ಬೀದರ್: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ನೆರೆಯ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ನಲ್ಲಿ ‘ಇಂಡಸ್ಟ್ರಿಯಲ್ ಟೌನ್ಶಿಪ್’ (ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿ) ನಿರ್ಮಾಣ ಚಟುವಟಿಕೆಗಳು ಗರಿಗೆದರಿದ್ದು, ಸಹಜವಾಗಿಯೇ ಬೀದರ್ ಜಿಲ್ಲೆಯ ಜನರ ಸಂತಸಕ್ಕೂ ಕಾರಣವಾಗಿದೆ.

ಜಹೀರಾಬಾದ್ ಸಮೀಪದ ನ್ಯಾಲಕಲ್ ಮತ್ತು ಝರಾಸಂಗಮ ಮಂಡಲ್ ವ್ಯಾಪ್ತಿಯಲ್ಲಿ ‘ಇಂಡಸ್ಟ್ರಿಯಲ್ ಟೌನ್ಶಿಪ್’ ತಲೆ ಎತ್ತಲಿದೆ. ಈ ಸ್ಥಳಗಳು ಬೀದರ್ನಿಂದ 30ರಿಂದ 40 ಕಿ.ಮೀ ವ್ಯಾಪ್ತಿಯೊಳಗೆ ಬರುತ್ತವೆ. ಎರಡು ಕಡೆಯವರ ನಡುವೆ ಆರಂಭದಿಂದಲೂ ಉತ್ತಮ ಸಂಬಂಧವಿದೆ. ಗಡಿ, ಭಾಷೆ ತಗಾದೆ ಉದ್ಭವಿಸಿರುವುದು ತೀರ ವಿರಳ. ಎರಡೂ ಕಡೆಯವರ ನಡುವೆ ಕೊಡು ಕೊಳ್ಳುವಿಕೆ ಇರುವುದರಿಂದ ಉತ್ತಮ ಬಾಂಧ್ಯವಿದೆ. ಬೃಹತ್ ಕೈಗಾರಿಕಾ ಟೌನ್ಶಿಪ್ ನಿರ್ಮಾಣದಿಂದ 2.77ಕ್ಕೂ ಲಕ್ಷಕ್ಕೂ ಅಧಿಕ ಹುದ್ದೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಆಹಾರ ಸಂಸ್ಕರಣೆ ಸೇರಿದಂತೆ ವಿವಿಧ ಪ್ರಕಾರದ ಉದ್ಯಮಗಳು ಬರಲಿವೆ.

ತೆಲಂಗಾಣ ರಾಜ್ಯ ಕೈಗಾರಿಕಾ ಮೂಲಸೌಕರ್ಯ ನಿಗಮವು ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಉದ್ದೇಶದಿಂದ ಈ ಮಹತ್ವದ ಯೋಜನೆಯನ್ನು ಜಹೀರಾಬಾದ್ಗೆ ವಿಸ್ತರಿಸುತ್ತಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಇದೊಂದು ರಾಷ್ಟ್ರಮಟ್ಟದ ದೊಡ್ಡ ಯೋಜನೆ ಆಗಿರುವುದರಿಂದ ಸಹಜವಾಗಿಯೇ ಎಲ್ಲರಿಗೂ ಉದ್ಯೋಗಾವಕಾಶಗಳು ಲಭಿಸಲಿವೆ. ಆದರೆ, ಬೀದರ್ ಸಮೀಪದಲ್ಲೇ ಇರುವುದರಿಂದ ಇಲ್ಲಿನ ಯುವಕ/ಯುವತಿಯರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ.

ಅದರಲ್ಲೂ ಎಂಜಿನಿಯರಿಂಗ್, ಡಿಪ್ಲೋಮಾ, ಐಟಿಐ ಸೇರಿದಂತೆ ಇತರೆ ತಾಂತ್ರಿಕ ಪದವಿ ಕೋರ್ಸ್ಗಳನ್ನು ಮಾಡಿದವರಿಗೆ ಸಹಜವಾಗಿಯೇ ಬೇಡಿಕೆ ಬರಲಿದೆ. ತಮ್ಮ ಪಕ್ಕದ ಊರಿನಲ್ಲಿಯೇ ಉದ್ಯೋಗಾವಕಾಶಗಳು ಸಿಕ್ಕರೆ ದೂರದ ಬೆಂಗಳೂರು, ಮುಂಬೈ, ಪುಣೆಗೆ ವಲಸೆ ಹೋಗುವುದು ಇದರಿಂದ ತಪ್ಪಲಿದೆ. ರಾಜಧಾನಿ ಬೆಂಗಳೂರಿನ ನಂತರ ಐಟಿ ಕ್ಷೇತ್ರದಲ್ಲಿ ಹೈದರಾಬಾದ್ ಗಣನೀಯವಾಗಿ ಬೆಳೆದಿರುವುದರಿಂದ ಜಿಲ್ಲೆಯ ಅನೇಕ ಯುವಕ/ಯುವತಿಯರು ಈಗಾಗಲೇ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಇಂಡಸ್ಟ್ರಿಯಲ್ ಟೌನ್ಶಿಪ್ನಿಂದ ಮತ್ತಷ್ಟು ಮಂದಿಗೆ ನೌಕರಿಗಳು ಲಭಿಸಲಿವೆ.

ಯೋಜನೆಗೆ ಒಟ್ಟು 12,635 ಎಕರೆ ಜಮೀನು ಬೇಕು. ಆದರೆ, 2029ರ ವೇಳೆಗೆ 9 ಸಾವಿರ ಎಕರೆ ಪ್ರದೇಶದಲ್ಲಿ ಮೊದಲ ಹಂತದ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ವಿಶೇಷ ಆಸ್ಥೆ ವಹಿಸಿ, ಯೋಜನೆಯ ಮೇಲೆ ವಿಶೇಷ ನಿಗಾ ವಹಿಸಿದ್ದಾರೆ. ಹೀಗಾಗಿ ಎಲ್ಲವೂ ಅಂದುಕೊಂಡಂತೆ ನಡೆದರೆ ಬೀದರ್ ಜಿಲ್ಲೆಯ ಯುವಕ/ಯುವತಿಯರ ಮಟ್ಟಿಗೆ ದೊಡ್ಡ ವಿಷಯವೇ ಸರಿ.

ಬೀದರ್ನಿಂದ ಕೈತಪ್ಪಿ ಜಹೀರಾಬಾದ್ಗೆ:

2013ರಲ್ಲಿ ಬೀದರ್ನಲ್ಲಿ ಇಂಡಸ್ಟ್ರಿಯಲ್ ಟೌನ್ಶಿಪ್ ನಿರ್ಮಾಣಕ್ಕೆ ತಾತ್ವಿಕ ಅನುಮೋದನೆ ದೊರೆದಿತ್ತು. ಬೀದರ್ ತಾಲ್ಲೂಕಿನ ಕಪಲಾಪುರ, ಸಿಕಿಂದ್ರಾಪುರ, ಸಂಗೋಳಗಿ, ಆಣದೂರ, ಕಂಗನಕೋಟ್, ಶಮಶೇರ್ನಗರ, ಭಾಲ್ಕಿ ತಾಲ್ಲೂಕಿನ ಧನ್ನೂರ, ರುದನೂರು, ನೀಲಮನಹಳ್ಳಿ ತಾಂಡಾ, ಬ್ಯಾಲಹಳ್ಳಿ, ಹಾಲಹಳ್ಳಿ ಸೇರಿದಂತೆ ಇತರೆ ಗ್ರಾಮಗಳ 5 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶ ಗುರುತಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಯೋಜನೆ ಕೈತಪ್ಪಿ ನೆರೆಯ ತೆಲಂಗಾಣ ರಾಜ್ಯದ ಜಹೀರಾಬಾದ್ಗೆ ಹೋಗಿದೆ ಎಂಬ ಆರೋಪಗಳಿವೆ.

ಕೇಂದ್ರ ಸರ್ಕಾರವು ದೇಶದ ಹತ್ತು ರಾಜ್ಯಗಳ 12 ಕಡೆಗಳಲ್ಲಿ ಈ ಯೋಜನೆ ಹಾಕಿಕೊಂಡಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಒಟ್ಟು ₹28 ಸಾವಿರ ಕೋಟಿ ತೆಗೆದಿರಿಸಿದೆ. ಆಯಾ ರಾಜ್ಯಗಳ ಕೈಗಾರಿಕೆಗಳ ನಿಗಮದ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ತೆಲಂಗಾಣದ ಜಹೀರಾಬಾದ್ ಕೂಡ ಈ ಯೋಜನೆಯಡಿ ಸೇರಿದೆ. ಕರ್ನಾಟಕ ರಾಜ್ಯವೂ ಇದಕ್ಕೆ ಸೇರ್ಪಡೆಯಾಗಿಲ್ಲ.

ಇಂಡಸ್ಟ್ರಿ ಟೌನ್ಶಿಪ್ ಹೇಗಿರಲಿದೆ ?

l ಮುಂಬೈ–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಹೀರಾಬಾದ್ ಸಮೀಪದ ನ್ಯಾಲಕಲ್ ಮತ್ತು ಝರಾಸಂಗಮ ಮಂಡಲ್ ವ್ಯಾಪ್ತಿಯಲ್ಲಿ ಸ್ಥಳ ಆಯ್ಕೆ

l 2.77 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸುವ ಗುರಿ, ಉತ್ಪಾದನಾ ವಲಯದ ಬಲವರ್ಧನೆ

l ಆಟೊಮೊಬೈಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಫಾರ್ಮಸುಟಿಕಲ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ

l ಒಟ್ಟು 12,635 ಎಕರೆ ಜಮೀನಿನಲ್ಲಿ ಇಂಡಸ್ಟ್ರಿಯಲ್ ಟೌನ್ಶಿಪ್. ಮೊದಲ ಹಂತದಲ್ಲಿ 9 ಸಾವಿರ ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಕೆಲಸ ಆರಂಭ.

l ಆರಂಭದಲ್ಲಿ ಒಟ್ಟು ₹2,369 ಕೋಟಿ ಹೂಡಿಕೆ. ಒಟ್ಟು ₹17,300 ಕೋಟಿ ಮೊತ್ತದ ಯೋಜನೆ

l ಕೈಗಾರಿಕೆಗಳು, ವಸತಿ ಪ್ರದೇಶ, ವಾಣಿಜ್ಯ ಪ್ರದೇಶ ಒಳಗೊಂಡಿರಲಿದೆ.

l ಹುಂಡೈ ಕಂಪನಿಯಿಂದ ಅತಿ ಹೆಚ್ಚು ಹೂಡಿಕೆ.

l ಭವಿಷ್ಯದಲ್ಲಿ ದಕ್ಷಿಣ ಭಾರತದ ಪ್ರಮುಖ ತಯಾರಿಕಾ ಕ್ಷೇತ್ರವಾಗಿ ಮಾರ್ಪಾಡು ಸಾಧ್ಯತೆ

ಜಹೀರಾಬಾದ್ ಏಕೆ ಆಯ್ಕೆ?

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ನಲ್ಲಿ ಇಂಡಸ್ಟ್ರಿಯಲ್ ಟೌನ್ಶಿಪ್ ನಿರ್ಮಾಣಕ್ಕೆ ಹಲವು ಕಾರಣಗಳಿವೆ.

ಜಹೀರಾಬಾದ್, ತೆಲಂಗಾಣದ ಗಡಿ ಭಾಗದಲ್ಲಿದ್ದು, ಕರ್ನಾಟಕದ ಬೀದರ್ ಜಿಲ್ಲೆಗೆ ಹೊಂದಿಕೊಂಡಿದೆ. ಇಲ್ಲಿ ಈಗಾಗಲೇ ಮಹೀಂದ್ರಾ ಸೇರಿದಂತೆ ಹಲವು ಕೈಗಾರಿಕೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಜಹೀರಾಬಾದ್ ಮುಂಬೈ–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 65ರ ಮೇಲಿದೆ. ಹೈದರಾಬಾದಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ರಮಿಸಲು ಎರಡು ಗಂಟೆ ಅವಧಿ ಬೇಕು. ಉತ್ತಮ ರೈಲು ಸಂಪರ್ಕವೂ ಇದೆ. ಉತ್ತಮ ಸಂಪರ್ಕ ವ್ಯವಸ್ಥೆ ಇರುವುದರಿಂದಲೇ ಜಹೀರಾಬಾದ್ ಅನ್ನು ಆಯ್ಕೆ ಮಾಡಲಾಗಿದೆ.

ಯೋಜನೆಗೂ ಮುನ್ನವೇ ಗರಿಗೆದರಿದ ರಿಯಲ್ ಎಸ್ಟೇಟ್

ಜಹೀರಾಬಾದ್ನಲ್ಲಿ ಇಂಡಸ್ಟ್ರಿಯಲ್ ಟೌನ್ಶಿಪ್ ನಿರ್ಮಿಸುವ ವಿಚಾರ ನಿನ್ನೆ, ಮೊನ್ನೆಯದಲ್ಲ. ದಶಕದಿಂದ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದನ್ನರಿತುಕೊಂಡು ರಿಯಲ್ ಎಸ್ಟೇಟ್ ಕ್ಷೇತ್ರದ ದೊಡ್ಡ ಕಂಪನಿಗಳು ಯೋಜನೆ ಜಾರಿಗೂ ಮುನ್ನವೇ ಜಹೀರಾಬಾದ್ ಸುತ್ತಮುತ್ತ ಕಾಲಿಟ್ಟಿವೆ.

ಮಹೀಂದ್ರಾ, ಎಂಪೈರ್ ಸೇರಿದಂತೆ ಹಲವು ಕಂಪನಿಗಳು ದೊಡ್ಡ ದೊಡ್ಡ ಲೇಔಟ್ಗಳನ್ನು ನಿರ್ಮಿಸಿವೆ. ಹೊಸದಾಗಿ ಹೊಸ ಲೇಔಟ್ಗಳು ತಲೆ ಎತ್ತುತ್ತಿವೆ. ಇನ್ನು, ಬೀದರ್ನಿಂದ ಸಮೀಪದಲ್ಲಿರುವುದರಿಂದ ಜಿಲ್ಲೆಯ ಹಲವರು ಜಹೀರಾಬಾದ್ ಸುತ್ತಮುತ್ತ ಕೃಷಿ ಜಮೀನು ಖರೀದಿಸಿದ್ದಾರೆ. ಶಾಲಾ, ಕಾಲೇಜು, ಲೇಔಟ್ ಎಲ್ಲದರಲ್ಲಿ ಬೀದರ್ ಜಿಲ್ಲೆಯವರು ಹೂಡಿಕೆ ಮಾಡಿದ್ದಾರೆ. ಮಾಡುತ್ತಿದ್ದಾರೆ.

ಬದಲಾಗಲಿದೆ ಬೀದರ್ ಚಹರೆ

ಎಲ್ಲವೂ ಅಂದುಕೊಂಡಂತೆ ಇಂಡಸ್ಟ್ರಿಯಲ್ ಟೌನ್ಶಿಪ್ ನಿರ್ಮಾಣವಾದರೆ ಬೀದರ್ ಚಹರೆ ಬದಲಾಗಲಿದೆ. ಅದರಲ್ಲೂ ಬೀದರ್ ನಗರ ಹಾಗೂ ಜಹೀರಾಬಾದ್ಗೆ ಹೊಂದಿಕೊಂಡಿರುವ ಸ್ಥಳಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ.

ಹೈದರಾಬಾದ್ನಲ್ಲಿ ಆಸ್ಪತ್ರೆ ಖರ್ಚು ವೆಚ್ಚ ಅಧಿಕ ಇರುವುದರಿಂದ ಜಹೀರಾಬಾದ್ ಸುತ್ತಮುತ್ತಲಿನ ಜನ ಬೀದರ್ಗೆ ಬಂದು ಚಿಕಿತ್ಸೆ ಪಡೆದುಕೊಂಡು ಹೋಗುವುದು ಮೊದಲಿನಿಂದಲೂ ಸಾಮಾನ್ಯ. ಟೌನ್ಶಿಪ್ ನಿರ್ಮಾಣದಿಂದ ಆಸ್ಪತ್ರೆಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಇದರೊಂದಿಗೆ ಶಾಲಾ, ಕಾಲೇಜುಗಳು, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲದರ ಬೆಳವಣಿಗೆಗೆ ಕಾರಣವಾಗಲಿದೆ. ಜೊತೆಗೆ ಅಲ್ಲಿನ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುತ್ತಿವವರು ನಿತ್ಯ ಬೀದರ್ನಿಂದ ಹೋಗಿ ಬರುತ್ತಾರೆ. ಅದು ಕೂಡ ತಪ್ಪಲಿದೆ.

ಟೌನ್ಶಿಪ್ನಿಂದ ಪರೋಕ್ಷ ಹಾಗೂ ಅಪರೋಕ್ಷವಾಗಿ ಸ್ಥಳೀಯರಿಗೆ ಒಂದಿಲ್ಲೊಂದು ರೀತಿಯ ಉದ್ಯೋಗಗಳು ಸಿಗಲಿವೆ. ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವವರ ಸಂಖ್ಯೆಯೂ ಹೆಚ್ಚಾಗಲಿದೆ. ಇದರಿಂದ ಸ್ಥಳೀಯ ಆದಾಯದಲ್ಲಿ ಹೆಚ್ಚಳವಾಗಲಿದೆ. ಈಗಾಗಲೇ ಬೀದರ್ ಮಹಾನಗರ ಪಾಲಿಕೆಯಾಗಿದ್ದು, ಜನರ ಹೆಚ್ಚಿನ ಓಡಾಟದಿಂದ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಬೇಕಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-33-813882442

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.