ಚಿದ್ರಿ(ಜನವಾಡ): ಬೀದರ್ ತಾಲ್ಲೂಕಿನ ಚಿದ್ರಿಯಲ್ಲಿ ಐದು ದಿನಗಳ ಬುತ್ತಿ ಬಸವಣ್ಣ ದೇವಸ್ಥಾನದ 26ನೇ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ದೊರೆಯಿತು. ದೇಗುಲದ ಪರಿಸರದಲ್ಲಿ ಧರ್ಮ ಧ್ವಜಾರೋಹಣದೊಂದಿಗೆ ಜಾತ್ರೆ ಚಟುವಟಕೆಗಳು ಆರಂಭಗೊಂಡವು.

ಮೊದಲ ದಿನ ದೇವಸ್ಥಾನದಲ್ಲಿ ನಂದಿ ಬಸವಣ್ಣನ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಪ್ರಸಾದ ವಿತರಣೆ ಮೊದಲಾದ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಬುತ್ತಿ ಬಸವಣ್ಣನ ದರ್ಶನ ಪಡೆದರು.

ಮುಖಂಡ ಪಂಡಿತರಾವ ಚಿದ್ರಿ, ಜಿ.ಪಂ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ದೇವಸ್ಥಾನದ ಅಧ್ಯಕ್ಷ ರಮೇಶ ಮಾಶೆಟ್ಟಿ, ಉಪಾಧ್ಯಕ್ಷ ವೀರಶೆಟ್ಟಿ ಮಾಶೆಟ್ಟಿ, ಕಾರ್ಯದರ್ಶಿ ಸಂಗಶೆಟ್ಟಿ ಸಿದ್ದೇಶ್ವರ, ನಿರ್ದೇಶಕ ಸಂಜು ಮಾಶೆಟ್ಟಿ, ಸಂದೀಪ ಮಾಶೆಟ್ಟಿ, ಅನಿಲ ಮಾಶೆಟ್ಟಿ, ಮನೋಜ ಪಾಟೀಲ, ಬಸವರಾಜ ಗೊಂದೆಗಾಂವ, ವಿನೋದಕುಮಾರ ಪಾಟೀಲ, ಗಿರೀಶ್ ಪಾಟೀಲ, ರಾಜಕುಮಾರ ಬಿರಾದಾರ, ಕಲ್ಯಾಣರಾವ್ ಬಿರಾದಾರ, ಚಂದ್ರಕಾಂತ ಹುಮನಾಬಾದೆ, ಭಾಗವಹಿಸಿದ್ದರು.

ಪ್ರವಚನ 20ರಂದು: ಜಾತ್ರೆ ನಿಮಿತ್ತ ಏಪ್ರಿಲ್ 20ರಂದು ಸಂಜೆ 7ಕ್ಕೆ ದೇವಸ್ಥಾನದ ಆವರಣದಲ್ಲಿ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಬಸವಲಿಂಗ ಅವಧೂತರು ಪ್ರವಚನ ನೀಡಲಿದ್ದಾರೆ ಎಂದು ದೇವಸ್ಥಾನದ ಕಾರ್ಯದರ್ಶಿ ಸಂಗಶೆಟ್ಟಿ ಸಿದ್ಧೇಶ್ವರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-33-600640763

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.