ಕಮಲನಗರ: ತಾಲ್ಲೂಕಿನ ತೋರಣಾ ಗ್ರಾಮದ ವಾರ್ಡ್ ನಂ.3ರಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜು ಆಗದ ಕಾರಣ ಬಡಾವಣೆ ಜನರು ಪರದಾಡುತ್ತಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಗುರುವಾರ ಜನರು ತಾಪಂ ಇಒ ಹಣಮಂತರಾಯ ಕೌಟಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜಲಜೀವನ ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ವಾಟರ್ಮ್ಯಾನ್ ನಲ್ಲಿಗಳಿಗೆ ನೀರು ಹರಿಸದೆ ಇರುವುದರಿಂದ ಕುಡಿಯುವ ನೀರು ಸಮಸ್ಯೆ ಎದುರಾಗಿದೆ. ಈ ಬಗ್ಗೆ ವಿಚಾರಿಸಿದರೆ ಸೂಕ್ತ ಉತ್ತರ ನೀಡುತ್ತಿಲ್ಲ. ಹೀಗಾಗಿ ಕಳೆದ 3 ತಿಂಗಳಿನಿಂದ ಸಮರ್ಪಕ ನೀರು ಸರಬರಾಜು ಮಾಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

ಹನಿ ನೀರಿಗಾಗಿ ಪರದಾಡುತ್ತಿದ್ದು, ಮಕ್ಕಳು, ಮಹಿಳೆ ಮತ್ತು ವೃದ್ದರು ಖಾಲಿ ಕೊಡಗಳನ್ನು ಹೊತ್ತು ನೀರು ಸಂಗ್ರಹಿಸಲು ಅಲೆದಾಡುತ್ತಿದ್ದಾರೆ. ತಕ್ಷಣ ಸಮರ್ಪಕ ನೀರು ಸರಬರಾಜು ಮಾಡಿ ಸಮಸ್ಯೆಯನ್ನು ಬಗೆ ಹರಿಸುವಂತೆ ಬಡಾವಣೆ ಜನರು ಆಗ್ರಹಿಸಿದ್ದಾರೆ.

ರಾಮ ಸಾಗರ, ಉಮೇಶ ಪಡಸಾಲೆ, ಮುರಳಿ ಭೋಸಲೆ, ರಾಜಕುಮಾರ ಪಡಸಾಲೆ, ದತ್ತು ಭೋಸ್ಲೆ, ಸುಲೋಚನಾ ಭೋಸ್ಲೆ, ಸುನೀತಾ, ಮಹಾದೇವಿ ಪಡಸಾಲೆ, ಚಿನ್ನಮ್ಮ ಪಡಸಾಲೆ, ದಾದಾರಾವ ಭೋಸ್ಲೆ, ಅನುರಾಧಾ ಗಣಪತಿ, ಸುಮನ ಭರತ, ಸುಭಾಷ ಖಂಡು, ಲಕ್ಷ್ಮಿಬಾಯಿ ಸುಭಾಷ, ತಾನಾಜಿ, ಉಷಾ ಭೋಸ್ಲೆ, ವೈಜಿನಾಥ ಹಾಗೂ ಇನ್ನಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-33-2144844235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.