ಬೀದರ್: ‘ಮನ್ಯಾಗ ಕೂಡ್ಲಾಕ್ ಆಗ್ತಾ ಇಲ್ರಿ, ಈ ಬೆಂಕಿ ಬಿಸಿಲಾಗ ಹ್ಯಾಂಗ್ ಕೆಲ್ಸ ಮಾಡೋದು?’

ಹೀಗೆಂದವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಮನರೇಗಾ) ಕೂಲಿ ಕಾರ್ಮಿಕರು.

ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಾಲಾ ಬದು ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿತು. ಆದರೆ, ಇನ್ನೂ ಕೂಲಿ ಕಾರ್ಮಿಕರ ಡಿಜಿಟಲ್ ಹಾಜರಾತಿ ಪ್ರಕ್ರಿಯೆಯೇ ಕೊನೆಗೊಂಡಿರಲಿಲ್ಲ. ಕೆಲವು ಮಹಿಳೆಯರು ರಸ್ತೆಬದಿ ಮರದಡಿಯ ನೆರಳಿನಲ್ಲಿ ಕುಳಿತುಕೊಂಡರೆ, ಮತ್ತೆ ಕೆಲವರು ಡಿಜಿಟಲ್ ಹಾಜರಾತಿಗಾಗಿ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು.

ಬಿರು ಬೇಸಿಗೆಯಿದ್ದರೂ ಹಾಜರಾತಿ ಪಡೆಯಲು ನಿರ್ದಿಷ್ಟ ಸ್ಥಳವೇ ಗುರುತಿಸಿರಲಿಲ್ಲ. ಆದಕಾರಣ ರಸ್ತೆ ಬದಿಯಲ್ಲಿಯೇ ನಿಂತುಕೊಂಡು ಕಾರ್ಮಿಕರ ಹಾಜರಾತಿ ಪಡೆಯಲಾಗುತ್ತಿತ್ತು. ‘ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ’ (ಎನ್ಎಂಎಂಎಸ್) ಮೂಲಕ ಡಿಜಿಟಲ್ ಹಾಜರಾತಿ ಪಡೆಯಲಾಗುತ್ತಿದ್ದು, ಅದರಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಸಾಕಷ್ಟು ವಿಳಂಬವಾಗಿತ್ತು. ಇದು ನಿತ್ಯದ ಗೋಳೆಂದು ಕಾರ್ಮಿಕರು ಹೇಳಿದರು.

ಈ ಮಧ್ಯೆ ತಾಂತ್ರಿಕ ಕಾರಣಗಳಿಂದ ಕೆಲವರ ಹಾಜರಾತಿಯೇ ಆಗಲಿಲ್ಲ. ಅನೇಕ ಸಲ ಪ್ರಯತ್ನಿಸಿದರೂ ಫಲಕೊಡಲಿಲ್ಲ. ಇದರಿಂದ ಎಲ್ಲ ಕಾರ್ಮಿಕರು ಕಾದು ಕೂರಬೇಕಾಯಿತು. ಅಂತಿಮವಾಗಿ 11.30ಕ್ಕೆ ಕೆಲಸ ಆರಂಭಗೊಂಡಿತು. ಅದಾಗಲೇ ಸೂರ್ಯ ಕೆಂಡ ಕಾರುತ್ತಿದ್ದ. ಇಂಥದ್ದರಲ್ಲೇ ಕೆಲಸ ಶುರು ಮಾಡಿದರು. ಇದರಲ್ಲಿ ಮಹಿಳಾ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎಲ್ಲ ವಯೋಮಾನದವರೂ ಇದ್ದರು.

ಹೀಗೆ ಜಿಲ್ಲೆಯ ಹಲವೆಡೆ ಹಾಜರಾತಿ ಸಮಸ್ಯೆಯಿಂದ ತಡವಾಗಿ ಕೆಲಸ ಶುರುವಾಗುತ್ತಿದೆ. ಕೆಂಡದಂಥ ಬಿಸಿಲಲ್ಲೇ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲಿ ಇಬ್ಬರು ಮನರೇಗಾ ಕೂಲಿ ಕಾರ್ಮಿಕರು ಬಳಲಿಕೆ, ಆಯಾಸದಿಂದ ಮೃತಪಟ್ಟಿದ್ದಾರೆ. ಆದರೂ, ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಂತೆ ಕಾಣಿಸುತ್ತಿಲ್ಲ.

ಇತ್ತೀಚೆಗೆ ಜಿಲ್ಲಾಡಳಿತವು ಮೇ ಮೊದಲ ವಾರದಲ್ಲಿ ಬಿಸಿಲು ಹೆಚ್ಚಾಗಿ, ಅದರ ಝಳದಿಂದ ‘ಹೀಟ್ ಸ್ಟ್ರೋಕ್’ ಸಂಭವಿಸುವ ಸಾಧ್ಯತೆ ಇದೆ. ಮಧ್ಯಾಹ್ನದ ಸಮಯದಲ್ಲಿ ಬಯಲಿನಲ್ಲಿ ಯಾರೂ ಕೆಲಸ ಮಾಡಬಾರದು ಎಂದು ತಿಳಿಸಿದೆ. ಆದರೆ, ಬಡ ಕೂಲಿ ಕಾರ್ಮಿಕರಿಗೆ ಇದು ಅನ್ವಯಿಸುವಂತೆ ಕಾಣಿಸುತ್ತಿಲ್ಲ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮನರೇಗಾ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಯಾವುದೇ ನೆರಳಿನ ವ್ಯವಸ್ಥೆ ಮಾಡಿಲ್ಲ. ಕೆಲವೆಡೆ ಮರಗಿಡಗಳಿದ್ದು, ಆಯಾಸವಾದಾಗ ಕಾರ್ಮಿಕರು ಕೆಲಹೊತ್ತು ಅದರಡಿ ಕುಳಿತುಕೊಳ್ಳುತ್ತಾರೆ. ಹೆಚ್ಚಿನ ಕಡೆಗಳಲ್ಲಿ ಮರಗಿಡಗಳು, ನೆರಳಿನ ವ್ಯವಸ್ಥೆ ಇಲ್ಲದ ಕಾರಣ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

‘ಬೆಳಿಗ್ಗೆ ಆರು ಗಂಟೆಗೆ ಕೆಲಸ ಶುರು ಮಾಡಿ, ಮಧ್ಯಾಹ್ನ 12ರೊಳಗೆ ಮುಗಿಸಬೇಕೆಂದು ಕೋರಿದ್ದೇವೆ. ಆದರೆ, ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹಾಜರಾತಿ ಎಲ್ಲ ಮುಗಿಸಿ ಕೆಲಸ ಆರಂಭಿಸಲು ಮಧ್ಯಾಹ್ನ 12 ಆಗುತ್ತಿದೆ. ಸುಡು ಬಿಸಿಲಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಮನರೇಗಾ ಕಾರ್ಮಿಕ ಮಹಿಳೆ ತುಳಜಮ್ಮ ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-33-985613519

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.