ಬೀದರ್: ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಭಾನುವಾರ ಸಂಜೆ ಸುರಿದ ಮಳೆಯಿಂದ ವಾತಾವರಣ ತಂಪಾಯಿತು.

ಸಂಜೆ 4ರ ಸುಮಾರಿಗೆ ಆರಂಭಗೊಂಡ ಮಳೆ 5ಗಂಟೆಯ ತನಕ ಸುರಿಯಿತು. ಬೆಳಿಗ್ಗೆಯಿಂದ ಪ್ರಖರವಾದ ಬಿಸಿಲು ಇತ್ತು. ಒಂದು ತಾಸು ಸತತ ಮಳೆ ಬಿದ್ದ ಕಾರಣ ತಾಪಮಾನದಲ್ಲಿ ಭಾರಿ ಇಳಿಕೆಯಾಗಿ ವಾತಾವರಣ ತಂಪಾಯಿತು. ಬೇಸಿಗೆಯಲ್ಲಿ ಸುರಿದ ದೀರ್ಘಕಾಲದ ಮಳೆ ಇದಾಗಿದ್ದು, ಬಿಸಿಲಿನಿಂದ ರೋಸಿ ಹೋಗಿರುವ ಜನ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ತಾಲ್ಲೂಕಿನ ಅಮಲಾಪುರ, ಚಿಟ್ಟಾ, ಘೋಡಂಪಳ್ಳಿ, ಗೋರನಳ್ಳಿ, ಕಮಠಾಣ, ಬೆಳ್ಳೂರಾ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.