ಭಾಲ್ಕಿ: ‘ಸಮಾಜದ ಅಭಿವೃದ್ಧಿಯಲ್ಲಿ ನೇಕಾರ ಸಮುದಾಯದ ಕೊಡುಗೆ ಅನನ್ಯವಾಗಿದೆ. ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿ ತಾಲ್ಲೂಕು ನೇಕಾರ(ಜಾಡರ್) ಸಮುದಾಯದ ವತಿಯಿಂದ ಏರ್ಪಡಿಸಿದ್ದ ದೇವರ ದಾಸಿಮಯ್ಯ ದೇಗುಲ ಮತ್ತು ಭವನ ನಿರ್ಮಾಣಕ್ಕೆ ಗುದ್ದುಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವ ಈ ಸಮುದಾಯದ ಪ್ರಗತಿಗೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ ವೈಯಕ್ತಿಕವಾಗಿ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ರಾಚಮ್ಮ ನಾಗಭೂಷಣ ಮಾಮಡಿ ಅವರು ತಮ್ಮ ವೈಯಕ್ತಿಕ ನಿವೇಶನವನ್ನು ದೇವರ ದಾಸಿಮಯ್ಯ ಭವನಕ್ಕೆ ದೇಣಿಗೆ ನೀಡಿದರು.

ತಾಲ್ಲೂಕು ನೇಕಾರ ಸಮಾಜದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ, ಶೃತಿ ಪಾಟೀಲ, ಪ್ರಮುಖರಾದ ಬಾಬುರಾವ್ ಖ್ಯಾಡೆ, ಚಂದ್ರಕಾಂತ ಹಿಪ್ಪರಗೆ, ರೇವಣಸಿದ್ದ ಗೌಡನೂರ, ರಾಜಶೇಖರ ಪಾಟೀಲ, ಸಚಿನ್ ಕಾಡಾದೆ, ರೇವಣಪ್ಪ ಜಾಡರ್, ಬಸವರಾಜ ಧೂಮ್ಮನಸುರೆ, ಓಂಪ್ರಕಾಶ ಪಾಟೀಲ, ಮಲ್ಲಿಕಾರ್ಜುನ, ಚಂದ್ರಕಾಂತ, ಧೂಳಪ್ಪ ಹುಣಜೆ, ಬಸವರಾಜ ಧುಮನಸೂರೆ, ವೈಜಿನಾಥ, ನಿತಿನ ಶಿವರಾಜ, ಸಂಗಶೆಟ್ಟಿ, ಗಿರೀಶ ಸಿದ್ರಾಮಪ್ಪ, ಸಂಗಮೇಶ, ಸತೀಶ, ಅಣೇಪ್ಪ, ಗೀತಾ, ಸಂತೋಷಿ, ಅಮೃತಾ, ಮಹೇಶ್ವರಿ, ಪುಷ್ಪಾ, ಚಂದ್ರಕಲಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-33-970866972

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.