ಚಿದ್ರಿ(ಜನವಾಡ): ಬೀದರ್ ತಾಲ್ಲೂಕಿನ ಚಿದ್ರಿಯ ಬುತ್ತಿ ಬಸವಣ್ಣ ದೇವಸ್ಥಾನದ 26ನೇ ಜಾತ್ರಾ ಮಹೋತ್ಸವ ಏ.17ರಿಂದ 21ರವರೆಗೆ ಜರುಗಲಿದೆ.

17ರಂದು ಬೆಳಿಗ್ಗೆ 6ಕ್ಕೆ ನಂದಿ ಬಸವಣ್ಣ ಮೂರ್ತಿಗೆ ರುದ್ರಾಭಿಷೇಕ ಜರುಗಲಿದೆ. ಬೆಳಿಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ಸಿಗಲಿದೆ. ಸಂಜೆ 7ಕ್ಕೆ ಬೇಮಳಖೇಡ ಹಿರೇಮಠ ಸಂಸ್ಥಾನದ ರಾಜಶೇಖರ ಶಿವಾಚಾರ್ಯರು ಪ್ರವಚನ ನಡೆಸಿಕೊಡಲಿದ್ದಾರೆ. 18ರಂದು ಸಂಜೆ 7ಕ್ಕೆ ಮಾತೆ ಬಸವಾಂಜಲಿ ಅವರಿಂದ ಪ್ರವಚನ, ರಾತ್ರಿ 9ಕ್ಕೆ ಸಂಗೀತ, 19ರಂದು ಸಂಜೆ 7ಕ್ಕೆ ರಾಜಶೇಖರ ಶಿವಾಚಾರ್ಯರು, ಅಭಿನವ ಶಂಕರಲಿಂಗ ಮಹಾರಾಜರಿಂದ ಪ್ರವಚನ ನಡೆಯಲಿದೆ. 20ರಂದು ಬೆಳಿಗ್ಗೆ 8ಕ್ಕೆ ಬುತ್ತಿ ಬಸವಣ್ಣ ದೇಗುಲದಿಂದ ಬೀದರ್ನಲ್ಲಿ ಬೈಕ್ ರ್ಯಾಲಿ, ಸಂಜೆ 6ಕ್ಕೆ ಬಸವಣ್ಣನ ತೊಟ್ಟಿಲು, ರಾತ್ರಿ 9ಕ್ಕೆ ಲಕ್ಷ ದೀಪೋತ್ಸವ, ರಾತ್ರಿ 10ಕ್ಕೆ ನಂದಿ ಬಸವಣ್ಣ ಪಲ್ಲಕ್ಕಿ ಮೆರವಣಿಗೆ, 21ರಂದು ಸಂಜೆ 7ಕ್ಕೆ ವೇದಿಕೆ ಸಮಾರಂಭ ಹಾಗೂ ರಾತ್ರಿ 10ಕ್ಕೆ ರಥೋತ್ಸವ ಜರುಗಲಿದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-33-352775955

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.