ಭಾಲ್ಕಿ: ಇಲ್ಲಿನ ಬ್ರಿಮ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ವೈದ್ಯನ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದ್ದನ್ನು ಖಂಡಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿ ಭಾಲ್ಕಿ ವೈದ್ಯರ ಸಂಘದವರು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ಗೆ ಸಲ್ಲಿಸಿದರು.

ಬಳಿಕ ಮಾತನಾಡಿದ ತಾಲ್ಲೂಕು ವೈದ್ಯರ ಸಂಘದ ಅಧ್ಯಕ್ಷ ಆರ್.ಎನ್.ಜಾಧವ, ‘ಕರ್ತವ್ಯನಿರತ ವೈದ್ಯ ತುಕಾರಾಮ ಅವರ ಮೇಲೆ ಮಧ್ಯರಾತ್ರಿ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಏಕಾಏಕಿ ಪುಂಡರ ಗುಂಪು ಮನಬಂದಂತೆ ಥಳಿಸಿ, ಜೀವ ಬೆದರಿಕೆ ಹಾಕಿದ್ದು ಹೇಯ ಕೃತ್ಯವಾಗಿದೆ. ಹಲ್ಲೆಕೋರರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಜಿಲ್ಲಾಡಳಿತ ಎಚ್ಚರವಹಿಸಬೇಕು’ ಎಂದು ಆಗ್ರಹಿಸಿದರು.

ಅಮಿತ್ ಅಷ್ಟೂರೆ, ‘ಎಲ್ಲ ವೈದ್ಯರಿಗೆ ಎಲ್ಲ ಕಾಲದಲ್ಲಿ, ಎಲ್ಲ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ವೈದ್ಯರಾದ ವಸಂತ ಪವಾರ್ಡಾ, ಶೈಲಜಾ ತಳವಾಡೆ, ನಿತೀನ ಪಾಟೀಲ, ಯುವರಾಜ ಜಾಧವ, ಧನರಾಜ ಹುಲಸೂರೆ, ವಿಕ್ರಮ ದೇವಪ್ಪ, ವಿಲಾಸ ಕನಸೆ, ಸಜ್ಜಲ್ ಬಳತೆ, ಶರತ ತುಕದೆ, ಗುಂಡೇರಾವ್ ಶೆಡೋಳೆ, ಮಂಜುನಾಥ ಸ್ವಾಮಿ, ಶಿವಾಜಿ ಗುರ್ದಾಳೆ, ಉದ್ಧವ ಕನಸೆ, ಲೋಕರೆ, ಲಕ್ಷ್ಮೀಕಾಂತ ಐನಾಪೂರೆ, ಸಂಗಮಕರ್ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-33-1308091230

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.