ಬೀದರ್: ‘ಇಂದಿನ ಸರ್ಕಾರಗಳು ಬಸವಾದಿ ಶರಣರ ತತ್ವಗಳನ್ನು ಅನುಸರಿಸುವುದು ಅವಶ್ಯಕವಾಗಿದೆ’ ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕಿರಣ ಗಾಜನೂರು ಹೇಳಿದರು.

ಲಿಂಗಾಯತ ಮಹಾಮಠದ ವತಿಯಿಂದ ಅಕ್ಕ ಅನ್ನಪೂರ್ಣತಾಯಿ ಅವರ ಸ್ಮರಣೋತ್ಸವ ನಿಮಿತ್ತ ಬಸವಗಿರಿಯಲ್ಲಿ ನಡೆದ ಬಸವೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರು ಜಾತಿ, ವರ್ಣ, ವರ್ಗ, ಲಿಂಗ–ಭೇದಗಳಿಂದ ಒಡೆದು ಹೋಗಿದ್ದ ಸಮಾಜದಲ್ಲಿ ಒಟ್ಟಾಗಿ ಬಾಳುವ ನೈತಿಕ ಸೂತ್ರ ನೀಡಿದ್ದರು. ಶ್ರೇಣಿಕೃತ ಸಮಾಜ ಅಲ್ಲಗಳೆದು ಸಮ ಸಮಾಜ ಕಟ್ಟಿದರು’ ಎಂದರು.

ಐದು ಸಾವಿರ ವರ್ಷಗಳಿಂದ ಭಾರತೀಯರು ಸಾಂಸ್ಕೃತಿಕ ವಸಾಹತು ಶಾಹಿಗೆ ಒಳಗಾಗಿದ್ದರೆ. ಇಂಥ ಶೋಷಣೆಯ ವಿರುದ್ಧದ ಪ್ರಥಮ ಸ್ವಾತಂತ್ರ್ಯ ಚಳವಳಿಯೇ ಶರಣ ಚಳವಳಿ. ಮನುಷ್ಯರು ಮನುಷ್ಯರಾಗಿ ಬದುಕಲು ಅವಕಾಶ ಕಲ್ಪಿಸಿದ ಶರಣರು ಬದುಕಿಗೆ ನವ ದೃಷ್ಟಿಕೋನ ನೀಡಿದ್ದರು’ ಎಂದರು.

ಆಳಂದದ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ‘ಕೆಲವರು ಸಮಾಜವನ್ನು ಒಡೆದು ಆಳುವ ವಿಚಾರ ಬಿತ್ತುತ್ತಿದ್ದಾರೆ. ಲಿಂಗಾಯತ ರಾಜಕಾರಣಿಗಳು, ಮಠಗಳು ಹಾಗೂ ಸಮಾಜ ಅದಕ್ಕೆ ಬಲಿಯಾಗಬಾರದು. ಬಸವ ಭಕ್ತರು ಎಚ್ಚರರಾಗಬೇಕು. ಗಣಾಚಾರ ತತ್ವ ಮರೆಯದೆ, ವಚನಗಳ ಕಲಬೆರಕೆ ವಿರುದ್ಧ ಹೋರಾಡಬೇಕು’ ಎಂದು ಸಲಹೆ ನೀಡಿದರು.

ಬಸವಕಲ್ಯಾಣದ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಹುಟ್ಟೂರಿನಲ್ಲಿ ಬೆಳೆದು, ಹುಟ್ಟೂರಿನಲ್ಲಿಯೇ ಅಪ್ರತಿಮ ಸಾಧನೆಗೈದ ಚೇತನ ಅಕ್ಕ ಅನ್ನಪೂರ್ಣ ತಾಯಿ. 12ನೇ ಶತಮಾನದಲ್ಲಿ ಅಲ್ಲಮಪ್ರಭುದೇವರು ಅಕ್ಕ ಮಹಾದೇವಿಯನ್ನು ಪರೀಕ್ಷಿಸಿ ಜಗದಕ್ಕ ಎಂದು ಗೌರವಿಸಿದರು. 21ನೇ ಶತಮಾನದ ಅಕ್ಕನವರು ಪ್ರಭುದೇವರನ್ನು ಪರೀಕ್ಷಿಸಿ ಗುರುವಾಗಿಸಿದರು’ ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಅಕ್ಕ ಅನ್ನಪೂರ್ಣತಾಯಿ ಬಸವ ಭಕ್ತಿ ಬಿತ್ತಿದ ತಾಯಿ. ಭಕ್ತಿಯಲ್ಲಿ ಅವರು ಗೆದ್ದಿದ್ದಾರೆ. ಫಲಾಪೇಕ್ಷೆ ಇಲ್ಲದೆ ಅಕ್ಕನ ಸೇವೆಗೈದ ಪ್ರಭುದೇವರು ಸಹಜವಾಗಿಯೇ ಅವರ ಉತ್ತರದಾಯಿತ್ವ ಪಡೆದು ಸೇವೆಗೈಯುತ್ತಿದ್ದಾರೆ’ ಎಂದರು.

ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬು ವಾಲಿ, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ, ಬೀರಲಿಂಗೇಶ್ವರ ಸೌಹಾರ್ದ ಸಹಕಾರಿ ಸಲಹಾ ಸಮಿತಿ ಸದಸ್ಯೆ ಜಗದೇವಿ ಪನಸಾಲೆ ಮಾತನಾಡಿದರು.

ಅತ್ತಾಪುರದ ನಾಗರಾಜ ಸೋರಳ್ಳಿ, ಬಸವ ಜಯಂತಿ ಉತ್ಸವ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ದೇವಕಿ ನಾಗೂರೆ, ಜಗನ್ನಾಥ ಇದಲಾಯಿ, ಪತ್ರಕರ್ತ ಜಗನ್ನಾಥ ಶೇರಿಕಾರ್, ಹುಮನಾಬಾದ್ನ ಮಲ್ಲಿಕಾರ್ಜುನ ಸಂಗಮಕರ್, ಹಲಸಿಯ ಸಂತೋಷ ಪಾಟೀಲ, ಮಲ್ಲಮ್ಮ ಹೆಬ್ಬಾಳೆ, ಅನಿತಾ ಆರ್. ಪಾಟೀಲ, ವಿಜಯಲಕ್ಷ್ಮಿ ರಾಜೋಳೆ, ಸಾಹಿತಿ ರಮೇಶ ಮಠಪತಿ ಇದ್ದರು.

ಅಶ್ವಿನಿ ರಾಜಕುಮಾರ ಚಿಟ್ಟಾ ವಚನ ಸಂಗೀತ ನಡೆಸಿಕೊಟ್ಟರು. ನೃತ್ಯಾಂಗನಾ ನಾಟ್ಯ ಕಲಾ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು. ಕಲ್ಪನಾ ಬೀದೆ ಸ್ವರಚಿತ ಕವನ ವಾಚಿಸಿದರು. ಶಿಲ್ಪಾ ಮಜಗೆ ನಿರೂಪಿಸಿದರು. ವಚನಶ್ರುತಿ ಅಭಿಲಾಶ್ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-33-633782890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.