ಬೀದರ್: ‘ರಾಜ್ಯ ಕಾಂಗ್ರೆಸ್ ಸರ್ಕಾರ ಮೇ20ರಂದು ಮೂರು ವರ್ಷ ಪೂರೈಸುತ್ತಿದೆ. ಈ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ದಿವಾಳಿ ಎದ್ದಿದೆ, ಅಭಿವೃದ್ಧಿ ಹಳ್ಳ ಹಿಡಿದಿದೆ. ಆಡಳಿತ ವ್ಯವಸ್ಥೆ ಕುಸಿದಿದೆ. ಖಾಲಿ ಖಜಾನೆ ಭರ್ತಿಗೆ ಬೆಲೆಯೇರಿಕೆ, ತೆರಿಗೆ ಹೆಚ್ಚಳದ ಭಾರ ಹಾಕಿ, ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ದುರ್ಬರ ಮಾಡಿದೆ. ಇಂಥದ್ದರಲ್ಲಿ ಸರ್ಕಾರ ಸಾರ್ಥಕ, ಸಾಧನಾ ಸಮಾವೇಶ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆದ ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಟೀಕಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಥ ಕೆಟ್ಟ, ಭ್ರಷ್ಟ, ಜನ ವಿರೋಧಿ, ರೈತ ವಿರೋಧಿ ಹಾಗೂ ಬಡವರ ವಿರೋಧಿ ಸರ್ಕಾರ ನಡೆಯುತ್ತಿದೆ. ಆಡಳಿತದ ಎಲ್ಲ ರಂಗಗಳಲ್ಲೂ ಈ ಸರ್ಕಾರ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯದ ಜನರ ವಿಶೇಷವಾಗಿ ಬಡವರ, ಹಿಂದುಳಿದವರ, ರೈತರ, ಮಧ್ಯಮ ವರ್ಗದವರ ಬದುಕನ್ನೇ ಈ ಸರ್ಕಾರ ಭಾರ ಮಾಡಿದೆ. ಮೂರು ವರ್ಷಗಳಲ್ಲಿ 300ಕ್ಕೂ ಹೆಚ್ಚು ವೈಫಲ್ಯಗಳ ದೊಡ್ಡ ಪಟ್ಟಿಯೇ ಇದೆ. ಈ ಸರ್ಕಾರಕ್ಕೆ ಸಾಧನೆ ಸಮಾವೇಶ ಮಾಡುವ ನೈತಿಕತೆಯೇ ಇಲ್ಲ ಎಂದು ಮಂಗಳವಾರ ಜಂಟಿಯಾಗಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸರ್ಕಾರ ಸತತ ಹೆಣಗಾಡುತ್ತಿದೆ. ಖಜಾನೆ ಬರಿದಾದ ಕಾರಣ ಸರ್ಕಾರ ಆರ್ಥಿಕ ದಿವಾಳಿ ಹಂತಕ್ಕೆ ಬಂದು ನಿಂತಿದೆ. ರಾಜ್ಯದ ಒಟ್ಟು ಸಾಲ ₹7.64 ಲಕ್ಷ ಕೋಟಿಗೇರಿದೆ. ಕಳೆದ ಒಂದೇ ವರ್ಷದಲ್ಲಿ ₹1.16 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಅಭಿವೃದ್ಧಿ ಕೆಲಸ ಅಕ್ಷರಶಃ ಸ್ಥಗಿತವಾಗಿವೆ. ಹಳೆ ಯೋಜನೆಗಳು ಹಳಿ ತಪ್ಪಿದರೆ, ಹೊಸ ಯೋಜನೆಗಳಿಗೆ ಬರೀ ಕಲ್ಲು ಹಾಕಿ, ಶಂಕುಸ್ಥಾಪನೆ ಮಾಡಿ ಕೈ ತೊಳೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಶಕ್ತಿ ಯೋಜನೆ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ದೊಡ್ಡ ಪೆಟ್ಟು ಕೊಟ್ಟಿದೆ. ಒಂದು ಟೈರ್ ಬದಲಿಸಬೇಕಾದರೆ ವಾರಗಟ್ಟಲೇ ಕಾಯುವ ಸ್ಥಿತಿ ಬಂದಿದೆ. 8-10 ಲಕ್ಷ ಕಿ.ಮೀ ಓಡಿ, ಗುಜರಿಗೆ ಸೇರಬೇಕಾದ ಸಾವಿರಾರು ಬಸ್ ಗಳು ಹಾಗೆಯೇ ಓಡಿಸುತ್ತಿದ್ದು, ಜನ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವ ಸ್ಥಿತಿ ಎದುರಾಗಿದೆ. ಗೃಹಜ್ಯೋತಿ ಯೋಜನೆ ಎಲ್ಲ ವಿದ್ಯುತ್ ಸಂಸ್ಥೆಗಳನ್ನೇ ಕತ್ತಲಲ್ಲಿ ಮುಳುಗಿಸಿದೆ. ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಹಣ ಬರುತ್ತಿಲ್ಲ. ಕಾಂಗ್ರೆಸ್ ಸಚಿವ, ಶಾಸಕರೇ ಗ್ಯಾರಂಟಿ ಬಗ್ಗೆ ತಗಾದೆ ಎತ್ತಿ ಈ ಯೋಜನೆ ಬಂದ್ ಮಾಡಿದರೆ ಉತ್ತಮ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಸರ್ಕಾರ ಬಂದ ಮೇಲೆ ಅಕ್ರಮ, ಭ್ರಷ್ಟಾಚಾರ ಹೆಚ್ಚಾಗಿದ್ದು ಇಡೀ ವ್ಯವಸ್ಥೆಯೇ ಹಾಳಾಗಿದೆ. ಮುಡಾ ಹಗರಣ ಸ್ವತಃ ಮುಖ್ಯಮಂತ್ರಿಗೆ ಕಟಕಟೆಯಲ್ಲಿ ನಿಲ್ಲಿಸಿದೆ. ವಾಲ್ಮೀಕಿ ಹಗರಣ ಈ ಸರ್ಕಾರದ ಭ್ರಷ್ಟ ಮುಖದ ಅನಾವರಣ ಮಾಡಿದೆ. ಸಚಿವರೇ ಜೈಲಿಗೆ ಹೋಗಿ ಬಂದಿದ್ದಾರೆ. ಅಬಕಾರಿ ಹಗರಣ, ವರ್ಗಾವಣೆ ಅಕ್ರಮ, ಬಿಡಿಎ ಸೈಟ್ ಹಂಚಿಕೆ, ಔಷಧ ಖರೀದಿ, ಕಾರ್ಮಿಕ ಕಿಟ್, ಕೆಪಿಎಸ್ಸಿ ನೇಮಕ, ವೈದ್ಯಕೀಯ ಉಪಕರಣ ಖರೀದಿ ಹೀಗೆ ಹತ್ತಾರು ಅಕ್ರಮಗಳು ಬೆಳಕಿಗೆ ಬಂದಿವೆ. ನಮ್ಮದು ಪಾರದರ್ಶಕ ಸರ್ಕಾರ ಎಂದು ಸರ್ಕಾರದಲ್ಲಿದ್ದವರು ಹೇಳುತ್ತಿದ್ದಾರೆ. ಆದರೆ, ಅಕ್ರಮ, ಭ್ರಷ್ಟಾಚಾರವೇ ಇವರ ಪಾರದರ್ಶಕತೆಯಾಗಿದೆ ಎಂದು ಹೇಳಿದ್ದಾರೆ.

ಈ ಸರ್ಕಾರ ಬಂದ ಮೇಲೆ ಸಮಾಜದಲ್ಲಿ ಜಾತಿ, ಜಾತಿ ನಡುವೆ ಜಗಳ ಹಚ್ಚಿ ಇಡೀ ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಿಸುವ ಕೆಲಸ ಮಾಡಲಾಗುತ್ತಿದೆ. ತುಷ್ಟೀಕರಣ ರಾಜಕಾರಣ ಮಾಡಿ, ಒಂದು ಸಮಾಜಕ್ಕೆ ಎತ್ತಿ ಕಟ್ಟಿ ಎಲ್ಲೆಡೆ ದಬ್ಬಾಳಿಕೆ, ದೌರ್ಜನ್ಯ ನಡೆಯುವಂಥ ಕೆಲಸ ಮಾಡುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದ್ದು, ಸಮಾಜಘಾತುಕ ಶಕ್ತಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಎಲ್ಲೆಡೆ ಕಿಡಿಗೇಡಿಗಳು ‘ಆ್ಯಕ್ಟಿವ್’ ಆಗಿದ್ದಾರೆ. ಸರ್ಕಾರದ ಹಿಂದುತ್ವ ವಿರೋಧಿ ನೀತಿಯಿಂದಾಗಿ ಹಿಂದುಪರ ಹೋರಾಟಗಾರರು ಭಯದಲ್ಲಿ ಕಾಲ ಕಳೆಯುವ ಪರಿಸ್ಥಿತಿ ಬಂದಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಪಾಲಿಸದೆ ಗೋವುಗಳ ಮಾರಣ ಹೋಮಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರದ ಪಾಪದ ಕೊಡ ತುಂಬಿದ್ದು, ಜನತೆ ಪಾಠ ಕಲಿಸುವ ದಿನ ಹತ್ತಿರವಾಗಿವೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-33-287399303

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.