ಬೀದರ್: ‘ಗೋಡಂಬಿ ಬೆಳೆಯಲು ಬೀದರ್ ಜಿಲ್ಲೆಯ ಮಣ್ಣು, ಹವಾಮಾನ ಪೂರಕವಾಗಿದ್ದು, ರೈತರು ಇದರ ಬಗ್ಗೆ ಚಿಂತಿಸಬಹುದು’ ಎಂದು ತೋಟಗಾರಿಕೆ ಕಾಲೇಜಿನ ಡೀನ್ ಎಸ್.ವಿ. ಪಾಟೀಲ ತಿಳಿಸಿದರು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೊಚ್ಚಿಯ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಅನುದಾನದ ಅಡಿಯಲ್ಲಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಗೋಡಂಬಿ ಬೆಳೆ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಶೇ.70 ರಷ್ಟು ಗೋಡಂಬಿಯನ್ನು ಕರಾವಳಿ ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಉಡುಪಿ ಜಿಲ್ಲೆ, ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನದಲ್ಲಿದೆ. ಮಂಗಳೂರು ದೇಶದ ಗೋಡಂಬಿ ರಾಜಧಾನಿ ಎಂದು ಕರೆಸಿಕೊಂಡಿದೆ. ಗೋಡಂಬಿ ಬೆಳೆ ಕಡಿಮೆ ನೈಸರ್ಗಿಕ ಸಂಪನ್ಮೂಲ ಬಳಸಿ ಅಧಿಕ ಲಾಭ ಕೊಡುವ ಬೆಳೆಯಾಗಿದೆ. ಗೋಡಂಬಿ ಆರ್ಥಿಕವಾಗಿ ಲಾಭದಾಯಕ ಬೆಳೆ. ಇದನ್ನು ಬೆಳೆಯಲು ಬೀದರ್ ಜಿಲ್ಲೆಯ ಜನ ಕೂಡ ಮುಂದಾಗಬೇಕೆಂದು ಸಲಹೆ ಮಾಡಿದರು.

ಗೋಡಂಬಿ ಬೆಳೆಗಾರರಾದ ವೈಜಿನಾಥ ನಿಡೋದಾ, ನಾರಾಯಣರಾವ್ ಬರಿದಾಬಾದೆ ಮಾತನಾಡಿ, ಒಂದು ಸಲ ಗೋಡಂಬಿ ಬೆಳೆಸಿದರೆ 30 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ನಿರಂತರವಾಗಿ ಲಾಭ ಪಡೆಯಬಹುದು. ಇದಕ್ಕೆ ಕೆಂಪು ಮಣ್ಣು ಸೂಕ್ತವಾದುದು ಎಂದು ಹೇಳಿದರು.

ಮುಹಮ್ಮದ್ ಫಾರೂಕ್, ಶ್ರೀನಿವಾಸ್ ಎನ್., ಸಹಾಯಕ ಪ್ರಾಧ್ಯಾಪಕ ವಿಜಯಮಹಾಂತೇಶ, ವಿ.ಪಿ.ಸಿಂಗ್ , ವೀರಭದ್ರೇಶ್ವರ ಅಗ್ರೋ ಇಂಡಸ್ಟ್ರಿಸ್ನ ಸಿಇಒ ಅಮೋಲ್ಕುಮಾರ್ ವಿಜಾಪುರೆ ಮತ್ತಿತರರು ಇದ್ದರು. ವಿದ್ಯಾಶ್ರೀ ಪ್ರಾರ್ಥನೆ ಗೀತೆ ಹಾಡಿದರು. 150 ಜನ ರೈತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-33-509917339

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.