ಬೀದರ್: ನಗರದ ಸಂಗಮೇಶ್ವರ ಕಾಲೊನಿಯ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ₹19.23 ಲಕ್ಷ ಮೌಲ್ಯದ 38.476 ಕೆಜಿ ಗಾಂಜಾ ಜಪ್ತಿ ಮಾಡಿರುವ ಇಲ್ಲಿನ ಗಾಂಧಿ ಗಂಜ್ ಠಾಣೆ ಪೊಲೀಸರು, ಒಬ್ಬ ಮಹಿಳೆಯನ್ನು ಶುಕ್ರವಾರ ಬಂಧಿಸಿದ್ದಾರೆ.

ಯಾಸ್ಮೀನ್ ನಾಝ್ ಬಂಧಿತ ಮಹಿಳೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ನಲ್ಲಿ ಸುತ್ತಿ 12 ಪ್ಯಾಕೆಟ್ಗಳನ್ನು ಮಾಡಿ ಇಡಲಾಗಿತ್ತು. ಔರಾದ್ ತಾಲ್ಲೂಕಿನ ಜಂಬಗಿ ತಾಂಡಾದ ವ್ಯಕ್ತಿ ಬಳಿ ಕಡಿಮೆ ಬೆಲೆಗೆ ಖರೀದಿಸಿ, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಂಗ್ರಹಿಸಿ ಇಡಲಾಗಿತ್ತು. ಎನ್ಡಿಪಿಎಸ್ ಕಾಯ್ದೆ ಅಡಿ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಗೆ ನ್ಯಾಯಾಂಗ ಬಂಧನವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಗಾಂಧಿ ಗಂಜ್ ಠಾಣೆ ಪಿಐ ಆನಂದರಾವ್, ಸೆನ್ ಪೊಲೀಸ್ ಠಾಣೆ ಡಿವೈಎಸ್ಪಿ ಎಸ್.ಎನ್. ಸನಾದಿ, ಬೀದರ್ ಉಪವಿಭಾಗದ ಡಿವೈಎಸ್ಪಿ ದೂದಪೀರ್ ಹುಸೇನ್ ಸಾಬ್ ಮುಲ್ಲಾ, ಅಬಕಾರಿ ಇಲಾಖೆಯ ಡಿವೈಎಸ್ಪಿ ಆನಂದ ಉಕಲಿ, ಪೊಲೀಸ್ ಸಿಬ್ಬಂದಿ ಸಂಜುಕುಮಾರ, ಗಂಗಾಧರ, ಶಿವಲೀಲಾ ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.