ಬೀದರ್: ‘ಸಂಗೀತ ಮತ್ತು ಸಾಹಿತ್ಯ ಮನುಷ್ಯನ ಮನಸ್ಸಿಗೆ ಶಾಂತಿ, ತೃಪ್ತಿ ಹಾಗೂ ನೆಮ್ಮದಿ ನೀಡುವ ಅವಿಭಾಜ್ಯ ಅಂಗಗಳಾಗಿವೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು.

ಮಂದಾರ ಕಲಾವಿದರ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ, ಗೌರವ ಸನ್ಮಾನ ಹಾಗೂ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ ಮತ್ತು ಸಂಗೀತ ಕೇವಲ ಅಕ್ಷರಗಳಲ್ಲ, ಅವು ಭಾವನಾತ್ಮಕವಾಗಿ ಬೆಸೆಯುವ ಸಂಬಂಧಗಳಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿ ಮಾಣಿಕ್ ನೇಳಗೆರೆ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಕಾವ್ಯ ಪರಂಪರೆಗೆ ಸಮೃದ್ಧ ಇತಿಹಾಸವಿದೆ. ಪಂಪ, ರನ್ನ, ವಚನ ಸಾಹಿತ್ಯ ಹಾಗೂ ದಾಸರ ಕೀರ್ತನೆಗಳು ಕಾವ್ಯ ಲೋಕಕ್ಕೆ ಬೆಳಕು ಹರಿಸಿವೆ. ಅವುಗಳ ಅಧ್ಯಯನದಿಂದ ಕವಿ-ಕವಯತ್ರಿಯರು ಸಾರ್ಥಕ ಕಾವ್ಯಗಳನ್ನು ರಚಿಸಲು ಸಾಧ್ಯವಾಗುತ್ತದೆ. ಅಧ್ಯಯನ ಮತ್ತು ಅನುಭವಗಳಿಂದ ಪಕ್ವವಾದ ಸಾಹಿತ್ಯ ಹೊರಹೊಮ್ಮುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ರಘುಶಂಖ ಭಾತಂಬ್ರಾ ಮಾತನಾಡಿ, ಸಂಗೀತವೆಂಬುದು ಧ್ವನಿ ಮತ್ತು ತರಂಗಗಳಿಂದ ಕೂಡಿದ ಆಲಾಪವಾಗಿದ್ದು, ಅದನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದರು.

ಸಂಜೀವಕುಮಾರ್ ಅತಿವಾಳೆ, ಶಂಭುಲಿಂಗ ವಾಲ್ದೊಡ್ಡಿ, ಪ್ರಾಚಾರ್ಯ ಅಶೋಕ ಬೂದಿಹಾಳ, ಬಾಬುರಾವ ಗೊಂಡ ಉಪಸ್ಥಿತರಿದ್ದರು. ಕಿರಣ್ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಎಂ.ಜಿ. ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕವಿಗೋಷ್ಠಿಯಲ್ಲಿ ಶೈಲಜಾ ಹುಡಗಿ, ವೀರೇಶ್ವರಿ ಮೂಲಗೆ, ಬಸವಪ್ರಕಾಶ ಕೋಡಂಬಲ್, ವಿನುತಾ ಹಿರೇಮಠ, ಓಂಕಾರ್ ಪಾಟೀಲ, ಶ್ರೀದೇವಿ ಪಾಟೀಲ ಮತ್ತಿತರರು ಸ್ವರಚಿತ ಕವನ ವಾಚಿಸಿದರು. ಬಾಲಾಜಿ ಕುಂಬಾರ, ಧರ್ಮೇಂದ್ರ ಪೂಜಾರಿ, ಶ್ರೇಯಾ ಮಹೀಂದ್ರಕರ್, ಕಲ್ಲಪ್ಪ ಚನ್ನಬಸಪ್ಪ ಮಲ್ಲಿಗೆವಾಡ (ಧಾರವಾಡ), ಮಲ್ಲಿಕಾರ್ಜುನ ರಾಂಪುರೆ, ಮಕ್ತುಂಬಿ, ಗಂಗಮ್ಮ ಕೂಡ್ಲಿಕರ್, ಅಂಕಿತಾ ಬಚ್ಚಣ್ಣ, ಯೋಗೇಂದ್ರ ಯದಲಾಪುರೆ, ಶಿಲ್ಪಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಆಸ್ತಾ, ಅವಿಷ್ಕಾ ಹಾಗೂ ನಿರೂಪಮ ನೃತ್ಯ ಪ್ರದರ್ಶಿಸಿದರು.

ದೇವದಾಸ್ ಜೋಶಿ, ಸುನೀತಾ ಬಿರಾದಾರ ಹಾಗೂ ಯೋಗೇಂದ್ರ ಯದಲಾಪುರೆ ಕಾರ್ಯಕ್ರಮ ನಿರೂಪಿಸಿದರು. ಆರ್.ಎಸ್. ಬಿರಾದಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-33-1312168896

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.