ಬೀದರ್: ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡು ಸಂತ್ರಸ್ತರಾದ ರೈತರಿಗೆ ಮಾನವೀಯತೆಯಿಂದ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರಕ್ಕೆ ಭೇಟಿ ನೀಡಲಿರುವ ಏ.11ರಂದೇ ಹೋರಾಟ ನಡೆಸಲು ರೈತರು ನಿರ್ಧರಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಕಾರಂಜಾ ಮುಳುಗಡೆ ಸಂತ್ರಸ್ತ ರೈತ ಹಿತರಕ್ಷಣಾ ಸಮಿತಿ ಮತ್ತು ಬೀದರ್ ಜಿಲ್ಲಾ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಪರಿಹಾರಕ್ಕೆ ಆಗ್ರಹಿಸಿ ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏ.11ರಂದು ನಗರಕ್ಕೆ ಆಗಮಿಸುತ್ತಿದ್ದು, ಆ ದಿನ ರೈತರ ಸಮ್ಮುಖದಲ್ಲೇ ಪರಿಹಾರ ಘೋಷಿಸಬೇಕು ಎಂದು ಹಿರಿಯ ಮುಖಂಡ ಲಕ್ಷ್ಮಣ ದಸ್ತಿ ಆಗ್ರಹಿಸಿದರು.

ಅಂದು ನಡೆಯಲಿರುವ ಐತಿಹಾಸಿಕ ಬೃಹತ್ ಹೋರಾಟದಲ್ಲಿ ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ್ದಲ್ಲದೆ, ಮನೆ ಮಠ ಕಳೆದುಕೊಂಡ 28 ಹಳ್ಳಿಯ ರೈತ ಸಂತ್ರಸ್ತರ ಪರಿವಾರದ ಎಲ್ಲ ಸದಸ್ಯರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಕಾವೇರಿ ನದಿ, ಮೈಸೂರು ಕರ್ನಾಟಕದ ಜೀವನಾಡಿಯಾದರೆ, ಕಾರಂಜಾ ಬೀದರ್ ಜಿಲ್ಲೆಯ ಜನಮಾನಸದ ಜೀವನಾಡಿ. ಈ ಯೋಜನೆಯ ಫಲವಾಗಿ ಬೀದರ್ ಜಿಲ್ಲೆಯ ಲಕ್ಷಾಂತರ ಜನರು ನೀರು ಕುಡಿಯುತ್ತಿದ್ದಾರೆ. ಅಷ್ಟೇ ಅಲ್ಲದೇ, ಅನೇಕ ರೈತರ ಭೂಮಿಗೆ ಕಾರಂಜಾ ನೀರು ನೀಡುತ್ತಿದೆ. ನಮ್ಮ ಸ್ವಾಭಿಮಾನದ ಪ್ರತೀಕವಾದ ಕಾರಂಜಾ ಯೋಜನೆಯ ಬಗ್ಗೆ ಪ್ರತಿಯೊಬ್ಬ ಬೀದರ್ ಜಿಲ್ಲೆಯ ನಿವಾಸಿ ಸ್ವಾಭಿಮಾನದಿಂದ ಈ ಬೃಹತ್ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.

ಈ ಐತಿಹಾಸಿಕ ಹೋರಾಟಕ್ಕೆ ಉಸ್ತುವಾರಿ ಸಚಿವರು ಸೇರಿದಂತೆ, ಬೀದರ್ ಜಿಲ್ಲೆಯ ಸಚಿವರು, ಶಾಸಕರು, ಆಯಾ ಪಕ್ಷಗಳ ನಾಯಕರು, ಪಕ್ಷಭೇದ ಮರೆತು ಸಂಘಟಿತ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಬೇಕು. ಈ ಹೋರಾಟದಲ್ಲಿ ಸಂಘ ಸಂಸ್ಥೆ, ಸಂಘಟನೆಗಳ ಸದಸ್ಯರು ಬೀದರ್ ಜಿಲ್ಲೆಯ ಜ್ವಲಂತ ಸಮಸ್ಯೆ ಇತ್ಯರ್ಥಕ್ಕೆ ಬೆಂಬಲಿಸಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಪ್ರಮುಖರಾದ ವಿನಯ್ ಕುಮಾರ್ ಮಾಳಗೆ, ರಾಜಪ್ಪ ಕೋಸಂ, ರಾಜಪ್ಪ ರೇಕುಳಗಿ, ವೀರೇಂದ್ರ ಭತಮುರ್ಗೆ, ಮಾದಪ್ಪ ಕೌದೆ, ರೇವಣಪ್ಪ ರಂಜೋಳ, ಸಂಗಾರೆಡ್ಡಿ ಔರಾದ್, ಯುಸೂಫ್ ರೇಕುಳಗಿ, ಮುಹಮ್ಮದ್ ಸೋಲಾಪೂರೆ, ಲಕ್ಷ್ಮೀ ಕೌದೆ, ಚಂದ್ರಶೇಖರ್ ಒಡ್ಡಿ, ಶಿವಕುಮಾರ್ ಬಗದಲ್, ಲಕ್ಷ್ಮಣ ಭೂತಾಳೆ, ಸೂರ್ಯಕಾಂತ ಕುಲಕರ್ಣಿ, ಸಂಜಯ್ ಪಾಟೀಲ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-33-2109656657

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.