ಬೀದರ್: ಕಾಳಸಂತೆಯಲ್ಲಿ ಅಕ್ರಮವಾಗಿ ಸಿಲಿಂಡರ್ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಜನವಾಡ ಠಾಣೆ ಪೊಲೀಸರು, 105 ಸಿಲಿಂಡರ್ಗಳನ್ನು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ.

‘ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಔರಾದ್ ರಸ್ತೆಯಲ್ಲಿ ಎರಡು ಗೂಡ್ಸ್ ವಾಹನಗಳಲ್ಲಿ ಅಕ್ರಮವಾಗಿ ಸಿಲಿಂಡರ್ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಜನವಾಡ ಠಾಣೆ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿ, ಸಿಲಿಂಡರ್ ಸಮೇತ ನಾಲ್ವರನ್ನು ಬಂಧಿಸಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

₹2.55 ಲಕ್ಷ ಮೌಲ್ಯದ ಸಿಲಿಂಡರ್ಗಳು, ₹16 ಲಕ್ಷ ಮೌಲ್ಯದ ಅಶೋಕ್ ಲೇಲ್ಯಾಂಡ್ ಹಾಗೂ ಟಾಟಾ ಏಸ್ ವಾಹನಗಳು ಸೇರಿ ಒಟ್ಟು ₹18.55 ಲಕ್ಷ ಬೆಲೆಬಾಳುವ ಆಸ್ತಿ ಜಪ್ತಿ ಮಾಡಲಾಗಿದೆ. ಈ ಸಂಬಂಧ ಜನವಾಡ ಠಾಣೆಯಲ್ಲಿ ನಾಲ್ವರು ಆರೋಪಿಗಳು ಹಾಗೂ ನಾಲ್ಕು ಗ್ಯಾಸ್ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.

ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿಯಿಂದ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲವರು ಪರಿಸ್ಥಿತಿಯ ಲಾಭ ಪಡೆಯಲು ಅಕ್ರಮ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜನವಾಡ ಠಾಣೆಯ ಪ್ರಭಾರ ಎಎಸ್ಐ ವಿಶ್ವನಾಥ್, ಸಿಬ್ಬಂದಿ ವಿಜಯಕುಮಾರ್, ಶಿವಕುಮಾರ್, ಶಾಂತಕುಮಾರ್, ಬೀದರ್ ಡಿಎಸ್ಬಿ ಘಟಕದ ಗುಂಡಪ್ಪ, ಸಂತೋಷ್, ಆಹಾರ ಇಲಾಖೆಯ ನಿರೀಕ್ಷಕ ಶ್ರೀನಿವಾಸ್ ಕಾರ್ಯಾಚರಣೆ ನಡೆಸಿದ್ದಾರೆ ಎಂದು ವಿವರಿಸಿದರು.

ಡಿವೈಎಸ್ಪಿ ದೂದ್ಪೀರ್ ಹುಸೇನ್ಸಾಬ್ ಮುಲ್ಲಾ, ಪಿಐ ಹನುಮರೆಡ್ಡೆಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.