ಬೀದರ್: ರಾಷ್ಟ್ರೀಯ ಬಸವ ದಳ ಬೀದರ್, ಲಿಂಗಾಯತ ಸಮಾಜ ಮತ್ತು ಬಸವ ಮಂಟಪದ ಆಶ್ರಯದಲ್ಲಿ ಮಾಸಿಕ ಬಸವಜ್ಯೋತಿ, ಬುದ್ಧ–ಬಸವ–ಅಂಬೇಡ್ಕರ್ ಜಯಂತಿ ಸಮಾರಂಭವನ್ನು ನಗರದ ಮೈಲೂರಿನಲ್ಲಿ ಇತ್ತೀಚೆಗೆ ಆಚರಿಸಲಾಯಿತು.

ಮನೋಹರ ಘಾಳೆಪ್ಪ ಮಾತನಾಡಿ, ಬುದ್ಧನ ಅಹಿಂಸೆ, ಕರುಣೆ ಮತ್ತು ಮಾನವೀಯತೆ ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಗೆ ಮಾರ್ಗದರ್ಶಕ. ಬಸವಣ್ಣನ ‘ಕಾಯಕವೇ ಕೈಲಾಸ’ ಮತ್ತು ‘ದಾಸೋಹ’ ತತ್ವಗಳು ಶ್ರಮಕ್ಕೆ ಗೌರವ, ಸಮಾನತೆ ಮತ್ತು ವರ್ಣವ್ಯವಸ್ಥೆಯ ವಿರೋಧವನ್ನು ಸಾರುತ್ತವೆ ಎಂದು ಹೇಳಿದರು.

ಅಂಬೇಡ್ಕರ್ ಅವರ ಸಂವಿಧಾನಿಕ ಮೌಲ್ಯಗಳು ಸಮಾನ ಹಕ್ಕು, ಶಿಕ್ಷಣದ ಮಹತ್ವ ಮತ್ತು ಸಾಮಾಜಿಕ ನ್ಯಾಯವನ್ನು ಸ್ಥಾಪಿಸಲು ಮುಖ್ಯವಾಗಿವೆ. ಈ ಮೂವರ ಚಿಂತನೆಗಳನ್ನು ತತ್ವಗಳಾಗಿ ಒಗ್ಗೂಡಿಸಿ, ಇಂದಿನ ಸಮಾಜದಲ್ಲಿ ಜಾತಿ-ಮತ ಭೇದವಿಲ್ಲದೆ ಸಮಾನತೆ, ಮಹಿಳಾ ಸಬಲೀಕರಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಬಸವಾನಂದ ಗಡ್ಡೆ ವಚನ ಗಾಯನ, ಪ್ರಾರ್ಥನೆ ಮತ್ತು ಸ್ವಾಗತ ನಡೆಸಿಕೊಟ್ಟರು. ಬಸವರಾಜ ಬಿರಾದಾರ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-33-1480503020

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.