ಬೀದರ್: ಜನಸಾಮಾನ್ಯರಿಗೆ ಪ್ರಖರ ಬಿಸಿಲಿನ ತಾಪದ ಜೊತೆಗೆ ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ.

ಸಿಲಿಂಡರ್ ಬೆಲೆ ಏರಿಕೆಯ ಬೆನ್ನಲ್ಲೇ ಹೋಟೆಲ್ನವರು ತಿಂಡಿ, ತಿನಿಸುಗಳ ಬೆಲೆ ಹೆಚ್ಚಳ ಮಾಡಿದರು. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಾದ ನಂತರ ಯಾವುದೇ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹಬಳಕೆಯ ಸಿಲಿಂಡರ್ ಬೆಲೆ ಹೆಚ್ಚಾಗಬಹುದು ಎಂಬ ಆತಂಕದಲ್ಲಿ ಜನರಿದ್ದಾರೆ.

ಇದರ ನಡುವೆಯೇ ಈಗ ತರಕಾರಿ ಸರದಿ. ಮೇ ಆರಂಭಗೊಂಡ ಬಳಿಕ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ತರಕಾರಿ ಬರುವುದು ಕಡಿಮೆಯಾಗಿದೆ. ಇದರಿಂದ ಏಕಾಏಕಿ ಬೆಲೆ ಗಗನಕ್ಕೇರಿದೆ.

ಈಗ ಹೇಳಿ ಕೇಳಿ ಮದುವೆ ಸೀಸನ್. ಈಗ ದಿನವೊಂದಕ್ಕೆ ಬೀದರ್ ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಮದುವೆಗಳು ಆಗುತ್ತಿವೆ. ಸಾಮಾನ್ಯ ದಿನಗಳಿಗಿಂತ ತರಕಾರಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಬರುವ ಪ್ರಮಾಣ ಕಡಿಮೆ ಆಗಿ, ಬೇಡಿಕೆ ಹೆಚ್ಚಿರುವುದರಿಂದ ಬೆಲೆ ದಿಢೀರ್ ಏರಿಕೆ ಕಂಡಿದೆ.

ಅದರಲ್ಲೂ ಬೀನ್ಸ್ ದರ ಒಮ್ಮೆಲೆ ಗಗನಕ್ಕೇರಿದೆ. ಏಪ್ರಿಲ್ನಲ್ಲಿ ಪ್ರತಿ ಕೆಜಿ ಬೀನ್ಸ್ ಬೆಲೆ ₹100ರಿಂದ ₹120 ಇತ್ತು. ಈಗ ಏಕಾಏಕಿ ₹380ರಿಂದ ₹400ಕ್ಕೆ ಮಾರಾಟವಾಗುತ್ತಿದೆ. ಮಿಕ್ಸ್ ಸಬ್ಜಿ, ಪುಲಾವ್ ಸೇರಿದಂತೆ ಏನೇ ಮಾಡಬೇಕಿದ್ದರೂ ಬೀನ್ಸ್ ಬೇಕು. ಅದರಲ್ಲೂ ಮದುವೆಗಳಲ್ಲಿ ಹೆಚ್ಚಾಗಿ ಬೀನ್ಸ್ ಬಳಸಲಾಗುತ್ತದೆ. ಬೀನ್ಸ್ ಬರುವುದು ಬಹಳ ಕಡಿಮೆ ಆಗಿರುವುದರಿಂದ ಒಮ್ಮೆಲೆ ಬೆಲೆ ಆಕಾಶಕ್ಕೆ ಜಿಗಿದಿದ್ದು, ಗ್ರಾಹಕರ ಜೇಬು ಸುಡುತ್ತಿದೆ.

ಇನ್ನು, ನಿಂಬೆ ಹಣ್ಣಿಲ್ಲದೇ ಅಪೂರ್ಣ ಎಂಬ ಮಾತಿದೆ. ಅದರಲ್ಲೂ ಬೇಸಿಗೆಯಲ್ಲಿ ನಿಂಬೆಗೆ ಬೇಡಿಕೆ ಹೆಚ್ಚು. ಹೀಗಾಗಿಯೇ ಬೆಲೆ ಏರಿಕೆಯಾಗಿದ್ದು, ಪ್ರತಿ ಕೆಜಿ ನಿಂಬೆ ಹಣ್ಣು ₹300ರಿಂದ ₹320ರ ವರೆಗೆ ಮಾರಾಟವಾಗುತ್ತಿದೆ.

ಪ್ರತಿ ಕೆಜಿ ಮೆಂತೆ ಪಲ್ಯ ₹160, ಸಬ್ಬಕ್ಕಿ ₹120, ಕೊತ್ತಂಬರಿ ₹120ಕ್ಕೆ ಏರಿಕೆ ಕಂಡಿದೆ. ಬಹುತೇಕ ಎಲ್ಲ ರೀತಿಯ ತರಕಾರಿ ಬೆಲೆ ಪ್ರತಿ ಕೆಜಿಗೆ ₹80ರಿಂದ ₹120ರ ವರೆಗೆ ಇದೆ. ಹಿಂದೆ ₹40ರಿಂದ ₹60ರ ಆಸುಪಾಸಿನಲ್ಲಿದ್ದವು. ಪರಿಸ್ಥಿತಿ ಹೀಗಿರುವಾಗ ಜನ ಯೋಚಿಸಿ ತರಕಾರಿ ಖರೀದಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

‘ಬಹುತೇಕ ಎಲ್ಲ ರೀತಿಯ ತರಕಾರಿ ಬರುವುದು ಕಡಿಮೆಯಾಗಿದೆ. ಅದರಲ್ಲೂ ಬೀನ್ಸ್ ಬಹಳ ಕಮ್ಮಿ ಬರುತ್ತಿದೆ. ಮೆಂತೆ ಪಲ್ಯ ಸೀಸನ್ ಮುಗಿದಿದ್ದು, ಅಲ್ಲಲ್ಲಿ ಕೆಲವರು ಫಾರ್ಮ್ಗಳಲ್ಲಿ ಬೆಳೆದಿರುವುದು ಬರುತ್ತಿದೆ. ಆದಕಾರಣ ಬೆಲೆ ಜಿಗಿದಿದೆ. ಇನ್ನಷ್ಟು ದಿನಗಳ ಕಾಲ ಬೆಲೆ ಇಳಿಯುವುದಿಲ್ಲ’ ಎಂದು ನಗರದ ಗುಂಪಾ ರಿಂಗ್ರೋಡ್ನಲ್ಲಿರುವ ತರಕಾರಿ ವ್ಯಾಪಾರಿ ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಏಪ್ರಿಲ್ನಲ್ಲಿ ನೂರು ರೂಪಾಯಿಗೆ ನಾಲ್ಕೈದು ತರಕಾರಿ ಕೊಂಡೊಯ್ಯುತ್ತಿದ್ದೆ. ಈಗ ₹100ಕ್ಕೆ ಬೀನ್ಸ್ ಕಾಲು ಕೆಜಿ ಬರುತ್ತಿದೆ. ಬೆಲೆ ಹೀಗಿರುವಾಗ ಏನು ಖರೀದಿಸುವುದು ಏನು ಬಿಡುವುದು’ ಎಂದು ಸ್ಥಳೀಯ ನಿವಾಸಿ ಅಶೋಕ್ ರೆಡ್ಡಿ ಪ್ರಶ್ನಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-33-1431827826

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.