರೀತಿ, ಗೌರವ, ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರದಿಂದ ಕಷ್ಟಪಟ್ಟು ಅಧ್ಯಯನ ಮಾಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಮಾತನಾಡಿ, ಬಸವಲಿಂಗ ಪಟ್ಟದ್ದೇವರು ಶೈಕ್ಷಣಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಮಾಜ ಸೇವೆ ಮಾಡುತ್ತಿರುವುದು ಮಠಾಧೀಶರಿಗೆ ಮಾದರಿಯಾಗಿದ್ದಾರೆ. ಹೀರೆಮಠ ಸಂಸ್ಥಾನದ ಪರಂಪರೆ ನೋಡಿದರೆ ಡಾ. ಚನ್ನಬಸವ ಪಟ್ಟದ್ದೇವರು ಕರ್ನಾಟಕ ಏಕೀಕರಣಕ್ಕಾಗಿ ದೊಡ್ಡ ಚಳವಳಿ ಮಾಡಿದ್ದಾರೆ ಎಂದರು. ಭಾಲ್ಕಿ ಹೀರೆಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕಿ ಸುವರ್ಣಾ ಚಿಮಕೋಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ಪ್ರತಿಜ್ಞಾ ಮತ್ತು ಅರ್ಪಿತಾ ವಚನ ಚಿಂತನೆ ಮಾಡಿದರು.

ಡಾ. ತೋಂಟದ ಸಿದ್ಧಲಿಂಗ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು. ಡಾ.ದೇವಕಿ ನಾಗೂರೆ ಅವರು ರಾವಬಹದ್ದೂರ್ ಮತ್ತು ತೋಂಟದ ಸಿದ್ಧಲಿಂಗ ಪ್ರೌಢಶಾಲೆಯ ಪ್ರವೇಶ ಕರಪತ್ರ ಬಿಡುಗಡೆ ಮಾಡಿದರು.

ವೇದಿಕೆಯ ಮೇಲೆ ಉಮಾಕಾಂತ ಮೀಸೆ, ಮುಖ್ಯಶಿಕ್ಷಕಿ ಸುಧಾ ನಾಯಕ, ರಾಜು ಜುಬ್ರೆ ಇದ್ದರು. ಚನ್ನಬಸಪ್ಪ ನೌಬಾದೆ, ಮಾಣಿಕೇಶ್ವರಿ ಮತ್ತು ಗುರುಚರಣ ವಚನ ಗಾಯನ ಮಾಡಿದರು. ಪ್ರವೀಣ ಜರ್ಗೆ ಸ್ವಾಗತಿಸಿದರು. ನೇಹಾ ವೀರಶೆಟ್ಟಿ ನಿರೂಪಿಸಿದರು. ವೈಷ್ಣವಿ ಬಸವರಾಜ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-33-1519791231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.