ಬೀದರ್: ಅಕ್ಕ ಅನ್ನಪೂರ್ಣತಾಯಿ ಅವರ ದ್ವಿತೀಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಬಸವೋತ್ಸವದ ಮೆರವಣಿಗೆ ನಗರದಲ್ಲಿ ಭಾನುವಾರ ಸಡಗರ ಸಂಭ್ರಮದಿಂದ ನಡೆಯಿತು.

ಭಾನುವಾರ ನಡೆದ ಮೆರವಣಿಗೆಯಲ್ಲಿ ಶರಣ–ಶರಣೆಯರು ತಲೆಯ ಮೇಲೆ ವಚನದ ಕಟ್ಟುಗಳನ್ನು ಹೊತ್ತು ಹೆಜ್ಜೆ ಹಾಕಿದರು

ವಚನ ವಿಜಯೋತ್ಸವ ಹೆಸರಿನಲ್ಲಿ ನಡೆದ ಮೆರವಣಿಗೆ ಶಿವನಗರದ ಬಸವ ಉದ್ಯಾನದಿಂದ ಆರಂಭಗೊಂಡಿತು. ಪಾಪನಾಶ ಗೇಟ್, ಪಾಪನಾಶ ದೇಗುಲ ಮಾರ್ಗವಾಗಿ ಹಾದು ಬಸವಗಿರಿಯ ಅಕ್ಕ ಅನ್ನಪೂರ್ಣತಾಯಿ ಅವರ ಐಕ್ಯ ಮಂಟಪದ ಬಳಿ ಸಮಾರೋಪಗೊಂಡಿತು.

ಅಲಂಕರಿಸಿದ ವಾಹನದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಇರಿಸಿ, ಪೂಜಿಸಲಾಯಿತು. ಷಟ್ಸ್ಥಲ ಧ್ವಜಗಳು, ಛತ್ರಿ-ಚಾಮರಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ಶರಣ–ಶರಣೆಯರು ತಲೆಯ ಮೇಲೆ ವಚನದ ಕಟ್ಟುಗಳನ್ನು ಹೊತ್ತು, ವಚನಗಳಿಗೆ ಹಾಡುತ್ತ, ನಲಿಯುತ್ತ ಹೆಜ್ಜೆ ಹಾಕಿದರು. ಬಸವ ಮಂತ್ರ ಘೋಷಗಳು ಮೊಳಗಿದವು.

ಡಿಜೆದಲ್ಲಿ ಬಸವೋತ್ಸವ, ವಚನ ವಿಜಯೋತ್ಸವ ಗೀತೆ ಮೊಳಗಿದಾಗ ಭಕ್ತರ ಉತ್ಸಾಹ ಮೇರೆ ಮೀರಿತ್ತು. ಯುವಕರು, ಶರಣ-ಶರಣೆಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬಸವ ಉದ್ಯಾನದಲ್ಲಿ ಮೆರವಣಿಗೆ ಸಮಿತಿಯ ಅಧ್ಯಕ್ಷ ರಾಜಕುಮಾರ ಪಾಟೀಲ, ಅಭಿಷೇಕ ಮಠಪತಿ ಹಾಗೂ ಹಣ್ಮು ಪಾಜಿ ಗುರು ಪೂಜೆ ನೆರವೇರಿಸಿದರು. ಬೆಳಗಾವಿಯ ಶರಣ ವಿಚಾರ ವಾಹಿನಿಯ ಅಯ್ಯಾರ ಮಠಪತಿ ಅವರು ವಚನ ಓದಿಸಿ, ಮೆರವಣಿಗೆಗೆ ಚಾಲನೆ ನೀಡಿದರು.

ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ, ಸ್ವತಃ ತಲೆ ಮೇಲೆ ಲಿಂಗಾಯತ ಧರ್ಮ ಗ್ರಂಥದ ಗುರುವಚನದ ಪ್ರತಿ ಇಟ್ಟುಕೊಂಡು ಮೆರವಣಿಗೆಯಲ್ಲಿ ನಡೆದರು.

ಸಾಹಿತಿ ರಮೇಶ ಮಠಪತಿ, ಪ್ರಮುಖರಾದ ಮಾಣಿಕಪ್ಪ ಗೋರನಾಳೆ, ಸಿ.ಎಸ್. ಪಾಟೀಲ, ಬಾಬುವಾಲಿ, ಜೈರಾಜ ಖಂಡ್ರೆ, ಮಲ್ಲಿಕಾರ್ಜುನ ಔರಾದೆ, ಚನ್ನಬಸಪ್ಪ ಹಂಗರಗಿ, ಜಗನ್ನಾಥ ಚಿಮಕೋಡೆ, ನೀಲಮ್ಮ ರೂಗನ್, ಸಂಗೀತಾ ಆರ್. ಪಾಟೀಲ, ಓಂಕಾರ ಕೌಟೆ, ಪ್ರಕಾಶ ಮಠಪತಿ, ಅಶೋಕ ಎಲಿ, ಬಸವರಾಜ ಶೇರಿಕಾರ್, ವಿಶ್ವನಾಥ ಬಿರಾದಾರ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-33-1501515248

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.