ಬೀದರ್: ‘ಭಾರತವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸಬೇಕೆಂಬ ಸಂತರು ಹಾಗೂ ಸನಾತನಿಗಳ ಬೇಡಿಕೆ ಮುಂದಿಟ್ಟುಕೊಂಡು ಡಿ. 8ರಂದು ನಗರದ ಸಾಯಿ ಶಾಲೆ ಮೈದಾನದಲ್ಲಿ ಬೃಹತ್ ಹಿಂದೂ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಹಿಂದೂ ರಾಷ್ಟ್ರೀಯ ಜಾಗರಣ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಪಾಟೀಲ ಹೇಳಿದರು.

ಸನಾತನ ಹಿಂದೂ ಬೋರ್ಡ್ ಸ್ಥಾಪಿಸಬೇಕು. ‘ನಮ್ಮ ದೇವಸ್ಥಾನದ ಖಜಾನೆ, ನಮ್ಮ ಹಕ್ಕು’ ಯೋಜನೆ ಅಡಿ ಹಿಂದೂ ದೇವಾಲಯಗಳಿಂದ ಬರುವ ಆದಾಯ ಹಿಂದೂ ಧರ್ಮದ ಕೆಲಸಗಳಿಗೆ ಮಾತ್ರ ಸೀಮಿತವಾಗಬೇಕು. ಗೋ ಹತ್ಯೆ ನಿಷೇಧ ಕಾನೂನು ಕಠಿಣವಾಗಿ ಅನುಷ್ಠಾನಕ್ಕೆ ತರಬೇಕು. ದೇವಸ್ಥಾನಗಳು, ಮಠ, ಮಂದಿರಗಳು ಸೇರಿದಂತೆ ಹಿಂದೂಗಳಿಗೆ ಸೇರಿದ ಎಲ್ಲ ಆಸ್ತಿಯನ್ನು ವಕ್ಫ್ ಬೋರ್ಡ್ ಎಂಬ ಪಿಶಾಚಿ ಬಾಯಿಂದ ರಕ್ಷಿಸಬೇಕು ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ವಕ್ಫ್ ಬೋರ್ಡ್ ಸಂಪೂರ್ಣ ರದ್ದಾಗಬೇಕು. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು. ಲವ್ ಜಿಹಾದ್, ಮತಾಂತರ ನಿಷೇಧ ಕಾಯ್ದೆ ಸಂಸತ್ತಿನಲ್ಲಿ ಮಂಡಿಸಬೇಕು. ಹಿಂದೂಗಳ ಮೇಲಿನ ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಮಾತನಾಡಿ, ಹೈದರಾಬಾದಿನ ಬಿಜೆಪಿ ನಾಯಕಿ ಮಾಧವಿ ಲತಾ, ಗುಜರಾತ್ ಸೌರಾಷ್ಟ್ರದ ನಾಯಕ ಕಾಜಲ್ ಹಿಂದೂಸ್ತಾನಿ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವರು ಎಂದರು.

ಬಾಂಗ್ಲಾದೇಶದಲ್ಲಿ ಇಸ್ಕಾನ್ ದೇವಸ್ಥಾನದ ಮೇಲೆ ದಾಳಿ ನಡೆಸಿ, ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿರುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ನಿಲುವು ತಾಳಬೇಕೆಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್ ವಿಭಾಗೀಯ ಪ್ರಮುಖ ರಾಮಕೃಷ್ಣನ್ ಸಾಳೆ, ಮುಖಂಡರಾದ ಬಸವರಾಜ ಸ್ವಾಮಿ, ಸೋಮಶೇಖರ ಪಾಟೀಲ ಗಾದಗಿ, ನಾಗರಾಜ ನೇಳಗೆ, ಸ್ವಾಮಿದಾಸ ಕೆಂಪೆನೋರ್, ಅಮಿತ ಚಿಂಚೋಳೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.