ಅಲಿಯಂಬರ್(ಜನವಾಡ): ‘ಗೌತಮ ಬುದ್ಧರ ತತ್ವಗಳ ಪಾಲನೆಯಿಂದ ವಿಶ್ವದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲು ಸಾಧ್ಯವಿದೆ’ ಎಂದು ಆಣದೂರಿನ ಭಂತೆ ಜ್ಞಾನಸಾಗರ್ ಹೇಳಿದರು.

ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದ ತಕ್ಷಶೀಲ ಬುದ್ಧ ವಿಹಾರದಲ್ಲಿ ಚೈತ್ರ ಪೂರ್ಣಿಮೆ ನಿಮಿತ್ತ ಗುರುವಾರ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗೌತಮ ಬುದ್ಧರ ತತ್ವಗಳು ಶ್ರೇಷ್ಠವಾಗಿವೆ. ಹೀಗಾಗಿಯೇ ಮಹಾಜ್ಞಾನಿ ಆಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರು’ ಎಂದು ತಿಳಿಸಿದರು.

‘ಜೀವನ ಮುಕ್ತಿ ಹೊಂದಲು ಧರ್ಮ ಮಾರ್ಗದಲ್ಲಿ ನಡೆಯಬೇಕು. ಮೂಢ ಆಚರಣೆಗಳಿಂದ ದೂರ ಇರಬೇಕು’ ಎಂದು ಹೇಳಿದರು.

ಆಣದೂರಿನ ಭಂತೆ ಧಮ್ಮಾನಂದ ಮಹಾಥೆರೋ ಕಾರ್ಯಕ್ರಮ ಉದ್ಘಾಟಿಸಿದರು.

ಭಂತೆ ಕರುಣಾನಂದ, ಭಂತೆ ಸಂಘಸೇವಕ, ಮಾತೆ ಅರ್ಚಸ್ಮತಿ, ಪ್ರಮುಖರಾದ ವೀರಶೆಟ್ಟಿ ಕಟ್ಟೆ, ಸಂತೋಷ್ ಪಡಸಲೆ, ಸಂಗಮೇಶ ಬಾವಿದೊಡ್ಡಿ, ಧರ್ಮೇಂದ್ರ ಯರನಳ್ಳಿ, ಶಂಕರ ಚೊಂಡಿ, ತುಕಾರಾಮ ಜನವಾಡ, ರಾಜಕುಮಾರ ಹಾಲಹಿಪ್ಪರ್ಗೆ, ರಮೇಶ ಬಾವಿದೊಡ್ಡಿ, ರಾಜಕುಮಾರ ಬಾವಿದೊಡ್ಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-33-2138060994

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.