ಸೋಮವಾರ, ಜೂಲೈ 6, 2020
27 °C

ಸೇಂದಿ, ಸಾರಾಯಿ ವಶ:ಮೂವರ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದ ವಡ್ಡರ ಕಾಲೊನಿಯ ವಿವಿಧೆಡೆ ಅಬಕಾರಿ ಸಿಬ್ಬಂದಿ ಗುರುವಾರ ದಾಳಿ ನಡೆಸಿ ಅಕ್ರಮವಾಗಿ ತಯಾರಿಸಿ, ಮಾರಾಟ ಮಾಡಲು ಸಂಗ್ರಹಿಸಿಟ್ಟಿದ 240 ಲೀಟರ್ ಕಲಬೆರಕೆ ಸೇಂದಿ ಹಾಗೂ 8 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ.

ದಾಳಿಯ ವೇಳೆ ಆರೋಪಿಗಳಾದ ಚಿನ್ನಯ್ಯ ತಿಮ್ಮಣ್ಣ, ಸುರೇಶ ಚಂದ್ರಪ್ಪ, ನಾಗರಾಜ ನಾಗಪ್ಪ ಎಂಬುವರು ಪರಾರಿಯಾಗಿದ್ದು, ಆರೋಪಿಗಳ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಅವರ ಪತ್ತೆಗೆ ಕ್ರಮವಹಿಸಲಾಗಿದೆ.

ಅಬಕಾರಿ ನಿರೀಕ್ಷಕ ಕೆ.ಎಸ್.ರಾಜಶೇಖರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ನಾನಾಗೌಡ ಕೇರೂರ, ದಯಾನಂದ, ದಿಲೀಪ್ ಠಾಕೂರ, ರಂಜೀತಾ, ಅಬಕಾರಿ ರಕ್ಷಕರಾದ ಶಿವಶಂಕರ, ಅನೀಲ, ರಾಜರೆಡ್ಡಿ, ಅಪ್ಪಾರೆಡ್ಡಿ, ರೋಹಿತ, ಹುಸೇನ್‌ಸಾಬ್, ವಾಹನ ಚಾಲಕರಾದ ವಿಷ್ಣುವರ್ಧನ, ಅತೀಕ್ ಮತ್ತು ರಾಹುಲ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು