ಬೀದರ್: ಬಾಲ್ಯ ವಿವಾಹ ಸಮಾಜದ ಪಿಡುಗಾಗಿದ್ದು, ಬಾಲ್ಯ ವಿವಾಹವನ್ನು ತಡೆಗಟ್ಟಲು ಸಾರ್ವಜನಿಕರು ಅಧಿಕಾರಿಗಳೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

‘ಬಾಲ್ಯ ವಿವಾಹವು ಅಭಿವೃದ್ಧಿಗೆ ಮಾರಕವಾಗಿರುವ ಸಮಸ್ಯೆಯಾಗಿದೆ. ಬಾಲ್ಯ ವಿವಾಹವನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ. ಬಾಲ್ಯ ವಿವಾಹವು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹ ನಿಷೇಧ ಕಾಯ್ದೆ -2006ರ ಪ್ರಕಾರ 18 ವರ್ಷದೊಳಗಿನ ಯಾವುದೇ ಹೆಣ್ಣು ಮಗುವಿಗೆ ಹಾಗೂ 21 ವರ್ಷದೊಳಗಿನ ಯಾವುದೇ ಗಂಡು ಮಗುವಿಗೆ ಮದುವೆಯಾದಲ್ಲಿ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗಿದೆ. ಈ ಕಾಯ್ದೆ ಪ್ರಕಾರ ಬಾಲ್ಯ ವಿವಾಹ ಆದಲ್ಲಿ ಕೇವಲ ಮದುವೆಯಾಗುವ ವಯಸ್ಕನಿಗೆ ಹಾಗೂ ಹುಡುಗಿಯ ತಂದೆ ತಾಯಿಗಳಿಗಲ್ಲದೇ, ಪೂಜಾರಿಗಳು, ಸಂಬಂಧಿಕರು, ಪ್ರೇರೇಪಿಸಿದವರು, ಉತ್ತೇಜನ ನೀಡಿದವರು, ಬಾಲ್ಯ ವಿವಾಹ ತಡೆಯಲು ವಿಫಲರಾದವರು ಮತ್ತು ಭಾಗವಹಿಸಿದವರು ಎಲ್ಲರೂ ಅಪರಾಧಿಗಳೇ ಆಗುತ್ತಾರೆ’ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿ ತಿಳಿಸಿದ್ದಾರೆ.

‘ಇಂಥವರ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿರುತ್ತದೆ. ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2016ರ ಪ್ರಕಾರ ತಪ್ಪಿತಸ್ಥರಿಗೆ ಕನಿಷ್ಠ 1 ವರ್ಷದಿಂದ ಗರಿಷ್ಠ 2 ವರ್ಷಗಳ ವರೆಗೆ ಕಾರಾಗೃಹವಾಸ ಮತ್ತು ₹1 ಲಕ್ಷ ವರೆಗೆ ದಂಡ ಅಥವಾ ಎರಡೂ ವಿಧಿಸಬಹುದು. ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸುವವರು ಮತ್ತು ಪೂಜಾರಿಗಳು, ಪೌರೋಹಿತ್ಯ ನಡೆಸುವವರು, ಮದುವೆಗಳನ್ನು ನೆರೆವೇರಿಸುವ ಮಠ/ಚರ್ಚ್/ಮಸೀದಿಗಳ ಧಾರ್ಮಿಕ ಮುಖಂಡರು, ಸಾಮೂಹಿಕ ವಿವಾಹದ ಆಯೋಜಕರು ಹಾಗೂ ಕಲ್ಯಾಣ ಮಂಟಪ/ಫಂಕ್ಷನ್ ಹಾಲ್ಗಳ ವ್ಯವಸ್ಥಾಪಕರುಗಳು ಕಡ್ಡಾಯವಾಗಿ ವಧು ಮತ್ತು ವರರ ವಯಸ್ಸಿನ ದೃಢೀಕರಣ ಪತ್ರವನ್ನು ಕುಟುಂಬದವರಿಂದ ಪಡೆದು ಹುಡುಗನಿಗೆ 21 ವರ್ಷ ಹಾಗೂ ಹುಡುಗಿಗೆ 18 ವರ್ಷ ಪೂರ್ಣವಾಗಿದೆ ಎಂದು ಖಾತ್ರಿ ಪಡಿಸಿಕೊಂಡ ನಂತರವಷ್ಟೇ ಮದುವೆ ಲಗ್ನ ಪತ್ರಿಕೆಯನ್ನು ಮುದ್ರಿಸಬೇಕು ಹಾಗೂ ಮದುವೆ ಕಾರ್ಯ ನಡೆಸಲು ಒಪ್ಪಿಕೊಳ್ಳಬೇಕು’ ಎಂದು ಹೇಳಿದ್ದಾರೆ.

‘ವಧು ವರರ ವಯಸ್ಸಿನ ದೃಢೀಕರಣ ಪತ್ರಗಳಲ್ಲಿ ಜನನ ಪ್ರಮಾಣ ಪತ್ರ, ಶಾಲಾ ವಯಸ್ಸಿನ ದೃಢೀಕರಣ ಪತ್ರ ಎಸ್.ಎಸ್.ಎಲ್.ಸಿ ಅಂಕ ಪಟ್ಟಿ ಅಥವಾ ಸರ್ಕಾರಿ ವೈದ್ಯರು ರೇಡಿಯೋಲಜಿ ಪರೀಕ್ಷೆ ನಡೆಸಿ, ದೃಢೀಕರಿಸಿದ ವಯಸ್ಸಿನ ಪ್ರಮಾಣ ಪತ್ರ ಹೊಂದಿದವರು ಮಾತ್ರ ಮದುವೆಗೆ ಅರ್ಹರಾಗಿರುತ್ತಾರೆ. ಬೇರೆ ಯಾವುದೇ ವಯಸ್ಸಿನ ದೃಢೀಕರಣ ಪತ್ರಗಳು ಮದುವೆಗೆ ಅರ್ಹವಲ್ಲ ಎಂಬುದನ್ನು ಅರಿತು ಕುಟುಂಬದವರಿಂದ ಮೇಲೆ ತಿಳಿಸಿದ ನಿಗದಿತ ವಯಸ್ಸಿನ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು’ ಎಂದು ತಿಳಿಸಿದ್ದಾರೆ.

‘ಬಾಲ್ಯ ವಿವಾಹ ಕಾಯ್ದೆಯ ಕುರಿತು ಜನರಲ್ಲಿ ಜಾಗೃತಿ ಇಲ್ಲದಿರುವುದರಿಂದ ಅಧಿಕ ಸಂಖ್ಯೆಯಲ್ಲಿ ಬಾಲ್ಯ ವಿವಾಹಗಳು ಇಂದಿಗೂ ಜರುಗುತ್ತಿವೆ. ಈ ಬಾಲ್ಯ ವಿವಾಹ ಎಂಬ ಅನಿಷ್ಟ ಪದ್ಧತಿಯನ್ನು ತೊಲಗಿಸಲು ಅಭಿಯಾನ ಮಾಡಬೇಕಾಗಿದೆ. ಎಲ್ಲಾ ಸರ್ಕಾರಿ/ಸರ್ಕಾರೇತರ ಶಾಲೆಗಳಲ್ಲಿ ರಾಷ್ಟ್ರಗೀತೆಯ ನಂತರ ಬಾಲ್ಯ ವಿವಾಹದ ದುಷ್ಟ್ಪರಿಣಾಮ ಮತ್ತು ಶಿಕ್ಷೆಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದಿಲ್ಲವೆಂದು ಪ್ರಮಾಣ ವಚನ ಬೋಧನೆ ಕಡ್ಡಾಯವಾಗಿ ಮಾಡಿಸತಕ್ಕದ್ದು. ಅದೇ ರೀತಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಬಾಲ್ಯವಿವಾಹಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಡಂಗುರ ಸಾರಬೇಕು’ ಎಂದು ಸೂಚಿಸಿದ್ದಾರೆ.

‘ಸದರಿ ಕಾಯ್ದೆಯನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲು ರಾಜ್ಯ, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ, ಗ್ರಾಮ/ನಗರಸಭೆ/ಪುರಸಭೆ ಮಟ್ಟದಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳನ್ನು ನೇಮಿಸಲಾಗಿದೆ. ಸದರಿ ಅಧಿಕಾರಿಗಳು ಬಾಲ್ಯ ವಿವಾಹ ತಡೆಗಟ್ಟಲು ಸಕ್ರಿಯವಾಗಿ ಕಾರ್ಯೋನ್ಮುಖ ರಾಗಬೇಕು. ಒಂದು ವೇಳೆ ಸದರಿ ಕಾರ್ಯದಲ್ಲಿ ಉದಾಸೀನತೆ ತೋರಿ ಬಾಲ್ಯವಿವಾಹ ತಡೆಯುವಲ್ಲಿ ವಿಫಲರಾದಲ್ಲಿ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-33-1850605049

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.