ಹುಲಸೂರ: ಅಳವಾಯಿ ಗ್ರಾಮದಲ್ಲಿ ಪಶುಗಳ ಸಂಖ್ಯೆ ಹೆಚ್ಚಿದ್ದು ಪಶುಆಸ್ಪತ್ರೆ ಹಾಗೂ ಬಸವಕ್ಯಲ್ಯಾಣ–ನಾಂದೇಡ ಬಸ್ ಸೇವೆಯನ್ನು ಪುನರ್ ಆರಂಭಿಸಬೇಕು ಎಂದು ಗ್ರಾ.ಪಂ ಮಾಜಿ ಸದಸ್ಯ ಗುಂಡಪ್ಪ ಗಂದಗೆ ಅವರು ಬೀದರ್ ಸಂಸದ ಸಾಗರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.

ಅಳವಾಯಿ ಗ್ರಾಮದಲ್ಲಿ ಪಶುಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಮೇಕೆ, ಎತ್ತು, ಹಸು ಸೇರಿದಂತೆ ವಿವಿಧ ಪಶುಗಳ ಸಾಕಾಣಿಕೆ ನಡೆಯುತ್ತಿದೆ. ಕೋಳಿ ಸಾಕಾಣಿಕೆಯೂ ಇದೆ. ಆದರೆ, ಗ್ರಾಮದಲ್ಲಿ ಅಥವಾ ಸಮೀಪದಲ್ಲಿ ಪಶು ಆಸ್ಪತ್ರೆಯ ಸೌಲಭ್ಯ ಇಲ್ಲ. ಹೀಗಾಗಿ ಪಶುಗಳಿಗೆ ಅನಾರೋಗ್ಯ ಉಂಟಾದರೆ ತಕ್ಷಣ ಚಿಕಿತ್ಸೆ ದೊರೆಯದೆ ರೈತರು ಹಾಗೂ ಪಶುಪಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೂರದ ಪ್ರದೇಶಗಳಿಗೆ ಪಶುಗಳನ್ನು ಕೊಂಡೊಯ್ಯಬೇಕಿದೆ. ಇದರಿಂದ ಸಮಯ ಮತ್ತು ಹಣದ ವ್ಯಯ ಹೆಚ್ಚುತ್ತಿದೆ. ಅಳವಾಯಿ ಗ್ರಾಮದಲ್ಲೇ ಅಥವಾ ಸಮೀಪದಲ್ಲಿ ಪಶುಆಸ್ಪತ್ರೆ ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬಸವಕಲ್ಯಾಣ–ನಾಂದೇಡ ನೇರ ಬಸ್ ಸೇವೆ ಪುನರಾರಂಭಿಸಬೇಕು. ಮೂರು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದ ಬಸ್ ಸೇವೆ ಇತ್ತೀಚೆಗೆ ಸ್ಥಗಿತಗೊಂಡಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಬಸವಕಲ್ಯಾಣ ಮತ್ತು ನಾಂದೇಡ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರಗಳಾಗಿವೆ. ಈ ಮಾರ್ಗದಲ್ಲಿ ಭಕ್ತರು ಮತ್ತು ಪ್ರವಾಸಿಗರ ಸಂಚಾರ ಹೆಚ್ಚಾಗಿದೆ. ಹೀಗಾಗಿ ಬಸ್ ಸೇವೆ ಪುನರಾರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-33-234993814

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.