ಕಮಲನಗರ: ತಾಲ್ಲೂಕಿನ ಡೋಣಗಾಂವ(ಎಂ) ಗ್ರಾಮದಲ್ಲಿ ಗುರುವಾರ ಸಾಕ್ಷಿ ಹನುಮಾನ ಮಂದಿರದ ಕಳಸಾರೋಹಣ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.

ಹಾವಗೀಸ್ವಾಮಿ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಕಳಸಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.

‘ದೇವಸ್ಥಾನಗಳು ನಮ್ಮ ಆಧ್ಯಾತ್ಮಿಕ ಬದುಕಿಗೆ ಶಕ್ತಿ ನೀಡುವ ಪ್ರಮುಖ ಕೇಂದ್ರಗಳಾಗಿವೆ. ಭಕ್ತರ ಭಾವನೆಗಳನ್ನು ಒಗ್ಗೂಡಿಸುವ ಇಂತಹ ಪವಿತ್ರ ಸ್ಥಳಗಳು ಸಮಾಜದಲ್ಲಿ ಸೌಹಾರ್ದ ಮತ್ತು ಒಗ್ಗಟ್ಟನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನಿತ್ಯ ದೇವರ ಸ್ಮರಣೆ ಮಾಡಬೇಕು’ ಎಂದರು.

ಹನುಮಂತ ದೇವರ ಪೂಜೆ ಶಕ್ತಿ, ಭಕ್ತಿ ಮತ್ತು ಧೈರ್ಯದ ಪ್ರತೀಕವಾಗಿದೆ. ಹನುಮಂತ ದೇವರನ್ನು ಪೂಜಿಸುವುದರಿಂದ ಮನಸ್ಸಿಗೆ ಧೈರ್ಯ, ಆತ್ಮವಿಶ್ವಾಸ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ದೊರಕುತ್ತದೆ ಎಂದು ಹೇಳಿದರು.

ಗಡಿಗೌಂಡಗಾಂವ ಶಾಂತವೀರ ಶಿವಾಚಾರ್ಯರು,‘ಪುರಾಣ, ಪ್ರವಚನ ಆಲಿಕೆಯಿಂದ ನೆಮ್ಮದಿ ಲಭಿಸುತ್ತದೆ ಎಂದರು.

ಮಹಿಳೆಯರ ಭಜನೆ ಪದಗಳು ಹಾಗೂ ಕುಂಭ ಹೊತ್ತ ಮಹಿಳೆಯರ ದಂಡು ಗ್ರಾಮದ ಪ್ರಮುಖ ರಸ್ತೆಯ ಮೂಲಕ ಅದ್ಧೂರಿ ಮೆರವಣಿಗೆ ನಡೆಸಿದರು. ಭಜನೆ ಹಾಗೂ ಜಯಘೋಷಗಳ ನಡುವೆ ಯುವಕರು ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.

ಸಾಯಗಾಂವನ ಶಿವಾನಂದ ಮಹಾಸ್ವಾಮಿ, ಮುಖಂಡರಾದ ಅಪ್ಪಾಸಾಬ ದೇಶಮುಖ, ಮಹಾಳಪ್ಪ ದೇಶಮುಖ, ಶೈಲೇಶ ದೇಶಮುಖ, ವಿಶಾಲ ದೇಶಮುಖ, ವಿಜಯಕುಮಾರ ದೇಶಮುಖ, ಬಾಲಾಜಿ ದೇಶಮುಖ, ರವಿ ಚಿಂಚನಸೂರೆ, ಪ್ರಕಾಶ ದೇಸಾಯಿ, ಅಶೋಕ ಸ್ವಾಮಿ, ಪ್ರವೀಣ ಹೊಂಡಾಳೆ, ವೀರೂಪಾಕ್ಷ ಹೊಂಡಾಳೆ, ಸಿದ್ದು ಕೌಟಗೆ, ಬಬನ ಪಾಟೀಲ್, ಗಣೇಶ ಕಾರೆಗಾವೆ, ಹಾವಗೀ ಬಳತೆ, ಸಿದ್ದು ಹೂಗಾರ, ಬಸು ಚಂದಾಪೂರೆ, ಹಾವಗಿ ಮಠಪತಿ, ಪ್ರವೀಣ ಹಾಗೂ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-33-1842331677

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.