ಬೀದರ್: ಡಿಎಪಿ, ಯೂರಿಯಾ ಜತೆ ಇತರೆ ಉತ್ಪನ್ನಗಳನ್ನು ಒತ್ತಾಯಪೂರ್ವಕವಾಗಿ ಜೋಡಣೆ ಮಾಡುವುದನ್ನು ನಿಲ್ಲಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಸಗೊಬ್ಬರ, ಕೀಟನಾಶಕ ಹಾಗೂ ಬೀಜ ಮಾರಾಟಗಾರರು ಜಿಲ್ಲೆಯಲ್ಲಿ ಸೋಮವಾರ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬೆಳಿಗ್ಗೆಯಿಂದಲೇ ಅಂಗಡಿಗಳು ಮುಚ್ಚಿದ್ದವು. ರೈತರಿಗೆ ರಸಗೊಬ್ಬರ, ಬೀಜ ಹಾಗೂ ಕೀಟನಾಶಕ ಸಿಗಲಿಲ್ಲ. ನಗರದಲ್ಲಿ ಜಿಲ್ಲಾ ಆಗ್ರೋ ಇನ್ಪುಟ್ ಡೀಲರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ನಿಯೋಗದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ರಾಷ್ಟ್ರಮಟ್ಟದ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಕರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಸ್ಪಂದನೆ ದೊರೆತಿದೆ. ಎಲ್ಲ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿ ಬೆಂಬಲ ನೀಡಿದ್ದಾರೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ಜಿಲ್ಲಾ ಆಗ್ರೋ ಇನ್ಪುಟ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ ತಿಳಿಸಿದರು.

ಯಾವುದೇ ಕಾರಣಕ್ಕೂ ಡಿಎಪಿ, ಯೂರಿಯಾ ಜತೆ ಇತರೆ ಉತ್ಪನ್ನಗಳನ್ನು ಜೋಡಿಸಬಾರದು. ರಸಗೊಬ್ಬರಗಳ ನಿಗದಿತ ದರದ ಮೇಲೆ ವಿತರಕರಿಗೆ ಶೇ 8ರಷ್ಟು ಲಾಭಾಂಶ ನೀಡಬೇಕು. ಎಲ್ಲ ರಸಗೊಬ್ಬರಗಳನ್ನು ಎಫ್.ಎ.ಎಲ್. ಮೂಲಕ ಸರಬರಾಜು ಮಾಡಬೇಕು. ರಸಗೊಬ್ಬರ, ಬೀಜ, ಕೀಟನಾಶಕ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಸರಳೀಕರಿಸಬೇಕು. ಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳ ಮಾದರಿ ಕಳಪೆಯಾದಾಗ ಕಂಪನಿಯರ ಮೇಲೆ ಮಾತ್ರ ಪ್ರಕರಣ ದಾಖಲಿಸಿ, ಡೀಲರ್ಗಳನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಕಂಟೆಪ್ಪ ಪಾಟೀಲ, ಮಿಲನ್ ಘೋರ್ಪಡೆ, ಸುನೀಲ್ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ವಿದ್ಯಾನಂದ ಸ್ವಾಮಿ, ಜಗನ್ನಾಥ ಕೋಟೆ, ಸೂರ್ಯಕಾಂತ, ಸಂಗಪ್ಪ, ಸಿದ್ಧಲಿಂಗ ಸ್ವಾಮಿ, ಸಿದ್ದು ಸ್ವಾಮಿ, ಬಾಬುರಾವ್ ಬಿರಾದಾರ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-33-676483817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.