ಚಿಮಕೋಡ್(ಜನವಾಡ): ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ 13ನೇ ವರ್ಷದ ಅಖಂಡ ಹರಿನಾಮ ಸಪ್ತಾಹ ಹಾಗೂ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಶುಕ್ರವಾರ ಆರಂಭಗೊಂಡಿತು.

ಮೊದಲ ದಿನ ಭಜನೆ, ಕೀರ್ತನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಪ್ರಮುಖರಾದ ಅಂಬಾದಾಸ್ ಮಹಾರಾಜ, ಸುರೇಶ ಪಾಟೀಲ, ಸೋಮನಾಥ ಕಂದಗೂಳೆ, ಕಂಟೆಪ್ಪ ಬೊಮ್ಮಗೊಂಡೆ, ಶಿವಕುಮಾರ ಟೊಳ್ಳೆ, ಪ್ರಸಾದ ಪಾಟೀಲ, ಗುರುನಾಥ ಬೊಮ್ಮಗೊಂಡೆ, ಬಿಚ್ಚಪ್ಪ ಏಖ್ಖೆಳ್ಳಿಕರ್, ಮಲ್ಲಶೆಟ್ಟಿ ಡೆಂಪೆ, ಶ್ರೀಕಾಂತ ಬಿರಾದಾರ, ಸಿದ್ದಪ್ಪ ಟೊಳ್ಳೆ, ಲಕ್ಷ್ಮಣ ಟೊಳ್ಳೆ, ನರಸಪ್ಪ ಮೇತ್ರೆ ಭಾಗವಹಿಸಿದ್ದರು.

15ರ ವರೆಗೆ ಸಪ್ತಾಹ: ಸಪ್ತಾಹ ಅಂಗವಾಗಿ ಮೇ 15ರ ವರೆಗೆ ಪ್ರತಿ ದಿನ ಭಜನೆ, ಕೀರ್ತನೆ ನಡೆಯಲಿವೆ. ತೆಲಂಗಾಣ, ಮಹಾರಾಷ್ಟ್ರದ ಖ್ಯಾತ ಕೀರ್ತನಕಾರರು ಹಾಗೂ ಪ್ರವಚನಕಾರರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಸಂಜುಕುಮಾರ ಟೊಳ್ಳೆ, ಮಾರುತಿ ಶಿವಬಾರೆ ತಿಳಿಸಿದ್ದಾರೆ.

ಮೇ 15 ರಂದು ಸಪ್ತಾಹ ಸಮಾರೋಪಗೊಳ್ಳಲಿದೆ. ಅಂದು ಅನ್ನ ಪ್ರಸಾದ ವಿತರಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-33-1008756936

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.