ಬೀದರ್: ಮುಂಗಾರು ಪೂರ್ವ ಸುರಿದ ಭಾರಿ ಮಳೆಗೆ ನಗರದ ‘ಬಣ್ಣ’ ಮತ್ತೊಮ್ಮೆ ಬಟಾ ಬಯಲಾಗಿದೆ.

ಮಂಗಳವಾರ ತಡರಾತ್ರಿ 2ಗಂಟೆಯಿಂದ ಬುಧವಾರ ಬೆಳಿಗ್ಗೆ 7ರ ವರೆಗೆ ಸುರಿದ ಐದು ಗಂಟೆಗಳ ಸತತ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿದಿದೆ. ಚರಂಡಿಗಳೆಲ್ಲ ಉಕ್ಕಿ ಹರಿದಿವೆ. ಕೆಲವೆಡೆ ನೀರು ಚರಂಡಿಗಳಲ್ಲಿ ಹರಿದು ಹೋಗದೇ ರಸ್ತೆಗಳಲ್ಲಿ ಹರಿದ ಪರಿಣಾಮ ಜನ ಹಾಗೂ ವಾಹನ ಓಡಾಟಕ್ಕೆ ತೊಡಕಾಯಿತು.

ಪ್ರತಿ ಸಲ ಮಳೆ ಸುರಿದಾಗಲೆಲ್ಲಾ ಈ ಸಮಸ್ಯೆ ಉದ್ಭವಿಸುತ್ತಿದೆ. ಆದರೆ, ಮಹಾನಗರ ಪಾಲಿಕೆ ಹಿಂದಿನ ಘಟನೆಗಳಿಂದ ಎಚ್ಚೆತ್ತುಕೊಂಡಂತೆ ಕಾಣಿಸುತ್ತಿಲ್ಲ. ಇಲ್ಲವಾದರೆ ಪದೇ ಪದೇ ಈ ರೀತಿ ಘಟನೆಗಳು ಆಗುತ್ತಿರಲಿಲ್ಲ.

ರಸ್ತೆ ಮೇಲೆ ನೀರು ಜಮಾವಣೆಗೊಂಡು ಜನ ಹಾಗೂ ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆ ಸೃಷ್ಟಿಯಾಗುತ್ತಿರುವುದು ನಗರದ ಮನ್ನಳ್ಳಿ ರಸ್ತೆಯಲ್ಲಿ. ಬೊಮ್ಮಗೊಂಡೇಶ್ವರ ವೃತ್ತ, ಹಾರೂರಗೇರಿ, ವಿದ್ಯಾನಗರ, ಮೈಲೂರ್ ಕ್ರಾಸ್, ಕುಂಬಾರವಾಡ ಕ್ರಾಸ್, ಗುಂಪಾ ರಿಂಗ್ರೋಡ್ ಸರ್ಕಲ್ನಲ್ಲಿ ನೀರು ಚರಂಡಿಯಲ್ಲಿ ಹರಿದು ಹೋಗುವುದರ ಬದಲು ರಸ್ತೆ ಮೇಲೆ ಹರಿಯುತ್ತಿದೆ. ಬೈಕ್ ಸವಾರರು ಹರಸಾಹಸ ಮಾಡಿ ಓಡಾಡುವಂಥ ಪರಿಸ್ಥಿತಿ ಇದೆ. ಪಾದಚಾರಿಗಳಿಗೆ ಪಾದಚಾರಿ ಮಾರ್ಗ ಕೂಡ ಇಲ್ಲದರಿಂದ ಅವರು ನಡೆದಾಡುವುದೇ ಕಷ್ಟವಾಗುತ್ತಿದೆ. ಇದರಲ್ಲೂ ಹಿರಿಯ ನಾಗರಿಕರು, ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ.

ಬೊಮ್ಮಗೊಂಡೇಶ್ವರ ವೃತ್ತದಿಂದ ಮೈಲೂರ್ ಕ್ರಾಸ್ ವರೆಗೆ ಫುಟ್ಪಾತ್ ನಿರ್ಮಿಸಲಾಗಿದೆ. ಆದರೆ, ನೀರು ಸರಾಗವಾಗಿ ಚರಂಡಿಯೊಳಗೆ ಹರಿದು ಹೋಗುವುದಿಲ್ಲ. ಅನೇಕ ಕಡೆ ಪಾದಚಾರಿ ಮಾರ್ಗ ಅತಿಕ್ರಮಿಸಿರುವುದು ಇದಕ್ಕೆ ಮುಖ್ಯ ಕಾರಣ. ಹೀಗಿದ್ದರೂ ಈ ಕಡೆಗೆ ಪಾಲಿಕೆ ಲಕ್ಷ್ಯ ವಹಿಸಿಲ್ಲ. ಚಿದ್ರಿ ರಸ್ತೆ, ಉದಗೀರ್ ರಸ್ತೆ, ಮೈಲೂರ್ ರಸ್ತೆಯಲ್ಲೂ ಇಂಥದ್ದೇ ಸಮಸ್ಯೆ ಇದೆ. ಅದರಲ್ಲೂ ಬಿರುಸಿನ ಮಳೆಯಾದರೆ ತಗ್ಗು ಪ್ರದೇಶಗಳತ್ತ ನೀರು ಹರಿದು ಹೋಗುತ್ತದೆ. ಅಲ್ಲಿರುವವರು ತೀವ್ರ ಸಮಸ್ಯೆಗೆ ಒಳಗಾಗುತ್ತಾರೆ. ಹೋದ ವರ್ಷ ಮೈಲೂರಿನಲ್ಲಿ ಜನರ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಉಂಟಾಗಿತ್ತು.

ಇದರಿಂದ ಎಚ್ಚೆತ್ತ ಪಾಲಿಕೆ ಮೈಲೂರ್ ರಸ್ತೆ, ಉದಗೀರ್ ರಸ್ತೆ, ನ್ಯೂ ಆದರ್ಶ ಕಾಲೊನಿ ಸೇರಿದಂತೆ ಕೆಲವೆಡೆ ಚರಂಡಿಗಳನ್ನು ನಿರ್ಮಿಸಿದೆ. ಆದರೆ, ಅವುಗಳಿಗೆ ಸೂಕ್ತ ರೀತಿಯಲ್ಲಿ ಸಂಪರ್ಕ ಕಲ್ಪಿಸಿಲ್ಲ. ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇದರಿಂದಾಗಿ ಪರಿಸ್ಥಿತಿ ಸುಧಾರಣೆ ಕಂಡಿಲ್ಲ.

ಇನ್ನು, ಪ್ರತಿ ವರ್ಷ ಮಳೆಗಾಲ ಪೂರ್ವದಲ್ಲಿ ಆಯಾ ಸ್ಥಳೀಯ ಆಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತವೆ. ಆದರೆ, ಬೀದರ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂಥ ಸಿದ್ಧತೆ ಕಂಡಿಲ್ಲ. ಚರಂಡಿಗಳಲ್ಲಿ ತುಂಬಿರುವ ಹೂಳು ತೆರವುಗೊಳಿಸಿಲ್ಲ. ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಜರುಗಿಸಿಲ್ಲ. ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆಯಿಂದ ಜನಸ್ಪಂದನ ನಡೆಸಲಾಗುತ್ತಿದೆ. ಆದರೆ, ಅಲ್ಲಿ ಬಂದ ದೂರುಗಳನ್ನು ಆಧರಿಸಿ ಸಮಸ್ಯೆ ಪರಿಹರಿಸುವ ಕೆಲಸ ಇನ್ನಷ್ಟೇ ಆಗಬೇಕಿದೆ.

‘ಮನ್ನಳ್ಳಿ ರಸ್ತೆಯಲ್ಲಿ ಜನ ಹಾಗೂ ವಾಹನಗಳ ಓಡಾಟ ಅಧಿಕವಿದೆ. ಈ ಭಾಗದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಬೇಕೆಂದು ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಳೆ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಒಂದು ಮಳೆಗೆ ಇಷ್ಟೊಂದು ಅವಾಂತರ ಸೃಷ್ಟಿಯಾಗಿದೆ. ಇನ್ನಷ್ಟೇ ಮಳೆಗಾಲ ಆರಂಭವಾಗಬೇಕಿದೆ’ ಎಂದು ರಾಂಪೂರೆ ಕಾಲೊನಿ ನಿವಾಸಿ ರಾಜೇಂದ್ರ ಹೇಳಿದರು.

ಜೋರು ಮಳೆ ಮರೆಸಿದ ಬೇಸಿಗೆ

ಬಿಸಿಲಿನಿಂದ ಅಕ್ಷರಶಃ ಕಂಗೆಟ್ಟು ಹೋಗಿದ್ದ ಜಿಲ್ಲೆಯ ಜನತೆ ಬುಧವಾರ ಸುರಿದ ಮಳೆಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದೊಂದು ವಾರದಿಂದ ಅಗೊಮ್ಮೆ. ಈಗೊಮ್ಮೆ ಎಂಬಂತೆ ಮಳೆ ಸುರಿಯುತ್ತಿದೆ. ಆದರೆ, ಕಳೆದೆರಡು ತಿಂಗಳ ಕೆಂಡದಂಥ ಬಿಸಿಲಿಗೆ ನೆಲ ಕಾದ ಕಾವಲಿಯಂತಾಗಿದ್ದು, ಅದು ಏನಕ್ಕೂ ಸಾಲದೆಂಬಂತೆ ಇತ್ತು. ಅಲ್ಪ ಮಳೆಯಿಂದ ಸೆಕೆ ಹೆಚ್ಚಾಗುತ್ತಿತ್ತು. ಆದರೆ, ಮಂಗಳವಾರ ತಡರಾತ್ರಿ 2ಗಂಟೆಯಿಂದ ಬುಧವಾರ ಬೆಳಿಗ್ಗೆ 7ರ ವರೆಗೆ ಸುರಿದ ಗುಡುಗು, ಮಿಂಚು ಸಹಿತ ಭಾರಿ ಮಳೆಗೆ ಅಪಾರ ಪ್ರಮಾಣದ ನೀರು ಹರಿದಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳ ಕೆಂಡದಂಥ ಬಿಸಿಲನ್ನೂ ಸಂಪೂರ್ಣ ಮರೆಸಿದೆ. ಇಂಥದ್ದೊಂದು ದೊಡ್ಡ ಮಳೆಯ ನಿರೀಕ್ಷೆಯಲ್ಲಿ ಜನ ಕೂಡ ಇದ್ದರು.

ಜೋರು ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿದಿದೆ. ಹಲವೆಡೆ ಬಾವಿ, ಕೊಳವೆಬಾವಿಗಳಲ್ಲಿ ನೀರು ಚಿಮ್ಮಿದೆ.

ವರದಿ ಸಲ್ಲಿಕೆಗೆ ಸೂಚನೆ

ಬೀದರ್ ನಗರದ ಕೆಲವು ಕಡೆಗಳಲ್ಲಿ ರಸ್ತೆ ಮೇಲೆ ನೀರು ಸಂಗ್ರಹವಾಗುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಇದಕ್ಕೆ ಕಾರಣ ಏನೆಂಬುದರ ಬಗ್ಗೆ ವರದಿ ಸಲ್ಲಿಸಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಲವು ಕಡೆಗಳಲ್ಲಿ ಈಗಾಗಲೇ ನೀರು ಹರಿದು ಹೋಗಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಈಗಾಗಲೇ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲಿ ಜನಸ್ಪಂದನ ಆರಂಭಿಸಲಾಗಿದೆ. ಅಲ್ಲಿ ಸ್ಥಳೀಯರ ಕುಂದು ಕೊರತೆ ಆಲಿಸಿ, ಆದ್ಯತೆ ಮೇರೆಗೆ ಅವರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-33-2040025688

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.