ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಮೆಹಕರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ಕೊರತೆಯಿಂದ ಆರೋಗ್ಯ ಸೇವೆ ಕುಂಠಿತಗೊಂಡಿದ್ದು, ರಾತ್ರಿ ವೇಳೆಯ ತುರ್ತು ಚಿಕಿತ್ಸೆ ಸ್ಥಗಿತಗೊಂಡಿದೆ. ಇದರಿಂದ ಗ್ರಾಮೀಣ ಭಾಗದ ಬಡ ರೋಗಿಗಳು ಚಿಕಿತ್ಸೆಗಾಗಿ ದೂರದ ಪಟ್ಟಣಗಳಿಗೆ ಅಲೆದಾಡುವಂತಾಗಿದೆ.

ಸುಮಾರು ₹4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಆರೋಗ್ಯ ಕೇಂದ್ರದಲ್ಲಿ ಲೇಬರ್ ವಾರ್ಡ್, ಸಾಮಾನ್ಯ ವಾರ್ಡ್, ಮೈನರ್ ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಶಾಲೆ, ಫಾರ್ಮಸಿ, ಕ್ಷ-ಕಿರಣ ಘಟಕ, ದಂತ ಚಿಕಿತ್ಸಾ ವಿಭಾಗ ಮತ್ತು ಸಿಬ್ಬಂದಿ ವಸತಿಗೃಹ ಸೇರಿದಂತೆ ಹಲವು ಸೌಲಭ್ಯಗಳಿವೆ. ಆದರೆ ಅಗತ್ಯ ವೈದ್ಯರು ಮತ್ತು ಸಿಬ್ಬಂದಿ ಇಲ್ಲದ ಕಾರಣ ಕಟ್ಟಡ ಮಾತ್ರ ಭವ್ಯವಾಗಿದ್ದು, ಸಮರ್ಪಕ ಸೇವೆ ಲಭ್ಯವಾಗುತ್ತಿಲ್ಲ.

ಮೆಹಕರ ಗ್ರಾಮದಲ್ಲಿ ಸುಮಾರು 8 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು, ನಾರದಾ ಸಂಗಮ, ಬೊಳೆಗಾಂವ ಸೇರಿದಂತೆ ಸಾಯಗಾಂವ ಹೋಬಳಿಯ 15ಕ್ಕೂ ಹೆಚ್ಚು ಗ್ರಾಮಗಳ ನಿವಾಸಿಗಳು ಈ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಆದರೆ ಪ್ರಸ್ತುತ ಆಸ್ಪತ್ರೆಯಲ್ಲಿ ಒಬ್ಬ ಮಹಿಳಾ ಸ್ಟಾಫ್ ನರ್ಸ್ ಮಾತ್ರ ಹಗಲು ವೇಳೆ ಸೇವೆ ನೀಡುತ್ತಿದ್ದಾರೆ. ಸಂಜೆ 6 ಗಂಟೆಯ ನಂತರ ಆಸ್ಪತ್ರೆ ಮುಚ್ಚಲಾಗುತ್ತಿದ್ದು, ಗರ್ಭಿಣಿಯರು, ಬಾಣಂತಿಯರು, ಅಪಘಾತಕ್ಕೊಳಗಾದವರು ಹಾಗೂ ವಿಷಜಂತುಗಳ ಕಡಿತಕ್ಕೆ ಒಳಗಾದವರು ತುರ್ತು ಚಿಕಿತ್ಸೆಗಾಗಿ ಭಾಲ್ಕಿ, ಬಸವಕಲ್ಯಾಣ ಅಥವಾ ನೆರೆಯ ಮಹಾರಾಷ್ಟ್ರದ ಆಸ್ಪತ್ರೆಗಳಿಗೆ ತೆರಳಬೇಕಾಗಿದೆ.

ಬೇಸಿಗೆಯ ತಾಪಮಾನ ಏರಿಕೆಯಿಂದ ಜ್ವರ, ಕೆಮ್ಮು, ತಲೆನೋವು, ಹೊಟ್ಟೆನೋವು ಸೇರಿದಂತೆ ಸಾಮಾನ್ಯ ಕಾಯಿಲೆಗಳು ಹೆಚ್ಚಾಗಿವೆ. ವೈದ್ಯರ ಕೊರತೆಯಿಂದ ಶುಶ್ರೂಷಕಿಯರೇ ಪ್ರಾಥಮಿಕ ಚಿಕಿತ್ಸೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗ ಉಲ್ಬಣಗೊಂಡರೆ ರೋಗಿಗಳನ್ನು ತಕ್ಷಣ ತಾಲ್ಲೂಕು ಆಸ್ಪತ್ರೆಗೆ ಕಳುಹಿಸುವುದೇ ಏಕೈಕ ಮಾರ್ಗವಾಗಿದೆ.

ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ, ತಜ್ಞ ವೈದ್ಯರು, ಎಂ.ಬಿ.ಬಿ.ಎಸ್ ವೈದ್ಯರು, ದಾದಿಯರು, ಕ್ಷ-ಕಿರಣ ತಂತ್ರಜ್ಞರು, ಫಾರ್ಮಸಿಸ್ಟ್, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿ ಇವೆ. ಹೀಗಾಗಿ 24x7 ಆರೋಗ್ಯ ಸೇವೆ ಕಾಗದದಲ್ಲೇ ಉಳಿದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಭಾಗದಲ್ಲಿ ರಸ್ತೆ ಅಪಘಾತ, ವಿಷಜಂತುಗಳ ಕಡಿತ, ಹೃದಯಾಘಾತ ಹಾಗೂ ಹೆರಿಗೆ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಯ ಅವಶ್ಯಕತೆ ಹೆಚ್ಚಿದೆ. ಆದರೆ ಸ್ಥಳೀಯವಾಗಿ ಸಮರ್ಪಕ ವೈದ್ಯಕೀಯ ನೆರವು ಸಿಗದ ಕಾರಣ ಬಡ ಕುಟುಂಬಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿ ಹೆಚ್ಚುವರಿ ವೆಚ್ಚ ಭರಿಸುವಂತಾಗಿದೆ.

‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಆಸ್ಪತ್ರೆ ಜನರಿಗೆ ನಿಜವಾದ ಆಸರೆಯಾಗಬೇಕಾದರೆ ಕಾಯಂ ವೈದ್ಯರ ನೇಮಕ, ಅಗತ್ಯ ಸಿಬ್ಬಂದಿ ಭರ್ತಿ, ವಸತಿಗೃಹ ನವೀಕರಣ ಮತ್ತು ನಿರಂತರ ಆಂಬುಲೆನ್ಸ್ ಸೇವೆ ಒದಗಿಸುವುದು ತುರ್ತು ಅಗತ್ಯವಾಗಿದೆ. ಗ್ರಾಮೀಣ ಆರೋಗ್ಯ ವ್ಯವಸ್ಥೆ ಬಲಪಡಿಸುವುದಾಗಿ ಹೇಳುತ್ತಿರುವ ಸರ್ಕಾರ ಈ ಕೇಂದ್ರದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-33-1238855018

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.