ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಪರಿಹಾರ ನಿಧಿಗೆ ₹5 ಲಕ್ಷ ದೇಣಿಗೆ

Last Updated 10 ಏಪ್ರಿಲ್ 2020, 14:24 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಕರ್ನಾಟಕ ರಾಷ್ಟ್ರೀಯ ಶಿಕ್ಷಣ(ಕೆಆರ್‍ಇ) ಸಂಸ್ಥೆಯು ಮುಖ್ಯಮಂತ್ರಿ ಕೋವಿಡ್ 19 ಪರಿಹಾರ ನಿಧಿಗೆ ₹5 ಲಕ್ಷ ದೇಣಿಗೆ ನೀಡಿದೆ.

ನಗರದಲ್ಲಿ ಶುಕ್ರವಾರ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಅವರು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರಿಗೆ ಚೆಕ್ ಹಸ್ತಾಂತರಿಸಿದರು.

ಕೆಆರ್‌ಇ ಸಂಸ್ಥೆಯು ಸದಾ ಸಾಮಾಜಿಕ ಕಾಳಜಿಯನ್ನು ಮೆರೆಯುತ್ತ ಬಂದಿದೆ. ಕೋವಿಡ್ 19 ನಿಂದ ದೇಶ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಮಹಾಮಾರಿಯ ತಡೆಗೆ ದೇಣಿಗೆ ನೀಡಿದೆ ಎಂದು ಅವರು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಸಿದ್ಧರಾಮ ಪಾರಾ, ಕಾರ್ಯದರ್ಶಿ ಬಸವರಾಜ ಜಾಬಶೆಟ್ಟಿ, ನ್ಯಾಸ್ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಕಾರ್ಯದರ್ಶಿ ಶಿವಶಂಕರ ಬಿ. ಶೆಟಕಾರ, ನ್ಯಾಸಧಾರಿಗಳಾದ ಪ್ರಭುಶೆಟ್ಟಿ ಮುದ್ದಣ್ಣ, ಆಡಳಿತ ಮಂಡಳಿ ಸದಸ್ಯರಾದ ಡಿ.ವಿ. ಸಿಂದೋಲ್, ಡಾ.ಎಂ.ಎ. ಶೇರಿಕಾರ, ಚಂದ್ರಕಾಂತ ಶೆಟಕಾರ, ಮಲ್ಲಿಕಾರ್ಜುನ ಹತ್ತಿ, ಸತೀಶ ಪಾಟೀಲ, ಶಿವಾನಂದ ಗಾದಗಿ ಹಾಗೂ ಮಡಿವಾಳಪ್ಪ ಗಂಗಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT