ಜನವಾಡ: ಬೀದರ್ ತಾಲ್ಲೂಕಿನ ಜನವಾಡ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.

ಗ್ರಾಮದ ಮನೆ ಮನೆಗೆ ಶುದ್ಧ ನೀರು ಪೂರೈಸಲು ಎರಡೂವರೆ ವರ್ಷದ ಹಿಂದೆ ಆರಂಭಿಸಿದ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮನೆಗಳ ಮುಂದೆ ಅಳವಡಿಸಿದ ನಲ್ಲಿಗಳಲ್ಲಿ ಹನಿ ನೀರು ಹರಿದಿಲ್ಲ.

2023ರ ಅಕ್ಟೋಬರ್ 16 ರಂದು ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2024ರ ಜುಲೈನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಾಗೆ ಆಗಿಲ್ಲ. ಗುತ್ತಿಗೆದಾರ ಹಾಗೂ ಆಡಳಿತದ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಶುದ್ಧ ನೀರಿಗಾಗಿ ಈಗಲೂ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ 1,695 ಮನೆಗಳಿಗೆ ಕಾರ್ಯಾತ್ಮಕ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಕಾಮಗಾರಿಯ ಅಂದಾಜು ಮೊತ್ತ ₹5 ಕೋಟಿ ಇದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಲಾ ₹2.25 ಕೋಟಿ ಪಾಲು ಮತ್ತು ಸಮುದಾಯದ ವಂತಿಕೆ ₹50 ಲಕ್ಷ ಇದೆ.

ಯೋಜನೆಯಡಿ ಗ್ರಾಮದಲ್ಲಿ ಪೈಪ್ಲೈನ್ ಹಾಕಲಾಗಿದೆ. ಮನೆಗಳ ಮುಂದೆ ನಲ್ಲಿ ಕೂಡಿಸಲಾಗಿದೆ. ಆದರೆ, ಕೆರೆ ಕೆಳಗಡೆ ತೋಡಿದ ಬಾವಿಯಿಂದ ಪೊಲೀಸ್ ಠಾಣೆ ಸಮೀಪ ಕಟ್ಟಲಾದ ಎರಡು ನೀರಿನ ಟ್ಯಾಂಕ್ ವರೆಗೆ ಪೈಪ್ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಾಗಿಲ್ಲ.

ರಸ್ತೆ, ಚರಂಡಿಗಾಗಿ ಅಗೆದಿದ್ದರಿಂದ ಅಲ್ಲಲ್ಲಿ ಪೈಪ್ಲೈನ್ಗಳು ಹಾಳಾಗಿವೆ. ಹಿಂದೆ ಪೈಪ್ಲೈನ್ಗಾಗಿ ಅಗೆದ ರಸ್ತೆಯನ್ನೂ ಸರಿಪಡಿಸಲಾಗಿಲ್ಲ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರುತ್ತಾರೆ ಗ್ರಾಮಸ್ಥರು.

ಜಲ ಜೀವನ ಮಿಷನ್ ಯೋಜನೆ ನೀರು ಇನ್ನೂ ಬಂದಿಲ್ಲ. ಗ್ರಾಮ ಪಂಚಾಯಿತಿ ನಲ್ಲಿಗೂ ನಿತ್ಯ ನೀರು ಬರುತ್ತಿಲ್ಲ. ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇದರಿಂದ ಗ್ರಾಮದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

ಜನತಾ ಕಾಲೊನಿ, ಅಶೋಕ ನಗರ, ಬಾಗವಾನ್ ಗಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರದೇಶ ಮತ್ತಿತರ ಕಡೆ ನೀರಿನ ಸಮಸ್ಯೆ ಇದೆ. ಜನ ಸುಡು ಬಿಸಿಲಲ್ಲೇ ಪೊಲೀಸ್ ಠಾಣೆ ಬಳಿಯ ನಲ್ಲಿಗೆ ಹೋಗಿ ತಲೆ ಮೇಲೆ ಕೊಡ ಹೊತ್ತುಕೊಂಡು ನೀರು ತರಬೇಕಾಗಿದೆ ಎಂದು ದ್ರೌಪದಿ ಕಡ್ಡೆನೋರ, ಪೋಚಮ್ಮ, ದೇವ್, ಜುಬೇರ್ ಹಾಗೂ ಇತರರು ತಿಳಿಸುತ್ತಾರೆ.

ಗ್ರಾಮದಲ್ಲಿ ಅನೇಕರು ನಲ್ಲಿಗಳಿಗೆ ಮೋಟರ್ ಅಳವಡಿಸುತ್ತಿದ್ದಾರೆ. ಇದರಿಂದ ಅನೇಕ ಕಡೆಗಳಲ್ಲಿ ನೀರು ಬರುತ್ತಿಲ್ಲ ಎಂದು ದೂರುತ್ತಾರೆ.

ಸಂಬಂಧಪಟ್ಟವರು ಕೂಡಲೇ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ.

ಗ್ರಾಮ ಪಂಚಾಯಿತಿಯಿಂದ ನಾಲ್ಕು ಕೊಳವೆಬಾವಿಗಳ ಫ್ಲಶಿಂಗ್ ಮಾಡಿಸಲಾಗಿದೆ. ಯಾವುದೇ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾದರೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸುದೇಶಕುಮಾರ ಕೊಡ್ಡೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-33-170425735

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.