ಬೀದರ್: ನಗರದ ಹಳೆ ಆದರ್ಶ ಕಾಲೊನಿಯ ರೈಲ್ವೆ ಲೆವೆಲ್ ಕ್ರಾಸಿಂಗ್ಗೆ ಗುರುವಾರ ಸಂಸದ ಸಾಗರ್ ಖಂಡ್ರೆ ಭೇಟಿ ನೀಡಿ, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಶೀಲಿಸಿದರು.

ಬೀದರ್ ವಾಯುಪಡೆ ತರಬೇತಿ ಕೇಂದ್ರ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ರೈಲ್ವೆ ಇಲಾಖೆ, ಬೀದರ್ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಲೆವೆಲ್ ಕ್ರಾಸಿಂಗ್ನಿಂದ ಹಳೆ ಆದರ್ಶ ಕಾಲೊನಿಯ ತಿರುವಿನ ವರೆಗೆ ಓಡಾಡಿ ನೋಡಿದರು.

ಆದರ್ಶ ಕಾಲೊನಿಯಲ್ಲಿ ಜನರ ಓಡಾಟ ಹೆಚ್ಚಾಗಿದ್ದು, ರೈಲುಗಳು ಬಂದಾಗಲೆಲ್ಲಾ ಗೇಟ್ ಹಾಕುವುದರಿಂದ ಸಮಸ್ಯೆ ಎದುರಾಗುತ್ತಿದೆ. ಸಂಚಾರ ದಟ್ಟಣೆ ಉಂಟಾಗಿ, ಜನ ಪರದಾಡುತ್ತಿದ್ದಾರೆ. ಆದಕಾರಣ ಇಲ್ಲಿ ರೈಲ್ವೆ ಕೆಳ ಸೇತುವೆ (ಆರ್ಯುಬಿ) ನಿರ್ಮಿಸುವ ಯೋಜನೆ ಇದೆ ಎಂದು ಸಾಗರ್ ಖಂಡ್ರೆ ತಿಳಿಸಿದರು.

‘ಹಳೆ ಆದರ್ಶ ಕಾಲೊನಿ ಸಮೀಪ ರೈಲ್ವೆ ಕೆಳ ಸೇತುವೆ ನಿರ್ಮಿಸಬೇಕೆನ್ನುವುದು ಜನರ ಬಹುದಿನಗಳ ಬೇಡಿಕೆಯಾಗಿದೆ. ಆದರೆ, ಕೆಲವು ಸಮಸ್ಯೆಗಳ ಕಾರಣದಿಂದಾಗಿ ತೊಡಕಾಗಿದೆ. ನಿರಂತರ ಮೇಲ್ವಿಚಾರಣೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಿ, ವಾಯುಪಡೆ, ಪುರಾತತ್ವ ಇಲಾಖೆ, ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿದ್ದೇನೆ. ಎಲ್ಲ ಇಲಾಖೆಯವರು ಸಹಕಾರ ಕೊಡುವ ಮಾತುಗಳನ್ನು ಆಡಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ರೈಲ್ವೆ ಇಲಾಖೆ, ವಾಯುಪಡೆ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-33-803864172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.